ಅಲಿ ಲಾರ್ಟರ್
From Wikipedia, the free encyclopedia
ಅಲಿಸನ್ ಎಲಿಝಬೆತ್ "ಅಲಿ" ಲಾರ್ಟರ್ (1976ರ ಫೆಬ್ರವರಿ 28ರಂದು ಜನನ) ಒಬ್ಬ [1] ಅಮೆರಿಕನ್ ನಟಿ ಹಾಗೂ ಮಾಜಿ ಫ್ಯಾಷನ್ ರೂಪದರ್ಶಿ. 1990ರ ದಶಕದ ಕಾಲಾವಧಿಯಲ್ಲಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಅತಿಥಿನಟಿಯಾದ ನಂತರ, ತಮ್ಮ ಬೆಳ್ಳಿತೆರೆ ನಟನಾವೃತ್ತಿಯನ್ನು ಆರಂಭಿಸಿದರು. 2006ರಿಂದ, ಎನ್ಬಿಸಿ ವಾಹಿನಿಯಲ್ಲಿ ಪ್ರಸಾರಗೊಂಡ ವಿಜ್ಞಾನ ಕಾಲ್ಪನಿಕ ಕಥೆ ಹೀರೋಸ್ ನಲ್ಲಿ ಅಲಿ ಲಾರ್ಟರ್ ನಿಕಿ ಸ್ಯಾಂಡರ್ಸ್ ಹಾಗೂ ದೀರ್ಘಕಾಲದಿಂದ ಅಗಲಿದ ಆಕೆಯ ಅವಳಿ ಸಹೋದರಿ ಟ್ರೇಸಿ ಸ್ಟ್ರಾಸ್ ಪಾತ್ರಗಳನ್ನು ನಿರ್ವಹಿಸಿದರು.[2][3] ಅಲಿ ಲಾರ್ಟರ್ ಒಬ್ಬ ರೂಪದರ್ಶಿಯಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಆದರೆ, ನಂತರ ಅವರು ನಟಿಯಾಗಿ ರೂಪುಗೊಂಡರು. 1999ರಲ್ಲಿ ಬಿಡುಗಡೆಯಾದ ವಾರ್ಸಿಟಿ ಬ್ಲೂಸ್ ನಲ್ಲಿನ ಅವರು ನಿಭಾಯಿಸಿದ ಪಾತ್ರವು ಅಲಿ ಲಾರ್ಟರ್ಗೆ ಮಹತ್ವದ ತಿರುವು ನೀಡಿತು. ಇದಾದ ನಂತರ, ಹಾರರ್(ಭಯಹುಟ್ಟಿಸುವ) ಚಲನಚಿತ್ರ 'ಹೌಸ್ ಆನ್ ಹಾಂಟೆಡ್ ಹಿಲ್ ' (1999), ಫೈನಲ್ ಡೆಸ್ಟಿನೇಷನ್ ' (2000) ಹಾಗೂ ಲೀಗಲ್ಲಿ ಬ್ಲೋಂಡ್ ' (2001)ಗಳಲ್ಲಿ ಅಲಿ ಲಾರ್ಟರ್ ನಟಿಸಿದರು. ಅಂದಿನಿಂದಲೂ, ಅಲಿ ಲಾರ್ಟರ್ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಫೈನಲ್ ಡೆಸ್ಟಿನೇಷನ್ 2 (2003) ತನ್ನ ಮುಂಚಿನ ಪಾತ್ರದ ಪುನರ್ನಿರ್ವಹಣೆ, ಹಿಂದಿ (ಬಾಲಿವುಡ್) ಚಲನಚಿತ್ರ ಮ್ಯಾರಿಗೋಲ್ಡ್ (2007) ನಲ್ಲಿ ಚಿತ್ರದ ಹೆಸರಿನ ಪಾತ್ರ ಮತ್ತು ರೆಸಿಡೆಂಟ್ ಇವಿಲ್ ಫ್ರಾಂಚೈಸ್ನಲ್ಲಿ ಕ್ಲೇರ್ ರೆಡ್ಫೀಲ್ಡ್ ಎಂಬ ವೀಡಿಯೊ ಆಟದ ಪಾತ್ರವೊಂದನ್ನು ನಿರ್ವಹಿಸಿದರು. ಇನ್ನೂ ಇತ್ತೀಚೆಗೆ, 2009ರಲ್ಲಿ ಬಿಡುಗಡೆಯಾದ ಆಬ್ಸೆಸ್ಡ್ ಎಂಬ ರೋಮಾಂಚನಕಾರಿ ಚಲನಚಿತ್ರದಲ್ಲಿ ಅಲಿ ಲಾರ್ಟರ್ ಕಾಣಿಸಿಕೊಂಡರು. ಲಾರ್ಟರ್ ಅವರನ್ನು "ಅತೀ ಲೈಂಗಿಕ ಆಕರ್ಷಣೆಯ ಜೀವಂತ ಮಹಿಳೆಯರ" ಪಟ್ಟಿಗಳಲ್ಲಿ ಹೆಸರಿಸಲಾಗಿದೆ.[4] ಮೂರು ವರ್ಷದ ಕಾಲದಿಂದಲೂ ತಮ್ಮ ಪ್ರಿಯಕರರಾಗಿದ್ದ ಹೇಯ್ಸ್ ಮೆಕಾರ್ಥರ್ರನ್ನು 2009ರ ಆಗಸ್ಟ್ 1ರಂದು ಅಲಿ ಲಾರ್ಟರ್ ಮೇಯ್ನ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು.[5]
ಅಲಿ ಲಾರ್ಟರ್ | |
---|---|
ಅಲಿ ಲಾರ್ಟರ್ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಆಲಿಸನ್ ಎಲಿಜ಼ಬೆತ್ ಲಾರ್ಟರ್ (1976-02-28) ಫೆಬ್ರವರಿ ೨೮, ೧೯೭೬ (ವಯಸ್ಸು ೪೮) ಚೆರಿ ಹಿಲ್, ನ್ಯೂ ಜರ್ಸಿ, ಅಮೇರಿಕ |
ಬೇರೆ ಹೆಸರುಗಳು | ಅಲೆಗ್ರಾ ಕೋಲ್ಮನ್[1] |
ವೃತ್ತಿ | ನಟಿ |
ವರ್ಷಗಳು ಸಕ್ರಿಯ | ೧೯೯೭–ಪ್ರಸಕ್ತ |
ಪತಿ/ಪತ್ನಿ | ಹೇಯ್ಸ್ ಮೆಕಾರ್ಥರ್ (೨೦೦೯–ಪ್ರಸಕ್ತ) |