ಅಭ್ರಕಚೂರ್ಣ
From Wikipedia, the free encyclopedia
ಅಭ್ರಕಚೂರ್ಣವು ಸಂಯುಕ್ತಜಲದಿಂದ ಕೂಡಿದ ಮೆಗ್ನೀಷಿಯಮ್ ಸಿಲಿಕೇಟ್ (ತಾಲಕ; ಟ್ಯಾಲ್ಕ್). Mg3Si4O10 ಇದರ ರಾಸಾಯನಿಕ ಸೂತ್ರ. ಇದರಲ್ಲಿ ಸ್ವಲ್ಪಮಟ್ಟಿಗೆ ಕ್ಯಾಲ್ಸಿಯಂ ಆಕ್ಸೈಡ್ CaO, ಅಲ್ಯೂಮಿನಿಯಂ ಆಕ್ಸೈಡ್ Al2O3 ಮತ್ತು ಇತರ ಆಕ್ಸೈಡುಗಳೂ ಇರುತ್ತವೆ. ಬಹುಶಃ ಇವು ಕಶ್ಮಲಗಳು. ರಚನೆಯಲ್ಲಿ ಅಭ್ರಕ (ಮೈಕ) ಜಾತಿಗೆ ಸಂಬಂಧಿಸಿದೆ. ಮೆಗ್ನೀಷಿಯಂ ಸಿಲಿಕೇಟ್ ಪದರಗಳಿಂದ ಕೂಡಿರುವ ಖನಿಜ; ಬಹಳ ಮೃದು.