![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/26/XIX_Commonwealth_Games-2010_Delhi_%2528Women%25E2%2580%2599s_4x400m_Relay%2529_Sini_Jose%252C_Mandeep_Kaur%252C_Manjeet_Kaur_and_Ashwini_Akkunji_of_India_won_the_Gold_Medal%252C_at_Jawaharlal_Nehru_Stadium%252C_in_New_Delhi_on_October_12%252C_2010.jpg/640px-thumbnail.jpg&w=640&q=50)
ಅಶ್ವಿನಿ ಅಕ್ಕುಂಜಿ
From Wikipedia, the free encyclopedia
ಅಶ್ವಿನಿ ಚಿದಾನಂದ ಶೆಟ್ಟಿ ಅಕ್ಕುಂಜಿ (ಜನನ: ೭ ಅಕ್ಟೋಬರ್ ೧೯೮೭) ಒಬ್ಬರು ಉಡುಪಿ ಸಿದ್ದಪುರದ ಭಾರತೀಯ ವೇಗದ ಓಟಗಾರ್ತಿ ಕ್ರೀಡಾಪಟು, ಇವರು ೪೦೦ ಮೀಟರ್ ಓಟದಲ್ಲಿ ಪರಿಣಿತರು[1]. ಅಶ್ವಿನಿ ಅವರು ೨೦೧೦ ಏಷ್ಯನ್ ಗೇಮ್ಸ್ ನಲ್ಲಿ ಮತ್ತು ೨೦೧೦ ಕಾಮನ್ವೆಲ್ತ್ ಗೇಮ್ಸ್ ನ ೪ x ೪೦೦ ಮೀ ರಿಲೇ ತಂಡದ ಸ್ಪರ್ಧೆಯಲ್ಲಿ, ಮಂಜಿತ್ ಕೌರ್, ಮನ್ದೀಪ್ ಕೌರ್ ಮತ್ತು ಸಿನಿ ಜೋಸ್ ಜೊತೆ ಚಿನ್ನದ ಪದಕ ಗೆದ್ದರು. [2] ಚೀನಾದ ಗುವಾಂಗ್ಝೌನಲ್ಲಿ ನೆಡೆದ ೨೦೧೦ ಏಷ್ಯನ್ ಕ್ರೀಡಾಕೂಟದಲ್ಲಿ ೪೦೦ ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಪಡೆದರು.[3]. ಕರ್ನಾಟಕದ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ೨೦೧೦ರಲ್ಲಿ ಪಡೆದರು.[4]
![Thumb image](http://upload.wikimedia.org/wikipedia/commons/thumb/2/26/XIX_Commonwealth_Games-2010_Delhi_%28Women%E2%80%99s_4x400m_Relay%29_Sini_Jose%2C_Mandeep_Kaur%2C_Manjeet_Kaur_and_Ashwini_Akkunji_of_India_won_the_Gold_Medal%2C_at_Jawaharlal_Nehru_Stadium%2C_in_New_Delhi_on_October_12%2C_2010.jpg/640px-thumbnail.jpg)