![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/42/Aung_San_Suu_Kyi_17_November_2011.jpg/640px-Aung_San_Suu_Kyi_17_November_2011.jpg&w=640&q=50)
ಆಂಗ್ ಸಾನ್ ಸೂ ಕಿ
ಮ್ಯಾನ್ಮಾರ್ ರಾಜ್ಯದ ಕೌನ್ಸಿಲರ್ ಮತ್ತು ಡೆಮಾಕ್ರಸಿ ರಾಷ್ಟ್ರೀಯ ಲೀಗ್ ನಾಯಕಿ / From Wikipedia, the free encyclopedia
ಆಂಗ್ ಸಾನ್ ಸೂ ಕಿ (ಹುಟ್ಟಿದ್ದು ೧೯ ಜೂನ್ ೧೯೪೫ರಂದು[1]) ಬರ್ಮಾ ದೇಶದ ವಿರೋಧ ಪಕ್ಷದ ನಾಯಕಿ ಹಾಗೂ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಮುಖ್ಯಸ್ಥೆ ಮತ್ತು ಪ್ರಧಾನ ಕಾರ್ಯದರ್ಶಿ. ತಮ್ಮ ದೇಶದ ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರಜಾಪ್ರಭುತ್ವ ಸ್ಥಾಪಿಸಬೇಕೆಂಬ ಹೋರಾಟದಿಂದ ಅವರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದು ನೋಬೆಲ್ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದಾರೆ. ೧೯೯೦ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷ ಪಾರ್ಲಿಮೆಂಟಿನಲ್ಲಿ ೮೧ ಪ್ರತಿಶತ ಸ್ಥಾನಗಳನ್ನು ಗೆದ್ದಿತಾದರೂ ೧೯೮೯ ರಿಂದಲೇ ಸೂ ಕಿ ಅವರನ್ನು ಬಂಧನದಲ್ಲಿಟ್ಟಿದ್ದ ಅಲ್ಲಿನ ಮಿಲಿಟರಿ ಆಡಳಿತ, ಅಧಿಕಾರ ಹಸ್ತಾಂತರಕ್ಕೊಪ್ಪದೆ ಚುನಾವಣೆಯ ಫಲಿತಾಂಶವನ್ನು ಶೂನ್ಯಗೊಳಿಸಿತು. ಹೀಗಾಗಿ ಅವರು ಸುಮಾರು ಹದಿನೈದು ವರ್ಷಗಳನ್ನು ಸೆರೆಮನೆಯಲ್ಲೇ ಕಳೆದಿದ್ದಾರೆ.
![Thumb image](http://upload.wikimedia.org/wikipedia/commons/thumb/6/6c/Remise_du_Prix_Sakharov_%C3%A0_Aung_San_Suu_Kyi_Strasbourg_22_octobre_2013-18.jpg/640px-Remise_du_Prix_Sakharov_%C3%A0_Aung_San_Suu_Kyi_Strasbourg_22_octobre_2013-18.jpg)
ಆಂಗ್ ಸಾನ್ ಸೂ ಕಿ | |
---|---|
![]() | |
ಜನನ | ಜೂನ್ ೧೯, ೧೯೪೫ ಬರ್ಮಾದ ರಂಗೂನ್ |
ವೃತ್ತಿ | ಬರ್ಮಾದ ದಿ ನ್ಯಾಷನಲ್ ಲೀಗ್ ಫಾರ್ ಡೆಮೊಕ್ರಸಿ ಪಕ್ಷದ ಮುಖ್ಯಸ್ಥೆ ಮತ್ತು ಆ ದೇಶದ ಸಂಸತ್ತಿನ ವಿರೋಧ ಪಕ್ಷದ ನಾಯಕಿ |
ಬಂಧನದಲ್ಲಿರುವಾಗಲೇ ೧೯೯೧ರ ನೋಬೆಲ್ ಶಾಂತಿ ಪ್ರಶಸ್ತಿಯನ್ನೊಳಗೊಂಡು ಅನೇಕ ಜಾಗತಿಕ ಪ್ರಶಸ್ತಿಗಳು ಸಂದ ಆಂಗ್ ಸಾನ್ ಸೂ ಕಿ ವಿಶ್ವಪ್ರಸಿದ್ಧರಾದರು. ಕೆನಡಾ ದೇಶ ಸೂ ಕಿ ಅವರಿಗೆ ವಿಶ್ವದ ಕೇವಲ ಆರು ಗಣ್ಯರಿಗೆ ಮಾತ್ರ ನೀಡಲಾಗಿರುವ ಸ್ವಯಂ ಘೋಷಿತ ಪೌರತ್ವವನ್ನು ಕೂಡಾ ಉದ್ಘೋಷಿಸಿತು. ಭಾರತ ಸರ್ಕಾರ ಸಹಾ ಇವರಿಗೆ ಅಂತಾರಾಷ್ಟ್ರೀಯ ತಿಳುವಳಿಕೆಗಾಗಿನ ಪ್ರಶಸ್ತಿಯನ್ನು ಕೊಟ್ಟಿತು. ತನಗೆ ಬಂದ ಪ್ರಶಸ್ತಿಯ ಹಣವನ್ನೆಲ್ಲಾ ಸೂ ಕಿ ಅವರು ಬರ್ಮಾ ದೇಶದ ಜನರ ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿಗಾಗಿನ ನಿಧಿ ರೂಪವಾಗಿ ಪರಿವರ್ತಿಸಿದರು.