ಅಸ್ತಿಪಂಜರ
From Wikipedia, the free encyclopedia
ಪ್ರಾಣಿಯ ಶರೀರಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ ಮೂಳೆಗಳು, ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು. ಇದರಲ್ಲಿ ಎರಡು ವಿಧವಿದೆ.ಮೊದಲನೆಯದು ಬಾಹ್ಯ ಅಸ್ತಿಪಂಜರ. ಇದು ದೇಹದ ಹೊರಗಿನಿಂದ ದೇಹವನ್ನು ಆಧರಿಸುವಂತಹುದು. ಇದು ಹೆಚ್ಚಿನ ಅಕಶೇರುಕಗಳನ್ನು ಕಂಡುಬರುತ್ತಿದ್ದು, ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ. ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು. ಇವು ಕಶೇರುಕಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.