From Wikipedia, the free encyclopedia
ಅಪ್ಸರೆಯರು ಸ್ವರ್ಗ ಲೋಕದ ದೇವತಾ ಸ್ತ್ರೀಯರು. ದೇವಲೋಕದಲ್ಲಿ ಸಾವಿರಾರು ಮಂದಿ ಅಪ್ಸರೆಯರಿದ್ದರೆಂದು ಹೇಳಲಾಗುತ್ತದೆ. ಇವರು ಚಿರ ತರುಣಿಯರು. ಮುಪ್ಪು ಇವರನ್ನು ಆವರಿಸಲಾರದು. ಇವರನ್ನು ಸ್ವರ್ಗಲೋಕದ ವೇಶೈಯರೆಂದು ಕರೆಯಲಾಗಿದೆ. ಇಂದ್ರನ ಅಡಿಯಾಳುಗಳಾಗಿ ಅವನು ಹೇಳಿದವರನ್ನು ತೃಪ್ತಿ ಪಡಿಸುವುದೇ ಇವರ ಕೆಲಸವಾಗಿತ್ತು. ಕಶ್ಯಪನ ಹೆಂಡತಿ ತಿಲೋತ್ತಮೆ ರಂಭೆ, ಊರ್ವಶಿ, ಮೇನಕೆ, ಮನೋರಮಾ ಮುಂತಾದ ಹದಿಮೂರು ಮಂದಿ ಅಪ್ಸರೆಯರಿಗೆ ಜನ್ಮ ನೀಡಿದಳು.
ಹಿಂದೂ ಪುರಾಣ ಶಾಸ್ತ್ರ ಹಾಗೂ ಧರ್ಮದ ಪ್ರಕಾರ ಇವರು ಕ್ಷೀರಾಬ್ದಿ ಮಥನ ಸಂದರ್ಭದಲ್ಲಿ ನೀರಿನಿಂದ ಉದ್ಬವಿಸಿದವರು. ಇಂದ್ರನ ಆಸ್ಥಾನದ ನರ್ತಕಿಯರು. ಅಥರ್ವಣವೇದದಲ್ಲಿ ಅಪ್ಸರೆಯರಿಗೆ ಗಂಧರ್ವರೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಅದರ ಪ್ರಕಾರ ಇವರ ಕಾರ್ಯಕ್ಷೇತ್ರ ಭೂಮಿವರೆಗೂ ವ್ಯಾಪಿಸಿದೆ. ಇವರು ಭೂಲೋಕದಲ್ಲಿ ಅಂಜೂರದ ಮರಗಳಲ್ಲಿ ವಾಸಿಸುತ್ತಾ ಝಲ್ಲರಿ ಮತ್ತು ವೀಣೆಯನ್ನು ನುಡಿಸುತ್ತಿದ್ದರು. ಇವರನ್ನು ವರಿಸಲು ಸುರಾಸುರರು ನಿರಾಕರಿಸಿದುದರಿಂದ ಇವರು ಸ್ವೇಚ್ಛಾಚಾರಿಗಳಾದರು. ಮರಣ ಹೊಂದಿದ ವೀರರಿಗೆ ಇವರನ್ನು ಬಹುಮಾನವಾಗಿ ಕೊಡಲಾಗುತ್ತಿತ್ತು. ಅಪ್ಸರೆಯರ ರೂಪ, ಲಾವಣ್ಯದ ಬಗ್ಗೆ, ಅವರು ಮುನಿಗಳ ತಪಸ್ಸನ್ನು ಕೆಡಿಸಿದ್ದರ ಬಗ್ಗೆ ಅನೇಕ ಕಥೆಗಳು ಪುರಾಣದಲ್ಲಿ ಕಂಡು ಬರುತ್ತವೆ. ಭೂಲೋಕದ ಅನೇಕರೊಂದಿಗೆ ಇವರು ಸಂಸರ್ಗಗೊಂಡ ಕಥೆಗಳು ಬಹಳಷ್ಟಿವೆ. ಉದಾ:-ವಿಶ್ವಾಮಿತ್ರ-ಮೇನಕೆ ಪ್ರಸಂಗ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.