![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/57/Octopus2.jpg/640px-Octopus2.jpg&w=640&q=50)
ಆಕ್ಟೊಪಸ್
From Wikipedia, the free encyclopedia
ಆಕ್ಟೊಪಸ್ ಆಕ್ಟೋಪೋಡಾ (ಎಂಟು ಕಾಲುಗಳುಳ್ಳ) ಜಾತಿಯ ಸೆಫಾಲೋಪೋಡಾ ವರ್ಗಕ್ಕೆ ಸೇರಿದ ಜಲಚರ. ಆಕ್ಟೊಪಸ್ ಗಳಿಗೆ ಎರಡು ಕಣ್ಣುಗಳು ಮತ್ತು ನಾಲ್ಕು ಜೊತೆ ಬಾಹುಗಳಿದ್ದು, ಇತರ ಸೆಫಾಲೋಪೋಡ್ ಗಳಂತೆಯೇ ದ್ವಿಪಾರ್ಶ್ವಸಮಾನತೆ ಕಂಡುಬರುತ್ತದೆ. ಆಕ್ಟೊಪಸ್ ಗೆ ಗಟ್ಟಿಯಾದ ಕೊಕ್ಕು ಇದ್ದು, ಅದರ ಬಾಯಿ ಬಾಹುಗಳ ಕೇಂದ್ರಭಾಗದಲ್ಲಿ ಇರುತ್ತದೆ. ಸಾಮಾನ್ಯವಾಗಿ ಎಲ್ಲಾ ಆಕ್ಟೊಪಸ್ ಗಳಿಗೂ ಒಳಗಿನ ಅಥವಾ ಹೊರಗಿನ ಅಸ್ಥಿಪಂಜರವಿಲ್ಲದ ಕಾರಣ ಬಹಳ ಕಿರಿದಾದ ಜಾಗಗಳಲ್ಲೂ ಅದು ನುಸುಳಲು ಅನುಕೂಲವಾಗುತ್ತದೆ. ಆಕ್ಟೊಪಸ್ ಗಳು ಬಹಳ ಬುದ್ಧಿವಂತ ಜಲಚರಗಳು, ಪ್ರಾಯಶಃ ಅಕಶೇರುಕಗಳಲ್ಲಿಯೇ ಅತ್ಯಂತ ಬುದ್ಧಿಯುಳ್ಳವು. ಆಕ್ಟೋಪಸ್ ಗಳು ಸಮುದ್ರದ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ವಾಸಿಸುತ್ತವೆ. ಆಕ್ರಮಣಕಾರರ ವಿರುದ್ಧ ರಕ್ಷಿಸಿಕೊಳ್ಳಲು, ಅವು ಅಡಗಿಕೊಳ್ಳುತ್ತವೆ, ತಲೆ ತಪ್ಪಿಸಿಕೊಳ್ಳುತ್ತವೆ, ಒಂದು ರೀತಿಯ ಇಂಕ್ ಅನ್ನು ಉಗುಳುತ್ತವೆ, ಅಥವ ಬಣ್ಣ ಬದಲಾಯಿಸಿ ತಪ್ಪಿಸಿಕೊಳ್ಳುತ್ತವೆ. ಒಂದು ಆಕ್ಟೋಪಸ್ ಈಜುತ್ತಾ ಹೋದಂತೆ ತನ್ನ ಎಂಟು ತೋಳುಗಳನ್ನು ತನ್ನ ಹಿಂದೆ ಎಳೆದುಕೊಂಡು ಹೋಗುತ್ತದೆ. ಎಲ್ಲಾ ಆಕ್ಟೋಪಸ್ ಗಳು ವಿಷಮಯವಾದವುಗಳು, ಆದರೆ ಕೇವಲ ನೀಲಿ-ಉಂಗುರದ ಆಕ್ಟೋಪಸ್ ಗಳು ಮಾನವರಿಗೆ ಪ್ರಾಣ ಘಾತುಕವಾದುವುಗಳು.[3] ವಿಶಾಲ ಅರ್ಥದಲ್ಲಿ, ಸುಮಾರು ೩೦೦ ಮಾನ್ಯವಾದ ಆಕ್ಟೋಪಸ್ ತಳಿಗಳಿವೆ, ಇದು ಗೊತ್ತಿರುವ ಸಫೆಲೋಪಾಡ್ ತಳಿಗಳ ಒಟ್ಟು ಸಂಖ್ಯೆಯ ಮೂರನೆಯ ಒಂದು ಭಾಗಕ್ಕಿಂತಲೂ ಹೆಚ್ಚು. ಜಿನುಸ್ ಆಕ್ಟೋಪಸ್ ನಲ್ಲಿರುವ ಜೀವಿಗಳಿಗೆ ಮಾತ್ರ ಆಕ್ಟೋಪಸ್ ಎಂಬ ಪದನಾಮವನ್ನು ಉಪಯೋಗಿಸಿ ಹೆಸರಿಸಬಹುದು.
Octopus | |
---|---|
![]() | |
The Common Octopus, Octopus vulgaris. | |
Scientific classification | |
ಸಾಮ್ರಾಜ್ಯ: | Animalia |
ವಿಭಾಗ: | Mollusca |
ವರ್ಗ: | Cephalopoda |
Subclass: | Coleoidea |
ಮೇಲ್ಗಣ: | Octopodiformes |
ಗಣ: | Octopoda Leach, 1818[1] |
Suborders | |
Cirrina | |
Synonyms | |
|