ಅನ್ನೆ ಬೊನ್ನಿ
From Wikipedia, the free encyclopedia
ಅನ್ನೆ ಬೊನ್ನಿ (೨೮ ನವೆಂಬರ್ ೧೭೨೦ ರ ನಂತರ ಕಣ್ಮರೆಯಾದರು) ಇವರನ್ನು ಆನ್ ಫುಲ್ಫೋರ್ಡ್ ಎಂದು ಕರೆಯುತ್ತಾರೆ. ಇವರು ಕೆರಿಬಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಡಲ್ಗಳ್ಳರಾಗಿದ್ದರು ಮತ್ತು ದಾಖಲಾದ ಇತಿಹಾಸದಲ್ಲಿ ಕೆಲವೇ ಮಹಿಳಾ ಕಡಲ್ಗಳ್ಳರಲ್ಲಿ ಇವರು ಒಬ್ಬರು.[1] ಕ್ಯಾಪ್ಟನ್ ಚಾರ್ಲ್ಸ್ ಜಾನ್ಸನ್ ಅವರ ೧೭೨೪ ರ ಪುಸ್ತಕವಾದ ಎ ಜನರಲ್ ಹಿಸ್ಟರಿ ಆಫ್ ದಿ ಪೈರೇಟ್ಸ್ನಿಂದ ಅವರ ಜೀವನದ ಬಗ್ಗೆ ಹೆಚ್ಚು ತಿಳಿದಿಲ್ಲ, ಇದು ಹೆಚ್ಚು ಊಹಾಪೋಹ ಮತ್ತು ವಿಶ್ವಾಸಾರ್ಹವಲ್ಲದ್ದಾಗಿದೆ. [2]
ಬೋನಿಯವರು ಅಜ್ಞಾತ ದಿನಾಂಕದಲ್ಲಿ ಜನಿಸಿದರು. ೨೨ ಆಗಸ್ಟ್ ೧೭೨೦ ರ ಮೊದಲು, ಅವರು ಕಡಲ್ಗಳ್ಳರ ಅಭಯಾರಣ್ಯವಾದ ಬಹಾಮಾಸ್ನ ನಸ್ಸಾವುಗೆ ತೆರಳಿದರು.[3] ಅಲ್ಲಿಯೇ ಅವರು ಕ್ಯಾಲಿಕೊ ಜ್ಯಾಕ್ ರಾಕ್ಹ್ಯಾಮ್ ಅವರನ್ನು ಭೇಟಿಯಾದರು. ಆಗಸ್ಟ್ ೧೭೨೦ ರಲ್ಲಿ, ರಾಕಮ್, ಬೋನಿ ಮತ್ತು ಇನ್ನೊಬ್ಬ ಮಹಿಳಾ ಕಡಲ್ಗಳ್ಳ ಮೇರಿ ರೀಡ್ ಸೇರಿದಂತೆ ಸಿಬ್ಬಂದಿಯೊಂದಿಗೆ ಹಡಗನ್ನು ಕದ್ದು ಕುಖ್ಯಾತ ಕಡಲ್ಗಳ್ಳರಾದರು. ಅಕ್ಟೋಬರ್ ೧೭೨೦ ರಲ್ಲಿ, ರಾಕ್ ಹ್ಯಾಮ್ ಮತ್ತು ರೀಡ್ ಅವರೊಂದಿಗೆ ಬೋನಿಯನ್ನು ಸೆರೆಹಿಡಿಯಲಾಯಿತು. ಹಡಗಿನಲ್ಲಿದ್ದ ಎಲ್ಲಾ ಕಡಲ್ಗಳ್ಳರಿಗೆ ಮರಣದಂಡನೆ ವಿಧಿಸಲಾಯಿತು. ಆದರೆ, ಬೋನಿ ಮತ್ತು ರೀಡ್ ಇಬ್ಬರೂ ಗರ್ಭಿಣಿ ಎಂದು ಹೇಳಿಕೊಂಡಿದ್ದರಿಂದ ಅವರ ಮರಣದಂಡನೆಯನ್ನು ತಡೆಹಿಡಿಯಲಾಯಿತು. ರೀಡ್ರವರು ಏಪ್ರಿಲ್ ೧೭೨೧ ರ ಮಧ್ಯಭಾಗದಲ್ಲಿ ಜೈಲಿನಲ್ಲಿ ನಿಧನರಾದರು. ಆದರೆ, ಬೋನಿಯ ಹಣೆಬರಹ ಇನ್ನು ತಿಳಿದಿಲ್ಲ.