From Wikipedia, the free encyclopedia
ಆಲ್ ಇಂಡಿಯಾ ರೇಡಿಯೋ (ಆಲ್ ಇಂಡಿಯಾ ರೇಡಿಯೋ (AIR ಎಂದು ಸಂಕ್ಷಿಪ್ತ ಗೊಳಿಸಲಾಗಿದೆ)),ವನ್ನು ಅಧಿಕೃತವಾಗಿ ಆಕಾಶವಾಣಿ ಎಂದು ಕರೆಯಲಾಗುತ್ತದೆ (ದೇವನಾಗರಿಯಲ್ಲಿ: आकाशवाणी, ākāshavānī), ಇದು ಭಾರತದ ರೇಡಿಯೋ ಪ್ರಸಾರ ಮಾಧ್ಯಮವಾಗಿದೆ ಹಾಗು ಪ್ರಸಾರ ಭಾರತಿಯ ವಿಭಾಗವಾಗಿದೆ. ಇದು 1936[೧] ರಲ್ಲಿ ಸಂಸ್ಥಾಪಿಸಲಾಯಿತು. ಇಂದು ಇದು ರಾಷ್ಟ್ರೀಯ ದೂರದರ್ಶನ ಪ್ರಸಾರವಾಗಿರುವ , ಪ್ರಸಾರ ಭಾರತಿಯ ದೂರದರ್ಶನದ ಸಹಯೋಗಿಯಂತೆ ಸೇವೆಸಲ್ಲಿಸುತ್ತಿದೆ. ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ. ಇದರ ಪ್ರಧಾನ ಕಾರ್ಯಾಲಯವು ನವ ದೆಹಲಿಯ ಆಕಾಶವಾಣಿ ಭವನದಲ್ಲಿದೆ. ಆಕಾಶವಾಣಿ ಭವನ ನಾಟಕ ವಿಭಾಗ, FM ವಿಭಾಗ ಮತ್ತು ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ. ದೂರದರ್ಶನ ಕೇಂದ್ರವೂ (ದೆಹಲಿ) ಕೂಡ ಆಕಾಶವಾಣಿ ಭವನದ 6ನೇ ಮಹಡಿಯಲ್ಲಿದೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2009) |
Type | Government Organization |
---|---|
Country | India |
Availability | National |
Founded | by ಭಾರತ ಸರ್ಕಾರ |
Owner | Prasar Bharati |
Launch date | 1936 |
Official website | www.allindiaradio.org |
ಬಾಂಬೆಯ ರೇಡಿಯೋ ಕ್ಲಬ್ 1923 ರಲ್ಲಿ ಪ್ರಾರಂಭಿಸಲಾದ ಬ್ರಿಟಿಷ್ ಇಂಡಿಯಾ ಪ್ರಸಾರಭಾರತಿಯಲ್ಲಿ ಬ್ರಾಡ್ ಕಾಸ್ಟಿಂಗ್ ನಲ್ಲಿನ ಕಾರ್ಯಕ್ರಮಗಳು ಇನ್ನಿತರ ರೇಡಿಯೊ ಕ್ಲಬ್ ಗಳೊಂದಿಗೆ ಪ್ರಸಾರವಾಗುತ್ತಿದ್ದವು. 