From Wikipedia, the free encyclopedia
ಅಂಡವಾಯು ಎಂಬುದು ಅಂಗವೊಂದರ ಅಥವಾ ಅಂಗವೊಂದರ ಸ್ನಾಯುವಿನ ಗೋಡೆಯ ಒಂದು ಮುಂಚಾಚಿರುವಿಕೆಯಾಗಿದ್ದು, ಸಾಮಾನ್ಯವಾಗಿ ಅದನ್ನು ಒಳಗೊಂಡಿರುವ ಕುಳಿಯ ಮೂಲಕ ಇದು ಕಂಡುಬರುತ್ತದೆ. ವಪೆಯಲ್ಲಿನ ಅನ್ನನಾಳದ ತೆರಪಿನ ಮೂಲಕ ಹೊಟ್ಟೆಯು ಮೇಲ್ಮುಖವಾಗಿ ವಿಭಾಜಕ ಭಿತ್ತಿಯೊಳಗಡೆ ಮುಂಚಾಚಿದಾಗ ಲೋಪದೊಂದಿಗಿನ ಅಂಡವಾಯುವೊಂದು ಸಂಭವಿಸುತ್ತದೆ.
ಸ್ಪಷ್ಟವಾಗಿ ಹೇಳಬೇಕೆಂದರೆ, ಅತಿ ಸಾಮಾನ್ಯವಾದ ಅಂಡವಾಯುಗಳು ಕಿಬ್ಬೊಟ್ಟೆಯಲ್ಲಿ ಹುಟ್ಟಿಕೊಳ್ಳುತ್ತವೆ. ಕಿಬ್ಬೊಟ್ಟೆಯ ಭಾಗದ ಗೋಡೆಯಲ್ಲಿನ ದೋಷವೊಂದು ಸೀಮಿತಗೊಳಿಸಲ್ಪಟ್ಟಿರುವ ರಂಧ್ರ, ಅಥವಾ "ಊನ"ವೊಂದರೊಳಗೆ ಹೊರಹೊಮ್ಮಿದಾಗ ಅಂಡವಾಯುಗಳು ಕಂಡುಬರುತ್ತವೆ. ಈ ಊನಗಳು ಅಥವಾ ರಂಧ್ರಗಳ ಮೂಲಕ ಮೇಧಸ್ಸುಳ್ಳ ಅಂಗಾಂಶ, ಅಥವಾ ಜಠರದ ಒಳಪೊರೆಯೊಂದಿಗೆ ಆವರಿಸಲ್ಪಟ್ಟಿರುವ ಕಿಬ್ಬೊಟ್ಟೆಯ ಭಾಗದ ಅಂಗಗಳು ಮುಂಚಾಚಬಹುದಾಗಿರುತ್ತವೆ.ಮತ್ತೊಂದು ಸಾಮಾನ್ಯ ಅಂಡವಾಯುವು ಬೆನ್ನಿನ ಮೃದ್ವಸ್ಥಿ ತಟ್ಟೆಗಳನ್ನು ಒಳಗೊಳ್ಳುತ್ತದೆ ಮತ್ತು ಕಟಿನರದ ಬೇನೆಯನ್ನು ಉಂಟುಮಾಡುತ್ತದೆ. ಅಂಡವಾಯುಗಳ ಗುಣಲಕ್ಷಣಗಳು ಭಿನ್ನವಾಗುತ್ತಾ ಹೋಗುತ್ತವೆ. ಇವು ಕಂಡುಬಂದ ಪ್ರದೇಶದಲ್ಲಿ ನೋವಿರಬಹುದು ಅಥವಾ ಇಲ್ಲದಿರಬಹುದು; ಕಣ್ಣಿಗೆ ಕಾಣಿಸುವ ಅಥವಾ ಸ್ಪರ್ಶಗೋಚರವಾಗಿರುವ ಒಂದು ಗಂಟು ಅಥವಾ ಗಡ್ಡೆಯು ಅಲ್ಲಿರಬಹುದು ಅಥವಾ ಇಲ್ಲದಿರಬಹುದು. ಇನ್ನು ಕೆಲವು ನಿದರ್ಶನಗಳಲ್ಲಿ, ಹೆಚ್ಚು ಅಸ್ಪಷ್ಟವಾದ ರೋಗಲಕ್ಷಣಗಳು ಕಂಡುಬರಬಹುದು. ಅಂಡವಾಯುವಿನಲ್ಲಿ ಸಿಕ್ಕಿಹಾಕಿಕೊಂಡಿರುವ ಅಂಗವೊಂದರ ಮೇಲೆ ಬೀಳುವ ಒತ್ತಡದಿಂದಾಗಿ ಕಂಡುಬರುವ ಇವು, ಕೆಲವೊಮ್ಮೆ ಅಂಗದ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಮೇಧೋಯುಕ್ತ ಅಂಗಾಂಶವು ಅಂಡವಾಯುವೊಂದನ್ನು ಮೊದಲು ಪ್ರವೇಶಿಸುತ್ತದೆಯಾದರೂ, ಇದನ್ನು ಅಂಗವೊಂದು ಅನುಸರಿಸಬಹುದು ಅಥವಾ ಜೊತೆಗೇ ಬರಬಹುದು.ಬಹುತೇಕ ಸಮಯದಲ್ಲಿ, ಆವಾಸಸ್ಥಾನವಾಗಿರುವ ಅಂಗದ ವಿಭಾಗಗಳಲ್ಲಿನ ಒತ್ತಡವು ಹೆಚ್ಚಾದಾಗ, ಮತ್ತು ಎಲ್ಲೆಯು ದುರ್ಬಲವಾಗಿದ್ದಾಗ ಅಥವಾ ದುರ್ಬಲಗೊಳಿಸಲ್ಪಟ್ಟಾಗ ಅಂಡವಾಯುಗಳು ರೂಪುಗೊಳ್ಳಬಹುದು.
