From Wikipedia, the free encyclopedia
ಅರಿಸಾಯೆಮ : ಅಂದವಾದ ಹೂ ಬಿಡುವ ಅಲಂಕಾರ ಸಸ್ಯ . ಏರೇಸೀ ಕುಟುಂಬಕ್ಕೆ ಸೇರಿದೆ. 60 ಪ್ರಭೇದಗಳನ್ನು ಒಳಗೂಂಡಿದೆ. ಇವೆಲ್ಲ ಬಹುವಾರ್ಷಿಕ ಪರ್ಣಸಸಿಗಳು,ಕಾಂಡ ಗಿಡ್ಡ, ಎಲೆಯ ತುದಿ ತೊಟ್ಟು ತೆಳ್ಳಗೆ ಉದ್ದವಾಗಿದ್ದು ಎಲೆ ತುದಿ ಸೀಳಿರುತ್ತದೆ.ಹೂ ಕೊಳವೆಯಾಕಾರವಾಗಿದ್ದು ಉದ್ದವಾಗಿ ಎತ್ತರಕ್ಕೆ ಬೆಳೆಯುತ್ತದೆ. ಹೂಗೊಂಚಲ ಕವಚ ಗೊಂಚಲನ್ನು ಆವರಿಸಿದ್ದು ತುದಿ ನಾಗರಹೆಡೆಯಂತೆ ಗೊಂಚಲನ್ನು ಮುಚ್ಚಿರುತ್ತದೆ.ಗೊಂಚಲು ಸ್ಪೇಡಿಕ್ಸ್ ಮಾದರಿಯದು. ತುದಿಯಲ್ಲಿ ಬಂಜೆ ಅನುಬಂಧಗಳಿವೆ. ಲಿಂಗ ಪ್ರತ್ಯೇಕವಾಗಿವೆ. ಗಂಡು ಹೂಗಳಲ್ಲಿ 2-4 ಭಾಗಗಳುಳ್ಳ ಪರಾಗಕೋಶಗಳು ಹೆಣ್ಣು ಹೂಗಳಲ್ಲಿ ಒಂದು ಅಥವಾ ಹಲವು ಬೀಜಗಳುಳ್ಳ ಒಂದು ಅಂಡಾಶಯವೂ ಇವೆ. ಫಲ ಒಂದು ಅಥವಾ ಹಲವು ಬೀಜವುಳ್ಳ ಬೆರಿ ಮಾದರಿಯದು. ಗೊಂಚಲಾಗಿದ್ದು ಮಾಗಿದಾಗ ಕೆಂಪಗೆ ಕಾಣುತ್ತ್ತದೆ.ಅರಿಸಾಯೆಮ ಸ್ಪೀಸಿಯೋಸ, ಅರಿಸಾಯೆಮ ಫಿಂಬ್ರಿಯೇಟಮ್ ಪ್ರಭೇದಗಳು ಜನಪ್ರಿಯವಾಗಿವೆ. ಲಶುನಗಳಿಂದ ಸಸಿಗಳನ್ನು ವೃದ್ಧಿಮಾಡಬಹುದು.[೧]
Seamless Wikipedia browsing. On steroids.