![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/0f/ChapmanBarbauld.jpg/640px-ChapmanBarbauld.jpg&w=640&q=50)
ಅನ್ನಾ ಲೇಟಿಟಿಯ ಬಾರ್ಬೌಲ್ಡ್
From Wikipedia, the free encyclopedia
ಅನ್ನಾ ಲೇಟಿಟಿಯ ಬಾರ್ಬೌಲ್ಡ್ ರವರು ಹೆಸರಾಂತ ಆಂಗ್ಲ ಕವಿಯತ್ರಿ, ಪ್ರಬಂಧಕಾರರು, ವಿಮರ್ಶಕಾರರು, ಸಂಪಾದಕಾರರು ಮತ್ತು ಮಕ್ಕಳ ಸಾಹಿತ್ಯ ಬರಹಗಾರರಾಗಿದ್ದರು.[1] ಇವರು ೨೦ನೇ ಜೂನ್, ೧೭೪೩ರಲ್ಲಿ ಲೈಸೆಸ್ಟರ್ಶೈರ್ನಲ್ಲಿರುವ ಕಿಬ್ವರ್ತ್ ಹಾರ್ಕೋರ್ಟನಲ್ಲಿ ಜನಿಸಿದರು. ಇವರ ತಂದೆ ತಾಯಿಯ ಹೆಸರು ಜಾನ್ ಐಕ್ಟಿನ್ ಮತ್ತು ಜೇನ್. ಅವರ ತಂದೆ ಡಿಸೆಂಟಿಂಗ್ ಅಕಾಡೆಮಿ, ಕಿಬ್ವರ್ತ್ ಹಾರ್ಕೋರ್ಟನಲ್ಲಿ ಪ್ರಾಂಶುಪಾಲಾರಾಗಿ ಮತ್ತು ಪ್ರೆಸ್ಟಿಟೇರಿಯನ್ ಚರ್ಚಿನಲ್ಲಿ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಕುಟುಂಬವು ಅವರ ತಂದೆಯ ಶಾಲೆಯ ಬಳಿಯಲ್ಲಿಯೇ ವಾಸವಾಗಿದ್ದರು. ಇದರಿಂದ ಅವಳಿಗೆ ಲ್ಯಾಟಿನ್, ಗ್ರೀಕ್, ಫ್ರೆಂಚ್, ಇಟಾಲಿಯನ್ ಮತ್ತು ಇತರ ಭಾಷೆಗಳನ್ನು ಕಲಿಯುವ ಅವಕಾಶ ದೊರೆಯಿತು. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಇದು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಅವರಿಗೆ ಓದಿನ ಬಗ್ಗೆ ತುಂಬ ಒಲವು ಮತ್ತು ಬೌಧ್ದಿಕತೆಯನ್ನು ನೋಡಿ ಅವರ ತಾಯಿಗೆ ಮಗಳು ಎಲ್ಲಿ ಜೀವನ ಪರಿಯಂತ ಅವಿವಾಹಿತೆಯಾಗಿ ಉಳಿಯುತ್ತಾಳೋ ಎಂಬ ಚಿಂತೆ ಕಾಡುತ್ತಿತ್ತು. ತಾಯಿ ಮಗಳ ಭಾಂದವ್ಯ ತಂದೆ ಮಗಳಿಗೆ ಇದ್ದಷ್ಟು ಇರಲಿಲ್ಲ. ೧೭೫೮ರಲ್ಲಿ ಅವರ ತಂದೆಗೆ ಇಂಗ್ಲೆಂಡಿನ ವಾರಿಂಗ್ಟನಲ್ಲಿ ಇದ್ದ ಪ್ರಸಿದ್ಧವಾದ ವಾರಿಂಗ್ಟನ್ ಅಕಾಡೆಮಿಯಲ್ಲಿ ಒಳ್ಳೆಯ ಅವಕಾಶ ಸಿಕ್ಕಿತು. ಇದರಿಂದ ಅವರ ಕುಟುಂಬವು ಅಲ್ಲಿಗೆ ಬಂದು ನೆಲೆಸಿತು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
