ಅನಿಲಮಾಪಕ
From Wikipedia, the free encyclopedia
ಅನಿಲಮಾಪಕವು ಅನಿಲಗಳ ಗಾತ್ರವನ್ನು ಅಳೆಯಲು ಉಪಯೋಗಿಸುವ ಸಾಧನ (ಗ್ಯಾಸ್ ಮೀಟರ್).[1][2] ನಿತ್ಯಬಳಕೆಯಲ್ಲಿ (ಅಡಿಗೆ, ಕೊಠಡಿ ಬೆಚ್ಚಗಿಡುವುದು ಇತ್ಯಾದಿ) ಅನಿಲದ ಉಪಯೋಗ ಅಧಿಕವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ಪ್ರತಿಮನೆಯಲ್ಲೂ ಇದರ ಉಪಯೋಗವಿದೆ. ಗಾತ್ರವನ್ನು ಅಳೆಯಲು ಬೇರೆ ಬೇರೆ ತತ್ತ್ವಗಳ ಆಧಾರದ ಮೇಲೆ ರಚಿತವಾಗಿರುವ ಮಾಪಕಗಳನ್ನು ಸಾಮಾನ್ಯವಾಗಿ ಈ ರೀತಿ ವಿಂಗಡಿಸಬಹುದು. 1 ಸ್ಥಾನಾಂತರ ಮಾಪಕ (ಡಿಸ್ಪ್ಲೇಸ್ಮೆಂಟ್ ಮೀಟರ್), 2 ತಿರುಗುಮಾಪಕ (ರೋಟರಿ ಮೀಟರ್), 3 ರಂಧ್ರಮಾಪಕ (ಆರಿಫ಼ಿಸ್ ಮೀಟರ್ ) ಮತ್ತು 4 ಉಷ್ಣಧಾರಣಮಾಪಕ (ಹೀಟ್ ಕೆಪ್ಯಾಸಿಟಿ ಮೀಟರ್).