From Wikipedia, the free encyclopedia
ರೀಜನಲ್ ಪಾರ್ಕ್ ಇಂದೋರ್ (ಅಧಿಕೃತವಾಗಿ ಅಟಲ್ ಬಿಹಾರಿ ವಾಜಪೇಯಿ ಪ್ರಾದೇಶಿಕ ಉದ್ಯಾನವನ ) - ಇದು ಮಧ್ಯಪ್ರದೇಶದ ಇಂದೋರ್ನಲ್ಲಿರುವ ಒಂದು ಉದ್ಯಾನವನವಾಗಿದೆ. ಈ ಉದ್ಯಾನವನವನ್ನು ಇಂದೋರ್ ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ೨೦೦೩ ರಲ್ಲಿ ಆರಂಭಿಸಲಾಯಿತು. ಉದ್ಯಾನವನವು ಒಟ್ಟು ೮೦ ಎಕರೆ ವಿಸ್ತಾರವಾಗಿದೆ. ಇದರಲ್ಲಿ ೪೨ ಎಕರೆ ಜಾಗದಲ್ಲಿ ಸರೋವರ ನಿರ್ಮಾಣವನ್ನು ಮಾಡಲಾಗಿದೆ. ಉಳಿದ ೩೮ ಎಕರೆಗಲಲ್ಲಿ ಜನರ ವಿಹಾರಕ್ಕೆ ಅವಶ್ಯವಾದ ಆಕರ್ಷಣೆಗಳನ್ನು ನಿರ್ಮಿಸಲಾಗಿದೆ. ಈ ಉದ್ಯಾನವನಕ್ಕೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. [1] [2] ಈ ಸರೋವರದ ಜೊತೆಗೆ ಕಾಲುವೆಯೂ ಇದೆ, ಇದು ಇಡೀ ಉದ್ಯಾನವನವನ್ನು ಕೊಳದ ಒಂದು ಬದಿಯಿಂದ ಪ್ರಾರಂಭಿಸಿ ಇನ್ನೊಂದು ಭಾಗದಲ್ಲಿ ಕೊನೆಗೊಳ್ಳುತ್ತದೆ. ಮಂಜು ಕಾರಂಜಿಯೊಂದಿಗೆ ಕಾಲುವೆಯ ಮೇಲೆ ಸೇತುವೆಗಳಿವೆ.
ಇಲ್ಲಿ ವಿವಿಧ ಪ್ಯಾಡಲ್ ದೋಣಿಗಳು (ಪೆಡಾಲೋಸ್), ಸ್ಪೀಡ್ಬೋಟ್ಗಳು (ಅಥವಾ ಮೋಟಾರ್ಬೋಟ್ಗಳು/ ಪವರ್ಬೋಟ್ಗಳು), ಮತ್ತು ಸಣ್ಣ ಕ್ರೂಸರ್ಗಳೂ ಇವೆ. ಈ ದೋಣಿಗಳ ಸವಾರಿ ಶುಲ್ಕಗಳಲ್ಲಿ ಒಂದಕ್ಕೊಂದು ವ್ಯತ್ಯಾಸವಿದೆ. ಪ್ರಾದೇಶಿಕ ಉದ್ಯಾನವನದಲ್ಲಿ ಇತ್ತೀಚೆಗೆ ಮಿನಿ ಕ್ರೂಸರ್ ಮಾಲ್ವಾ ಕ್ವೀನ್ ಅನ್ನು ಇಲ್ಲಿ ಸೇರಿಸಲಾಗಿದೆ ಮತ್ತು ಇದು ಇಡೀ ರಾಜ್ಯದಲ್ಲಿ ಮೊದಲನೆಯದು. ಇದು ಎರಡು ಡೆಕ್ಗಳನ್ನು ಹೊಂದಿದೆ, ಸುಮಾರು ೮೦ ಜನರಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ರೆಸ್ಟೋರೆಂಟ್ ಮತ್ತು ಖಾಸಗಿ ಪಾರ್ಟಿ ಕೊಠಡಿಗಳನ್ನು ಹೊಂದಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.