![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a7/Starr_071024-0339_Spondias_mombin.jpg/640px-Starr_071024-0339_Spondias_mombin.jpg&w=640&q=50)
ಅಮಟೆಗಿಡ
From Wikipedia, the free encyclopedia
ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ[2]. ಸ್ಪಾಂಡಿಯಾಸ್ ಪಿನೇಟ ಇದರ ಸಸ್ಯವೈಜ್ಞನಿಕ ಹೆಸರು. ಕಾಡಮಟೆ, ಅಂಬಟೆ ಇದರ ಕನ್ನಡದ ಇತರ ಹೆಸರುಗಳು. ಅಮಟೆ ಗಿಡ ಮಾವು, ಗೇರು ಮುಂತಾದವುಗಳ ಸಂಬಂಧಿ. ಇದು ಸಾಧಾರಣ ಎತ್ತರದ (8-10 ಮೀ.)ಮ. ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಭಾರತದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದ ತಪ್ಪಲಿನವರೆಗೂ ಅಲ್ಲಲ್ಲೇ ಬೆಳೆಯುವುದುಂಟು. ಕಾಯಿಗಾಗಿ ಇದನ್ನು ಮನೆಯ ಹಿತ್ತಲಲ್ಲೂ ತೋಟಗಳಲ್ಲೂ ಬೆಳೆಸುವುದುಂಟು[3].
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
ಅಮಟೆಗಿಡ | |
---|---|
![]() | |
Fruiting Spondias mombin | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Sapindales |
ಕುಟುಂಬ: | Anacardiaceae |
ಉಪಕುಟುಂಬ: | Spondioideae |
ಪಂಗಡ: | Spondiadeae |
ಕುಲ: | Spondias L. |
Type species | |
Spondias mombin L. | |
Species | |
17, see text | |
Synonyms | |
Allospondias (Pierre) Stapf |
ಮರ ಅಷ್ಟು ಗಟ್ಟಿಯಲ್ಲ; ಸೌದೆಗೆ ಮಾತ್ರ ಬಳಸಲು ಯೋಗ್ಯ. ಕೊಂಬೆಗಳು ಸುಲಭವಾಗಿ ಮುರಿದು ಹೋಗುತ್ತವೆ. ಚಕ್ಕೆಮಂದ; ಒಳಭಾಗ ಕೆಂಪು. ಎಲೆಗಳು ಚಳಿಗಾಲದಲ್ಲಿ ಬಹು ಬೇಗ ಉದುರಿ ಬಹು ದಿನಗಳವರೆಗೆ ಮರ ಬೆತ್ತಲೆಯಾಗಿರುತ್ತದೆ. ಅನಂತರ ಹೂಗಳು ಕಾಣಿಸಿಕೊಳ್ಳುತ್ತವೆ. ಎಲೆಗಳನ್ನು ಹಿಸುಕಿದರೆ ಟರ್ಪೆಂಟೈನ್ ವಾಸನೆ ಬರುತ್ತದೆ. ರಸವನ್ನು ಕಿವಿನೋವಿಗೆ ಉಪಯೋಗಿಸುತ್ತಾರೆ.
ಬಲಿತ ಬೀಜಗಳು ಮೊಳೆತು ಸಸಿಯಾಗುತ್ತವೆ. ಕೊಂಬೆಗಳನ್ನು ನೆಟ್ಟರೂ ಮರವಾಗಿ ಬೆಳೆಯುತ್ತದೆ. ಕಾಯಿ ಗಾತ್ರದಲ್ಲಿ ಅಳಲೆಕಾಯಿಯಷ್ಟಿದ್ದು ಬಣ್ಣದಲ್ಲಿ ಹಸಿರಾಗಿರುತ್ತದೆ. ಹೆಚ್ಚು ತಿಂದರೆ ಅಜೀರ್ಣಕಾರಿಯಾದರೂ ಗಂಟಲು ಮತ್ತು ಕಿವಿನೋವಿಗೆ ಔಷಧಿ. ಆಯುರ್ವೇದದ ಪ್ರಕಾರ ಇದರ ಶಕ್ತಿವರ್ಧಕ ಮತ್ತು ಕಾಮೋತ್ತೇಜಕ, ವಿರೇಚಕ, ಪಿತ್ತಕೆರಳಿಕೆ, ಹುಣ್ಣು, ಕ್ಷಯರೋಗ ಮತ್ತು ರಕ್ತ ದೋಷದಲ್ಲಿ ಉಪಯುಕ್ತ[4]. ಮುಂಡಾ ಜನಾಂಗದಲ್ಲಿ ತೊಗಟೆಯ ಗಂಧವನ್ನು ಮಾಂಸ ಹಾಗೂ ಕೀಲುನೋವಿಗೆ ಬಳಸುತ್ತಾರೆ. ತೊಗಟೆಯಿಂದ ಅಂಟು ಬರುತ್ತದೆ. ಕಾಯಿಗಳನ್ನು ಪೂರ್ತಿ ಬಲಿಯುವುದಕ್ಕೆ ಮುಂಚೆ ಕಿತ್ತು ಉಪ್ಪಿನಕಾಯಿ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಇದು ತುಂಬ ಪ್ರಿಯವಾಗಿದೆ. ಹಣ್ಣಿನಲ್ಲಿ ನಾರು ಹೆಚ್ಚು. ಗೊಜ್ಜಿಗೆ ಚೆನ್ನಾಗಿರುತ್ತದೆ.