1926 ರ ಒಪ್ಪಂದದಿಂದಾಗಿ ಖಾಸಗಿ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪೆನಿ (ಭಾರತೀಯ ಪ್ರಸಾರ ಕೇಂದ್ರ)(IBC) ಎರಡು ರೇಡಿಯೋ ಕೇಂದ್ರಗಳನ್ನು ನಡೆಸಲು ಅನುಮತಿ ಪಡೆದುಕೊಂಡಿತು; ಬಾಂಬೆ ಕೇಂದ್ರವನ್ನು 1927 ರ ಜುಲೈ 23 ರಂದು ಉದ್ಘಾಟಿಸಲಾಯಿತು. ಕೋಲ್ಕತ್ತ ಕೇಂದ್ರ ವನ್ನು 1927 ರ ಆಗಸ್ಟ್ 26 ರಂದು ಆರಂಭಿಸಲಾಯಿತು. ಆದರೆ 1930 ರ ಮಾರ್ಚ್ 1 ರಂದು ಈ ಕಂಪನಿಯನ್ನು ಮುಚ್ಚಲಾಯಿತು. ಇದರಿಂದಾಗಿ ಸರ್ಕಾರ ಪ್ರಸಾರ ಹಕ್ಕಿನ ಸೌಲಭ್ಯಗಳನ್ನು ವಶಪಡಿಸಿಕೊಳ್ಳುವ ಮೂಲಕ 1930 ರ ಏಪ್ರಿಲ್ 1 ರಂದು (ಪ್ರಾಯೋಗಿಕ ಆಧಾರದ ಮೇಲೆ ಎರಡು ವರ್ಷಗಳಿಗಾಗಿ, ಆದರೆ 1932 ರ ಮೇ ಯಿಂದ ಮುಂದುವರೆಸಲಾಯಿತು.) ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ (ಭಾರತೀಯ ರಾಜ್ಯ ಪ್ರಸಾರ ಸೇವಾಕೇಂದ್ರ)ಅನ್ನು (ISBS) ಪ್ರಾರಂಭಿಸಿತು. 1936 ರ ಜೂನ್ 8 ರಂದು ISBS ಅನ್ನು ಆಲ್ ಇಂಡಿಯಾ ರೇಡಿಯೋ (AIR; 1956 ರಿಂದ ಆಕಾಶವಾಣಿ ಎಂದು ಕೂಡ ಕರೆಯಲಾಗುತ್ತದೆ.) ಎಂದು ಪುನರ್ನಾಮಕರಣ ಮಾಡಲಾಯಿತು. 1939 ರ ಅಕ್ಟೋಬರ್ 1 ರಂದು ಬಾಹ್ಯ ಸೇವೆ ಯನ್ನೂ ಆರಂಭಿಸಲಾಯಿತು (ಪುಷ್ತು ನಲ್ಲಿ ಆರಂಭಿಸಲಾದ ಪ್ರಸಾರದ ಜೊತೆಯಲ್ಲಿ); ಇದನ್ನು ಜರ್ಮನಿಯಿಂದ ರೇಡಿಯೋ ಮರು ಪ್ರಚಾರವೆಂದು ಕರೆಯಲಾಯಿತು. ಇದು ಆಫ್ಘಾನಿಸ್ತಾನ, ಇರಾನ್ ಮತ್ತು ಅರಬ್ ರಾಷ್ಟ್ರಗಳಿಗೆ ನಿರ್ದೇಶಿಸಲ್ಪಟ್ಟಿದೆ. 1947 ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾದಾಗ, AIR ಸಂಪರ್ಕವ್ಯವಸ್ಥೆ ಕೇವಲ ಆರು ಸ್ಟೇಷನ್ ಗಳನ್ನು ಮಾತ್ರ ಹೊಂದಿತ್ತು: ದೆಹಲಿ, ಬಾಂಬೆ, ಕೋಲ್ಕತ್ತ, ಮೆಡ್ರಾಸ, ಲಕ್ನೋ, ಮತ್ತು ತಿರುಚಿ; ಆಗ ಒಟ್ಟು 275,000 ರೇಡಿಯೋ ಸೆಟ್ಟುಗಳಿದ್ದವು. 1957 ರ ಅಕ್ಟೋಬರ್ 3 ರಂದು ಸಂಪೂರ್ಣ ಗೊಳಿಸಲು ವಿವಿಧ ಭಾರತಿ ಕೇಂದ್ರ ವನ್ನು 'ರೇಡಿಯೋ ಸಿಲೊನ್' ನೊಡನೆ ಆರಂಭಿಸಲಾಯಿತು. ದೂರದರ್ಶನ ಪ್ರಸಾರವನ್ನು AIR ನ ಭಾಗವೆಂಬಂತೆ ದೆಹಲಿಯಲ್ಲಿ 1959 ರಲ್ಲಿ ಪ್ರಾರಂಭಿಸಲಾಯಿತು. ಆದರೆ 1976 ರ ಏಪ್ರಿಲ್ 1 ರಂದು ರೇಡಿಯೋ ದಿಂದ ದೂರದರ್ಶನವೆಂದು ಕರೆದು ಇದನ್ನು ಪ್ರತ್ಯೇಕಿಸಲಾಯಿತು.[೨] FM ಪ್ರಸಾರವನ್ನು ಮೆಡ್ರಾಸ್ ನಲ್ಲಿ(ಈಗಿನ ಚೆನ್ನೈ) 1977 ರ ಜುಲೈ 23 ರಂದು ಆರಂಭಿಸಲಾಯಿತು. ಅದನ್ನು 1990 ರ ಹೊತ್ತಿಗೆ ಇನ್ನಷ್ಟು ವಿಸ್ತರಿಸಲಾಯಿತು.[೩]