ಅಂಗರಚನಾ ವಿನ್ಯಾಸದ ಅನ್ವಯ ಸ್ಥಿತಗೊಂಡಿರುವ ಅಂಡವಾಯುಗಳ ನೆಲೆಗಳ ಆಧಾರದ ಮೇಲೆ ಅವುಗಳನ್ನು ವರ್ಗೀಕರಿಸಬಹುದು: ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:
ಅಂಗದ ಅಪಸಾಮಾನ್ಯ ಕ್ರಿಯೆ, ಗ್ಯಾಂಗ್ರೀನು, ಬಹು ಅಂಗ ಅಪಸಾಮಾನ್ಯ ಕ್ರಿಯೆ ರೋಗಲಕ್ಷಣ, ಮತ್ತು ಸಾವು ಇವೇ ಮೊದಲಾದ ಸಮಸ್ಯೆಗಳನ್ನು ತಡೆಗಟ್ಟಲು ಅಂಡವಾಯುಗಳನ್ನು ಕ್ಷಿಪ್ರವಾಗಿ ದುರಸ್ತಿ ಮಾಡುವುದರ ಕುರಿತು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಕಿಬ್ಬೊಟ್ಟೆಯ ಭಾಗದ ಬಹುತೇಕ ಅಂಡವಾಯುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸುಸ್ಥಿತಿಗೆ ತರಬಹುದು, ಮತ್ತು ಆರೋಗ್ಯಲಾಭವನ್ನು ಪಡೆಯುವ ದೃಷ್ಟಿಯಿಂದ ಜೀವನಶೈಲಿಯಲ್ಲಿ ಸುದೀರ್ಘ-ಅವಧಿಯ ಬದಲಾವಣೆಗಳನ್ನು ತಂದುಕೊಳ್ಳುವುದು ಅಗತ್ಯವಾಗೇನೂ ಕಾಣಿಸುವುದಿಲ್ಲ. ಅಂಡವಾಯುವಿಗೆ ಈಡಾದ ಅಂಗಾಂಶವನ್ನು ಹಿಂದಕ್ಕೆ ತಳ್ಳುವುದರಿಂದ, ಅಥವಾ "ತಗ್ಗಿಸುವುದರಿಂದ", ಜಟಿಲಗೊಂಡಿರದ ಅಂಡವಾಯುಗಳನ್ನು ಪ್ರಧಾನವಾಗಿ ಅಥವಾ ಬಹುಮಟ್ಟಿಗೆ ಸುಸ್ಥಿತಿಗೆ ತರಲಾಗುತ್ತದೆ. ನಂತರ ಸ್ನಾಯು ಅಂಗಾಂಶದಲ್ಲಿನ ನ್ಯೂನತೆಯನ್ನು ಸರಿಪಡಿಸಲಾಗುತ್ತದೆ (ಈ ಶಸ್ತ್ರಕ್ರಿಯೆಗೆ ಹರ್ನಿಯೋರಾಫಿ ಎಂದು ಕರೆಯುತ್ತಾರೆ). ಒಂದುವೇಳೆ ತೊಡಕುಗಳು ಸಂಭವಿಸಿದ್ದರೆ, ಶಸ್ತ್ರಚಿಕಿತ್ಸಾ ತಜ್ಞರು ಅಂಡವಾಯುವಿಗೊಳಗಾದ ಅಂಗದ ಕಾರ್ಯಶಕ್ತಿಯನ್ನು ತಪಾಸಣೆ ಮಾಡಿ, ಅಗತ್ಯಬಿದ್ದಲ್ಲಿ ಒಂದು ಭಾಗವನ್ನು ಕತ್ತರಿಸಿ ತೆಗೆಯುತ್ತಾರೆ.