![](http://upload.wikimedia.org/wikipedia/commons/thumb/0/0f/ChapmanBarbauld.jpg/320px-ChapmanBarbauld.jpg)
ಬಾರ್ಬೌಲ್ಡ್ರವರು ಬರೆದ ಪ್ರಥಮ ಕವಿತೆಗಳ ಪುಸ್ತಕವನ್ನು ಸ್ನೇಹಿತರಿಂದ ಸ್ನೇಹಿತರಿಗೆ ತಲುಪಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅದನ್ನು ಪ್ರಕಟಿಸಲು ಮನವರಿಕೆ ಮಾಡಿದರು. ಆದ್ದರಿಂದ ೧೭೭೩ರಲ್ಲಿ ಅದನ್ನು ಪ್ರಕಟಿಸಲಾಯಿತು. ವಿಸ್ಮಯಕರ ವಿಷಯವೇನೆಂದರೆ ಈ ಕವನಗಳು ಹನ್ನೆರಡು ತಿಂಗಳಲ್ಲಿ ನಾಲ್ಕು ಆವೃತ್ತಿಗಳು ಬಿಡುಗಡೆಯಾಗಿ ಯಶಸ್ಸು ಕಂಡಿತು. ಇದು ಪ್ರಕಟವಾದ ನಂತರ ಬಾರ್ಬೌಲ್ಡ್ ಇಂಗ್ಲೆಂಡ್ನಲ್ಲಿ ಪ್ರಸಿದ್ಧ ಸಾಹಿತಿಯಾಗಿ ಗುರುತಿಸಲ್ಪಟ್ಟರು. ಅದೇ ವರ್ಷ ಬಾರ್ಬೌಲ್ಡ್ ಮತ್ತು ಅವರ ಸೋದರ, ಜಾನ್ ಐಕಿನ್ ಒಟ್ಟಾಗಿ 'ಮಿಸ್ಸಲೇನಿಯಸ್ ಪೀಸಸ್ ಇನ್ ಪ್ರೋಸ್' ಎಂಬದನ್ನು ಪ್ರಕಟಿಸಿದರು. ಅದರಲ್ಲಿ ಹೆಚ್ಚಿನ ಪ್ರಬಂಧಗಳು ಬಾರ್ಬೌಲ್ಡ್ ಅವರದೇ ಆಗಿತ್ತು.
ಮೇ ೧೭೭೪ರಲ್ಲಿ ಬಾರ್ಬೌಲ್ಡ್ ವಾರಿಂಗ್ಟನ್ನಲ್ಲಿ ನೆಲಸಿದ ಫ್ರೆಂಚ್ ಹಗೆನಾಟ್ನ ಮೊಮ್ಮಗನಾದ ರೊಚೆಮಾಂಟ್ ಬಾರ್ಬೌಲ್ಡ್ ರವರನ್ನು ವಿವಾಹವಾದರು. ಅವರ ಗಂಡ ಹುಡುಗರಿಗಾಗಿ ಶಾಲೆಯನ್ನು ನೀಡಿದ್ದ ಜಾಗಕ್ಕೆ ಸ್ಥಳಾಂತರಗೊಂಡರು. ಅವರು ಮದುವೆಯ ನಂತರ ೧೮ನೇ ಶತಮಾನದಲ್ಲಿ ಸಾಮನ್ಯವಾದ ಕಾಲಕ್ಷೇಪವನ್ನು ಅಳವಡಿಸಿಕೊಂಡರು. ಇದನ್ನು 'ಡಿವೋಶ್ನಲ್ ಪೀಸಸ್ ಕಂಪೈಳ್ಡ್ ಫ್ರಂ ದಿ ಪ್ಸಾಮ್ಸ್ ಆಂಡ್ ದಿ ಬುಕ್ ಆಫ್ ಜಾಬ್' ಎಂಬುದರಲ್ಲಿ ಪ್ರಕಟಿಸಿದರು. ಈ ಕೆಲಸಕ್ಕೆ ಲಗತ್ತಿಸಲಾಗಿ 'ಥಾಟ್ಸ್ ಆನ್ ದಿ ಡಿವೋಶ್ನಲ್ ಟೇಸ್ಟ್, ಆನ್ ಸೆಕ್ಟ್ಸ್ ಆಂಡ್ ಆನ್ ಎಸ್ಟಾಬ್ಲಿಶ್ಮೆಂಟ್ಸ್' ಎಂಬ ಪ್ರಬಂಧವನ್ನು ಬರೆದರು. ಅದಾದ ನಂತರ ೧೭೭೫ರಲ್ಲಿ, ಅವರಿಗೆ ಮಕ್ಕಳಾಗದ ಕಾರಣ ಬಾರ್ಬೌಲ್ಡ್ ಅವರ ಅಣ್ಣನ ಮಗ ಚಾರ್ಲ್ಸ್ ಅನ್ನು ದತ್ತುವಾಗಿ ಪಡೆದುಕೊಂಡರು.