AIR ಅನೇಕ, ವಿಭಿನ್ನ ಸೇವೆಗಳನ್ನು ಹೊಂದಿದೆ.ಅಲ್ಲದೇ ಭಾರತದುದ್ದಕ್ಕೂ ವಿವಿಧ ಪ್ರದೇಶಗಳಿಗೆ/ಭಾಷೆಗಳಿಗೆ ಪ್ರತಿಯೊಂದು ಸೇವೆಯನ್ನು ಒದಗಿಸಿದೆ. AIR ಅತ್ಯಂತ ಜನಪ್ರಿಯಾ ಸೇವಾವಿಭಾಗಗಳಲ್ಲಿ ವಿವಿಧ ಭಾರತಿ ಪ್ರಸಾರ ಕೇಂದ್ರ ವೂ ಒಂದಾಗಿದೆ (ಸ್ಥೂಲವಾಗಿ "ಬಹು-ಭಾರತದ ಸೇವಾ ವಿಭಾಗ" ವೆಂದು ಅನುವಾದಿಸಲಾಗಿದೆ). ವಿವಿಧ ಭಾರತಿ ಅದರ ಸುವರ್ಣ ಮಹೋತ್ಸವವನ್ನು 2007 ರ ಅಕ್ಟೋಬರ್ 3 ರಂದು ಆಚರಿಸಿಕೊಂಡಿತು. ಕೇವಲ ವಿವಿಧ ಭಾರತಿ ಮಾತ್ರ ದತ್ತಾಂಶ ಆಧಾರಿತ ಹಾಡುಗಳನ್ನು ಒಳಗೊಂಡಿದೆ. ಈ ಹಾಡುಗಳು ಹಿಂದಿ ಚಲನಚಿತ್ರ ಸಂಗೀತದ "ಸುವರ್ಣ ಯುಗ" ವೆಂದು ಕರೆಯಲಾದ ಕಾಲಕ್ಕೆ ಸೇರಿರುವ ಹಾಡುಗಳನ್ನು ಹೊಂದಿದೆ.(ಸ್ಥೂಲವಾಗಿ 1940 ರಿಂದ 1980 ರ ವರೆಗಿನ ಹಾಡುಗಳು). ಈ ಸೇವೆ ಎಲ್ಲಾ ಸೇವೆಗಳಿಗಿಂತ ಅತ್ಯಂತ ವಾಣಿಜ್ಯವಾಗಿದೆ. ಅಲ್ಲದೇ ಇದು ಮುಂಬಯಿಮತ್ತು ಭಾರತದ ಇತರ ನಗರಗಳಲ್ಲಿ ಜನಪ್ರಿಯವಾಗಿದೆ. ಈ ಸೇವೆ ವಾರ್ತೆ, ಚಲನಚಿತ್ರ ಸಂಗೀತ, ಹಾಸ್ಯ ಕಾರ್ಯಕ್ರಮ ಇತ್ಯಾದಿಗಳನ್ನು ಒಳಗೊಂಡಂತೆ ವಿಶಾಲ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಅವಕಾಶನೀಡಿದೆ. ವಿವಿಧ ಭಾರತಿ ಕೇಂದ್ರ , ಕೆಳಗೆ ಹೆಸರಿಸಲಾದ ಪ್ರತಿಯೊಂದು ನಗರಗಳಿಗೆ ವಿಭಿನ್ನವಾದ MW ಬ್ಯಾಂಡ್ ಫ್ರೀಕ್ವೆನ್ಸೀಸ್(ಆವರ್ತನಗಳ ಸಮೂಹ) ಅನ್ನು ನೀಡುತ್ತಿದೆ. ವಿವಿಧ ಭಾರತಿಯಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳು:
ಇತರ ಸೇವೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:
AIR ಸೇವಾವಿಭಾಗಗಳ ಭಾಗಶಃ ಪಟ್ಟಿಯನ್ನು ಕೆಳಕಂಡಂತೆ ನೀಡಲಾಗಿದೆ.
