ಅಂತರರಾಷ್ಟ್ರೀಯ ವ್ಯಾಪಾರ
From Wikipedia, the free encyclopedia
ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರ. ಇಧನ್ನು ವಿದೇಶಿ ವ್ಯಾಪಾರವೆಂದು ಕರೆಯುತ್ತಾರೆ. ಅಂತರರಾಷ್ಟ್ರೀಯ ಅಥವಾ ವಿದೇಶಿ ವ್ಯಾಪಾರವೆಂದರೆ ಅಗತ್ಯವಾದ ವಸ್ತುಗಳನ್ನು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದು ಅಥವಾ ನಮ್ಮಲ್ಲಿರುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ರಫ್ತುಮಾಡುವುದು. ಅಂದರೆ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದೊಂದಿಗೆ ವಸ್ತುಗಳನ್ನು ಕೊಳ್ಳುವ ಹಾಗೂ ಮಾರಾಟ ಮಾರಾಟ ಒಂದು ವ್ಯವಹಾಅರವೇ ಅಂತರರಾಷ್ಟ್ರೀಯ ವ್ಯಾಪಾರ. ಈ ಬಗೆಯ ವ್ಯಾಪಾರದಲ್ಲಿ ಹಾಗೂ ಸೇವೆಗಳ ವಿನಿಮಯವು ವಿಶ್ವದ ಎರಡು ಅಥವಾ ಹೆಚ್ಚು ರಾಷ್ಟ್ರಗಳೊಂದಿಗೆ ನಡೆಯುತ್ತದೆ. ಉದಾ : ಜಪಾನ್ ಹಾಗೂ ಅಮೆರಿಕಾ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವು ಅಂತರರಾಷ್ಟ್ರೀಯ ವ್ಯಾಪಾರವಾಗುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಜೀವನ ಸೌಲಭ್ಯಗಳಿಗೆ ಬೇಕಾದ ಹಲವಾರು ಬಗೆಯ ಪದಾರ್ಥಗಳನ್ನು ಒಂದಲ್ಲ ಒಂದು ಬಗೆಯಲ್ಲಿ ಪೂರೈಸುತ್ತಿರುವುದನ್ನು ನಾವು ಕಾಣಬಹುದು. ಇದೇ ರೀತಿ ನಮ್ಮ ದೇಶವೂ ಈ ರಾಷ್ಟ್ರಗಳಿಗೆ ಎಣ್ಣೆಕಾಳುಗಳು, ಮ್ಯಾಂಗ್ನೀಸ್, ಕಬ್ಬಿಣದ ಅದಿರು, ಸೆಣಬಿನ ವಸ್ತುಗಳು ಇತ್ಯಾದಿ ರಫ್ತುಮಾಡುತ್ತದೆ. ಈ ರೀತಿ ಬೇರೆ ಬೇರೆ ರಾಷ್ಟ್ರಗಳು ಸರಕುಗಳನ್ನು ವಿನಿಮಯ ಮಾಡಿಕೊಳ್ಳುವ ಕಾರ್ಯವನ್ನು ಅಂತರರಾಷ್ಟ್ರಿಯ ಅಥವಾ ವಿದೇಶಿ ವ್ಯಾಪಾರ ಎನ್ನುತ್ತೇವೆ. ಅಂತರರಾಷ್ಟ್ರೀಯ ವ್ಯಾಪಾರವು ಭೌಗೋಲಿಕ ಶ್ರಮವಿಭಜನೆಯಿಂದ ಉಂಟಾಗುತ್ತದೆ.
![]() | ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕಿಕರಣದ ಅಗತ್ಯವಿದೆ. (ನವೆಂಬರ್ ೨೦೧೭) |