ಅಲೆಕ್ಸಾಂಡರ್ ಗ್ರಹಾಂ ಬೆಲ್
From Wikipedia, the free encyclopedia
ಅಲೆಕ್ಸಾಂಡರ್ ಗ್ರಹಾಂ ಬೆಲ್ (ಮಾರ್ಚ್ ೩, ೧೮೪೭ – ಆಗಸ್ಟ್ ೨, ೧೯೨೨) ಒಬ್ಬ ಉತ್ಕೃಷ್ಟ ವಿಜ್ಞಾನಿ, ಆವಿಷ್ಕಾರಕ, ಎಂಜಿನಿಯರ್ ಮತ್ತು ಹೊಸತನದ ಪ್ರವರ್ತಕನಾಗಿದ್ದ. ಮೊದಲ ಕಾರ್ಯೋಪಯೋಗಿ ದೂರವಾಣಿಯನ್ನು ಸೃಷ್ಟಿಸಿದ ಕೀರ್ತಿ ಇವನಿಗೆ ದೊರಕಿದೆ. ಬೆಲ್ನ ತಂದೆ, ತಾತ, ಮತ್ತು ಸೋದರ ಇವರೆಲ್ಲರೂ ವಾಗ್ವೈಖರಿ ಮತ್ತು ವಾಕ್ ಶಕ್ತಿಗೆ ಸಂಬಂಧಿಸಿದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಮತ್ತು ಅವನ ತಾಯಿ ಹಾಗೂ ಹೆಂಡತಿ ಕಿವುಡರಾಗಿದ್ದುದು ಬೆಲ್ನ ಜೀವಮಾನದ ಕಾರ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತು.[1] ಕೇಳುವಿಕೆ ಮತ್ತು ವಾಕ್ ಶಕ್ತಿಯ ಕುರಿತಾದ ಅವನ ಸಂಶೋಧನೆಯು ಕೇಳುವಿಕೆಯ ಉಪಕರಣಗಳೊಂದಿಗೆ ಅವನು ಪ್ರಯೋಗವನ್ನು ಕೈಗೊಳ್ಳಲು ಕಾರಣವಾದವು. ಇದು ಅಂತಿಮವಾಗಿ, ೧೮೭೬ರಲ್ಲಿ ಬೆಲ್ ದೂರವಾಣಿಗೆ ಸಂಬಂಧಿಸಿದಂತೆ ತನ್ನ ಮೊದಲ U.S. ಸ್ವಾಮ್ಯದ ಹಕ್ಕುಪತ್ರವನ್ನು ಸ್ವೀಕರಿಸುವಲ್ಲಿ ಪರಾಕಾಷ್ಠೆಯನ್ನು ಮುಟ್ಟಿತು.[2] ಸಿಂಹಾವಲೋಕನ ಮಾಡಿದರೆ, ತನ್ನ ಈ ಅತ್ಯಂತ ಪ್ರಸಿದ್ಧ ಆವಿಷ್ಕಾರವನ್ನು ಓರ್ವ ವಿಜ್ಞಾನಿಯಾಗಿರುವ ತನ್ನ ವಾಸ್ತವಿಕ ಕೆಲಸದ ಮೇಲಿನ ಒಂದು ಹೇರುವಿಕೆ ಎಂದು ಬೆಲ್ ಪರಿಗಣಿಸಿದ ಮತ್ತು ತನ್ನ ಅಧ್ಯಯನ ಕೋಣೆಯಲ್ಲಿ ದೂರವಾಣಿಯೊಂದನ್ನು ಹೊಂದಲು ಆತ ನಿರಾಕರಿಸಿದ.[3] ದ್ಯುತಿ ದೂರಸಂಪರ್ಕಗಳು, ಹೈಡ್ರೋಫಾಯಿಲ್ಗಳು ಹಾಗೂ ವಾಯುಯಾನ ವಿಜ್ಞಾನದಲ್ಲಿನ ಪರಿವರ್ತನಾಶೀಲ ಕೆಲಸಗಳನ್ನು ಒಳಗೊಂಡಂತೆ, ಇನ್ನೂ ಅನೇಕ ಆವಿಷ್ಕಾರಗಳು ಬೆಲ್ನ ನಂತರದ ಜೀವನಕ್ಕೆ ಅಂಕಿತಹಾಕಿದವು. ೧೮೮೮ರಲ್ಲಿ, ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಮಾರ್ಪಟ್ಟ.[4]
ಅಲೆಕ್ಸಾಂಡರ್ ಗ್ರಹಾಂ ಬೆಲ್ | |
---|---|
ಜನನ | ಮಾರ್ಚ್ ೨,೧೮೪೭ ಎಡಿನ್ ಬರ್ಗ್, ಸ್ಕಾಟ್ಲಂಡ್,ಯು.ಕೆ |
ಮರಣ | Error: Need valid death date (first date): year, month, day ಬೇನ್ ಭ್ರೇಗ್, ನೊವಾ ಸ್ಕೋಟಿಯ, ಕೆನಡಾ |
Cause of death | ಮಧುಮೇಹ |
ವಿದ್ಯಾಭ್ಯಾಸ | ಎಡಿನ್ಬರ್ಗ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ ಕಾಲೇಜು,ಲಂಡನ್ |
ವೃತ್ತಿ(ಗಳು) | ಆವಿಷ್ಕಾರಕ,ವಿಜ್ಞಾನಿ,ಇಂಜಿನಿಯರ್, ಪ್ರಾದ್ಯಾಪಕ (ಬೋಸ್ಟನ್ ವಿಶ್ವವಿದ್ಯಾಲಯ), ಕಿವುಡರ ಶಿಕ್ಷಕ |
Known for | ದೂರವಾಣಿಯ ಆವಿಷ್ಕಾರಕ |
ಸಂಗಾತಿ(s) | ಮೇಬಲ್ ಹಬ್ಬರ್ಡ್ (ವಿವಾಹ ೧೮೭೭–೧೯೨೨) |
ಮಕ್ಕಳು | (೪) Two sons who died in infancy and two daughters |
ಪೋಷಕ(ರು) | ಅಲೆಕ್ಸಾಂಡರ್ ಮೆಲ್ವಿಲ್ಲೆ ಬೆಲ್ ಎಲಿಜಾ ಗ್ರೇಸ್ ಸೈಮಂಡ್ಸ್ ಬೆಲ್ |
Relatives | Gardiner Greene Hubbard (father-in-law) Gilbert Hovey Grosvenor (son-in-law) Melville Bell Grosvenor (grandson) |
Signature | |