ಭಾರತದ ಹೊರಗಿರುವ ರಾಷ್ಟ್ರಗಳಿಗೆ 27 ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೋ ಪ್ರಸಾರದ ಸೇವೆ ಒದಗಿಸುತ್ತದೆ. ಬಾಹ್ಯ ಸೇವಾವಿಭಾಗ ನೆರೆಯ ರಾಷ್ಟ್ರಗಳನ್ನು ತಲುಪಲು ಮಧ್ಯಮ ಗಾತ್ರದ ತರಂಗ(ಮೀಡಿಯಂ ವೇವ್) ವನ್ನು ಬಳಸಿದರೂ ಕೂಡ ,ಪ್ರಧಾನವಾಗಿ ಅಧಿಕ ಸಾಮರ್ಥ್ಯದ ಸಣ್ಣ ತರಂಗ(ಶಾರ್ಟ್ ವೇವ್) ಪ್ರಸಾರವನ್ನು ಬಳಸುತ್ತದೆ. ಭಾಷೆ ಮೂಲಕ ನಿರ್ದಿಷ್ಟ ರಾಷ್ಟ್ರಗಳಿಗೆ ಪ್ರಸಾರ ಸೇವೆ ನೀಡುತ್ತಿರುವುದರ ಜೊತೆಯಲ್ಲಿ ಕಡಲಾಚೆಯ(ಸಾಗರೋತ್ತರ) ಸಾರ್ವತ್ರಿಕ ಸೇವೆಯನ್ನು ಕಲ್ಪಿಸಿಕೊಟ್ಟಿದೆ. ಈ ಸೇವೆಯಲ್ಲಿ ಪ್ರತಿದಿನ 8¼ ಗಂಟೆಗಳ ಕಾಲ ಇಂಗ್ಲೀಷ್ ಭಾಷೆಯಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ.ಅಲ್ಲದೇ ಅಂತರರಾಷ್ಟ್ರೀಯ ಸರ್ವೇಸಾಮಾನ್ಯ ಶ್ರೋತೃಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ನೀಡುತ್ತಲಿದೆ.
AIR ನ ಯುವ-ವಾಣಿ ಸೇವೆ( 1969 ರ ಜುಲೈ 21ರಂದು ಪ್ರಾರಂಭಿಸಲಾಯಿತು), ಯುವಜನರು ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸುವ ಮೂಲಕ ಹಾಗು ವಿಭಿನ್ನ ಕಥಾವಸ್ತುಗಳ ವೈಚಾರಿಕತೆ ಮೇಲೆ ಪ್ರಯೋಗ ಮಾಡುವ ಮೂಲಕ ಉತ್ತಮ ಮತ್ತು ಶ್ರೇಷ್ಠ ಮಟ್ಟದ ರೇಡಿಯೋ ಅನುಭವವನ್ನು ಮೂಡಿಸಿದೆ. ಇದು 1017 kHz ರಲ್ಲಿ ಪ್ರಸಾರವಾಗುತ್ತದೆ. ಅದಲ್ಲದೇ 294.9 ಮೀಟರ್ ನ ಅನುರೂಪವಾಗಿದೆ. ಪ್ರತಿದಿನದ ಸಂಜೆಯ ವೇಳೆಗೆ ಇದರ ಪ್ರಸಾರವನ್ನು ನಿಗದಿಪಡಿಸಲಾಯಿತು. ಆದರೆ ಮೂರು ದಶಕಗಳಿಂದ ಇರುವ ಅನಿರೀಕ್ಷಿತವಾಗಿ ಪ್ರಸಾರ ಮಾಡಬೇಕಾಗುವ ಕಾರ್ಯಕ್ರಮಗಳ ಒತ್ತಡದಿಂದಾಗಿ ಹಾಗು "ಸಂಚಾರಿ ಮೈಕ್ರೋಫೋನ್"(ಧ್ವನಿ ವರ್ಧಕ)ನಿಂದಾಗಿ ಇದನ್ನು ನಿಗದಿತ ವೇಳೆಗೆ ಪ್ರಸಾರಮಾಡಲಾಗುತ್ತಿಲ್ಲ. ಯುವ-ವಾಣಿ ಕಾರ್ಯಕ್ರಮಗಲ್ಲ್ಲಿ ಅದರದೇ ಆದ ಶಾಶ್ವತ ಸ್ಥಾನವನ್ನು ಇನ್ನೂ ಹೊಂದಿದೆ. ಭಾರತದ ಸಮೂಹ ಮಾಧ್ಯಮದಲ್ಲಿರುವ ಕೆಲವು ಪ್ರಖ್ಯಾತ ವ್ಯಕ್ತಿಗಳು ಯುವ-ವಾಣಿಯೊಂದಿಗೆ ತಮ್ಮ (ವೃತ್ತಿಜೀವನದ) ಪಯಣವನ್ನು ಪ್ರಾರಂಭಿಸಿದ್ದರು. ಪ್ರಖ್ಯಾತ ಸಾಕ್ಷ್ಯಚಿತ್ರ ತಯಾರಕ ಪ್ರಫುಲ್ ಥಕ್ಕರ್, ಅವರ - "ಯುವ-ವಾಣಿ ಕಾರ್ಯಕ್ರಮ ನಮ್ಮ ಕಾಲೇಜು ದಿನಗಳಲ್ಲಿ ಜವಾಬ್ದಾರಿ ಕಲಿಸುವ ಹೊಸಗಾಳಿ(ತಾಜಾಗಾಳಿ)ಯ ಉಸಿರಿನಂತೆ ನಮ್ಮೊಳಗೆ ಪ್ರವೇಶಿಸಿತು. ಇದು ನನಗೆ ಅತ್ಯಂತ ಅದ್ಭುತ ಕಲಿಕೆಯ ಅನುಭವವಾಗಿತ್ತು. ಅದಲ್ಲದೇ ರೇಡಿಯೋ ಕೇವಲ ಅವಿವೇಕದ ಉಲ್ಲೇಖಗಳು ಮತ್ತು PJ ಗಳು ಮಾತ್ರವಲ್ಲ ಎಂಬುದನ್ನು ನನಗೆ ಮನವರಿಕೆ ಮಾಡಿಕೊಟ್ಟಿತು" ಎಂದು ಹೇಳಿದ್ದಾರೆ. ಹಿಂದೆ ಯುವ-ವಾಣಿಯೊಂದಿಗೆ ಹಲವಾರು ಹೆಸರುಗಳು ತಳಿಕು ಹಾಕಿಕೊಂಡಿದ್ದವು. ಅದರಲ್ಲಿ ಹೆಸರಿಸಲಾಗುವ ಇತರ ಕೆಲವೊಂದು ಪ್ರಮುಖ ಹೆಸರುಗಳು ಪ್ರಖ್ಯಾತ ಗೇಮ್ ಪ್ರದರ್ಶನಗಳ ನಿರೂಪಕ ರೋಶನ್ ಅಬ್ಬಾಸ್, VJ ಗೌರವ್ ಕಪೂರ್ , ಎಮ್ಸಿ ಕ್ಷಿತಿಜ್ ಶರ್ಮ ಮತ್ತು DJ ಪ್ರಥಮ್ ಇವರುಗಳ ಹೆಸರುಗಳನ್ನು ಒಳಗೊಂಡಿದೆ.
