![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/d2/Liquidnitrogen.jpg/640px-Liquidnitrogen.jpg&w=640&q=50)
ಅನಿಲ ದ್ರವೀಕರಣ
From Wikipedia, the free encyclopedia
ಅನಿಲ ದ್ರವೀಕರಣ ಎಂದರೆ ಅನಿಲವನ್ನು ದ್ರವ ಸ್ಥಿತಿಗೆ ತರುವ ಭೌತಿಕ ಪರಿವರ್ತನೆ.[1][2] ಘನ, ದ್ರವ, ಅನಿಲ-ಇವು ಒಂದು ವಸ್ತುವಿನಲ್ಲಿ ಅಡಕವಾಗಿರುವ ಉಷ್ಣವನ್ನು ಅವಲಂಬಿಸಿ ಇರುವ ಸ್ಥಿತಿತ್ರಯಗಳು. ವಸ್ತುವಿನ ಅನಿಲಸ್ಥಿತಿಯಲ್ಲಿ ಅಣುಗಳ ಚಲನಶಕ್ತಿ ಮತ್ತು ಪರಸ್ಪರ ಅಂತರ ಹೆಚ್ಚಾಗಿದ್ದು ಆಕರ್ಷಣಬಲ ಕನಿಷ್ಠವಾಗಿರುವುದು. ಆದ್ದರಿಂದ ಒಂದು ಅನಿಲವನ್ನು ದ್ರವೀಕರಿಸಬೇಕಾದರೆ ಅದನ್ನು ತಂಪುಮಾಡುವುದರ ಮೂಲಕ ಅಣುಗಳ ಚಲನಶಕ್ತಿಯನ್ನು ಕಡಿಮೆಮಾಡಬೇಕು. ದ್ರವದಲ್ಲಿರುವಂತೆ ಅಣುಗಳು ಪರಸ್ಪರ ಹತ್ತಿರ ಬರುವಂತೆ ಮಾಡಲು ಒತ್ತಡ ಹೆಚ್ಚಿಸಬೇಕು.
![Thumb image](http://upload.wikimedia.org/wikipedia/commons/thumb/d/d2/Liquidnitrogen.jpg/640px-Liquidnitrogen.jpg)