ಅಸಾಹಿ ಶಿಂಭೂನ್
From Wikipedia, the free encyclopedia
ಅಸಾಹಿ ಶಿಂಭೂನ್ ಜಪಾನ್ ದೇಶದ ಅತ್ಯಂತ ಜನಪ್ರಿಯ ಪತ್ರಿಕೆಗಳಲ್ಲೊಂದು. ಅಸಾಹಿ ಶಿಂಭೂನ್ ಎಂದರೆ ಉದಯ ಭಾಸ್ಕರ ಪತ್ರಿಕೆ ಎಂದು ಅರ್ಥ. ವಿಶೇಷ ಲೇಖನ ಪ್ರಕಟಣೆಗಳಲ್ಲಿ, ತಾಂತ್ರಿಕ ಬೆಳೆವಣಿಗೆಯಲ್ಲಿ ಇದು ಅತ್ಯಂತ ಮಹತ್ತ್ವದ್ದಾಗಿದೆ. ಪಾಶ್ಚಾತ್ಯ ದೇಶಗಳಿಂದ ತರಿಸಿಕೊಳ್ಳುವ ವಸ್ತುಗಳ ಬಗ್ಗೆ ಮಾಹಿತಿನೀಡಲು ಕೆಲವು ವ್ಯಾಪಾರಿಗಳು ಒಸಾಕ ನಗರದಲ್ಲಿ ಈ ಪತ್ರಿಕೆಯನ್ನು ಸ್ಥಾಪಿಸಿದರು (1879). ಕೆಲವು ಕಾಲದ ಮೇಲೆ ರಾಜಕಾರಣವನ್ನು ಮುಖ್ಯ ಗುರಿಯನ್ನಾಗಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಈ ಪತ್ರಿಕೆಯನ್ನು ಟೋಕಿಯೊ ನಗರಕ್ಕೆ ವರ್ಗಾಯಿಸಲಾಯಿತು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ವರ್ಗ, ವಿನ್ಯಾಸ ...
ವರ್ಗ | ದಿನ ಪತ್ರಿಕೆ |
---|---|
ವಿನ್ಯಾಸ | Broadsheet (40.6 × 54.6 cm)[1] |
ಮಾಲೀಕ | ಮಿಚಿಕೊ ಮುರಯಾಮ, ಶೊಯ್ಚಿ ಯುನೊ |
ಪ್ರಕಾಶಕ | ತಡಕಝು ಕಿಮುರ |
ಮುಖ್ಯ ಸಂಪಾದಕ | ಯೊಶಿಬುಮಿ ವಕಮಿಯ |
ಸ್ಥಾಪನೆ | 25 ಜನವರಿ 1879 (1879-01-25) |
ಭಾಷೆ | ಜಪಾನಿ ಭಾಷೆ |
ಕೇಂದ್ರ ಕಾರ್ಯಾಲಯ | ಒಸಾಕ |
ಚಲಾವಣೆ | ೭೯.೬ ಲಕ್ಷ (ಬೆಳಗಿನ ಆವೃತಿ, 2010)[2] |
ಅಧಿಕೃತ ತಾಣ | www |
Close