ಆಲ್ ಇಂಡಿಯಾ ರೇಡಿಯೋ, ದೂರವಾಣಿಯ ಮೂಲಕ ವಾರ್ತಾ ಸೇವೆಯನ್ನು ನವ ದೆಹಲಿಯಿಂದ 1998 ರ ಫೆಬ್ರವರಿ 25 ರಂದು ಪ್ರಾರಂಭಿಸಿದ ನಂತರ ಈ ಸೇವೆಯನ್ನು ಚೆನೈ, ಮುಂಬಯಿ, ಹೈದ್ರಾಬಾದ್ , ಇಂದೋರ್, ಪಾಟ್ನಾ ಮತ್ತು ಬೆಂಗಳೂರಿನಿಂದ ನಡೆಸುತ್ತಿದೆ. ಈ ಸೇವೆಯನ್ನು STD, ISD ಅಥವಾ ಸ್ಥಳೀಯ ದೂರವಾಣಿ ಕರೆಗಳ ಮೂಲಕ ಪಡೆಯಬಹುದು. ಈ ಸೇವೆಯನ್ನು ಮುಂದೆ ಹೆಸರಿಸಲಾದ 9 ನಗರಗಳಲ್ಲಿ ಸ್ಥಾಪಿಸುವ ಯೋಜನೆಯನ್ನು ಹೊಂದಿದೆ — ಅಹಮದಾಬಾದ್, ಭೋಪಾಲ್ ಗೌಹಾತಿ, ಗ್ವಾಲಿಯರ್, ಜಬಲ್ ಪುರ್ , ಜೈಪುರ್,ಕೋಲ್ಕತ್ತ, ಲಕ್ನೋ, ರಾಂಚಿ, ಶಿಮ್ಲಾ ಮತ್ತು ಸದ್ಯದಲ್ಲೇ ತಿರುವನಂತಪುರಂ. ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರತಿಗಂಟೆಗೆ ಪ್ರಸಾರವಾಗುವ ಸುದ್ಧಿ ಸಂಗ್ರಹಗಳನ್ನು ನೇರವಾಗಿ http://www.newsonair.com Archived 2012-06-21 ವೇಬ್ಯಾಕ್ ಮೆಷಿನ್ ನಲ್ಲಿ.. ವೆಬ್ ಸೈಟ್ ನಲ್ಲಿ ಆಲಿಸಬಹುದು. ಸೈಟ್ ನಿಂದ MP3 ಕ್ರಮವ್ಯವಸ್ಥೆಯಲ್ಲಿ ಸುದ್ದಿಯನ್ನು ನೇರವಾಗಿ ಕೇಳಬಹುದಾಗಿದೆ. ಫೈಲ್ ಹೆಸರಿನಲ್ಲಿ ಪ್ರತಿಗಂಟೆಯ ಸುದ್ಧಿಯನ್ನು ತಿಳಿಸಲಾಗಿರುತ್ತದೆ . ಇಂಗ್ಲೀಷ್ ಮತ್ತು ಹಿಂದಿ ಸುದ್ಧಿ ಸಂಗ್ರಹದ ವಿಷಯವನ್ನು http://www.newsonair.com/BulletinsInd.html Archived 2006-09-02 ವೇಬ್ಯಾಕ್ ಮೆಷಿನ್ ನಲ್ಲಿ.. ವೈಬ್ ಸೈಟ್ ನಿಂದ ಓದಬಹುದು. http://www.newsonair.com/index_regional.htm Archived 2007-11-14 ವೇಬ್ಯಾಕ್ ಮೆಷಿನ್ ನಲ್ಲಿ. ವೈಬ್ ಸೈಟ್ ನಿಂದ AIR ಸುದ್ಧಿ ಸಂಗ್ರಹಗಳು 9 ಪ್ರಾದೇಶಿಕ ಭಾಷೆಗಳಲ್ಲಿವೆ(ತಮಿಳು, ಕನ್ನಡ, ಗುಜರಾತಿ, ಬೆಂಗಾಲಿ, ಮರಾಠಿ, ಈಶಾನ್ಯ, ಪಂಜಾಬಿ, ತೆಲುಗು, ಉರ್ದು).
ಇದರ ಆಜಾದ್ ಹಿಂದ್ ರೇಡಿಯೋ ಮೂಲಕ ಇದು ನಿರಂತರವಾಗಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ, ಸುಭಾಷ್ ಚಂದ್ರ ಬೋಸ್ ಸ್ವಾತಂತ್ರ್ಯ ಪೂರ್ವದ AIR ಅನ್ನು ಆಂಟಿ ಇಂಡಿಯನ್ ರೇಡಿಯೋ ವನ್ನು ಸೂಚಿಸಲು ಬಳಸುತ್ತಿದ್ದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.