ಅಪ್ಫೆಲ್ವೈನ್
From Wikipedia, the free encyclopedia
ಅಪ್ಫೆಲ್ವೈನ್ (ಜರ್ಮನ್, ಆಪಲ್ ವೈನ್ ) ಎಂದರೆ ಒಂದು ರೀತಿಯ ಜರ್ಮನ್ ಸೇಬುಮದ್ಯವಾಗಿದೆ. ಇದನ್ನು ಸ್ಥಳೀಯವಾಗಿ ಎಬ್ಬೆಲ್ವೋಯ್ , ಆಪ್ಲರ್ , ಸ್ಟೋಫ್ಶಿ , ಅಪ್ಫೆಲ್ಮೋಸ್ಟ್ (ಆಪಲ್ ಮಸ್ಟ್), ವೈಜ್ (ಲ್ಯಾಟಿನ್ನ ವೈಸ್ ನಿಂದ, ಎರಡನೇ ಅಥವಾ ಪರ್ಯಾಯ ವೈನ್) ಮತ್ತು ಸಾರರ್ ಮೋಸ್ಟ್ (ಸೋರ್ ಮಸ್ಟ್) ಎಂದೆಲ್ಲಾ ಕರೆಯುತ್ತಾರೆ. ಇದು ೫.೫%–೭% ನಷ್ಟು ಅಲ್ಕೋಹಾಲ್ ಅಂಶವನ್ನು ಮತ್ತು ಹುಳಿ ರುಚಿಯನ್ನು ಹೊಂದಿದೆ. ಮುಖ್ಯವಾಗಿ ದೊಡ್ಡ ಉತ್ಪಾದಕರು ಹರಡಿದ ಆಪ್ಲರ್ ಹೆಸರನ್ನು ಸಾಮಾನ್ಯವಾಗಿ ರೆಸ್ಟಾರೆಂಟ್ಗಳಲ್ಲಿ ಅಥವಾ ಸಣ್ಣ ತಯಾರಕರು ಬಳಸುವುದಿಲ್ಲ. ಅದರ ಬದಲಿಗೆ ಅವರು ಸ್ಕೋಪ್ಪೆನ್ ಅಥವಾ ಸ್ಕೋಪ್ಪೆ ಪಾನೀಯವೆಂದು ಕರೆಯುತ್ತಾರೆ, ಅದು ಲೋಟದ ಮಾಪನವನ್ನು ಸೂಚಿಸುತ್ತದೆ.