ಸ್ನಾಯು ಬಲವರ್ಧನೆಯ ಆಧುನಿಕ ವಿಧಾನಗಳು ಸಂಶ್ಲೇಷಿತ ಸಾಮಗ್ರಿಗಳನ್ನು (ಜಾಲರಿಯಂಥ ಒಂದು ಕೃತಕಾಂಗ) ಒಳಗೊಂಡಿರುತ್ತವೆಯಾದ್ದರಿಂದ, ಅವು ಈಗಾಗಲೇ ದುರ್ಬಲಗೊಂಡಿರುವ ಅಂಗಾಶವು ಮತ್ತಷ್ಟು ಹೆಚ್ಚಾಗಿ ಎಳೆತಕ್ಕೆ ಒಳಗಾಗುವುದನ್ನು ತಪ್ಪಿಸುತ್ತವೆ (ಹಳೆಯದಾದ, ಆದರೆ ಇನ್ನೂ ಪ್ರಯೋಜನಕಾರಿಯಾದ ವಿಧಾನಗಳಲ್ಲಿರುವಂತೆ). ಜಾಲರಿಯನ್ನು ನ್ಯೂನತೆಯ ಮೇಲ್ಭಾಗದಲ್ಲಿ ಇರಿಸಲಾಗುತ್ತದೆ (ಮುಂಭಾಗದ ದುರಸ್ತಿ) ಅಥವಾ ಹೆಚ್ಚು ಸಂದರ್ಭಗಳಲ್ಲಿ ನ್ಯೂನತೆಯ ಕೆಳಗೆ (ಹಿಂಭಾಗದ ದುರಸ್ತಿ) ಇರಿಸಲಾಗುತ್ತದೆ. ಜಾಲರಿಯನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಕೆಲವೊಮ್ಮೆ ಸೂಕ್ಷ್ಮತಂತುಗಳನ್ನು ಬಳಸಲಾಗುತ್ತದೆ. ಈ ಜಾಲರಿ ದುರಸ್ತಿಯ ವಿಧಾನಗಳನ್ನು ಹೆಚ್ಚಿನಂಶ "ಸೆಳೆತ ಮುಕ್ತ" ದುರಸ್ತಿಕ್ರಮಗಳೆಂದು ಕರೆಯಲಾಗುತ್ತದೆ. ಏಕೆಂದರೆ ಹಳೆಯ ಸಾಂಪ್ರದಾಯಿಕ ವಿಧಾನಗಳಲ್ಲಿರುವಂತೆ ಈ ವಿಧಾನದಲ್ಲಿ ಸೆಳೆತದ ಅಡಿಯಲ್ಲಿ ಸ್ನಾಯುವನ್ನು ಒಟ್ಟಿಗೇ ಎಳೆಯಲಾಗುವುದಿಲ್ಲ. ಹೊಲಿಗೆ ದುರಸ್ತಿಗೆ ಸಂಬಂಧಿಸಿದ ಹಳೆಯ ವಿಧಾನಗಳಿಗೆ ಹೋಲಿಸಿದಾಗ, ಈ ಸೆಳೆತ-ಮುಕ್ತ ವಿಧಾನಗಳಲ್ಲಿ ಪುನರಾವರ್ತನೆಗಳ ಶೇಕಡಾವಾರು ಪ್ರಮಾಣ ಅತ್ಯಂತ ಕಡಿಮೆ ಮಟ್ಟದದಲ್ಲಿದ್ದು, ಆರೋಗ್ಯಲಾಭ ಅಥವಾ ಸುಧಾರಣೆಯ ಅವಧಿಯೂ ಅತ್ಯಂತ ವೇಗವಾಗಿರುತ್ತದೆ. ಆದಾಗ್ಯೂ, ಜಾಲರಿಯ ಬಳಕೆಯು ಆರೋಗ್ಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆಗಳ ಒಂದು ಅಧ್ಯಯನಾ ವಿಷಯವಾಗಿರುವುದರಿಂದಾಗಿ, ಪೂರಣ-ಚಿಕಿತ್ಸೆಯ ಜಾಲರಿ ಬಳಕೆಯು ಹೆಚ್ಚಿನ ಪ್ರಮಾಣದಲ್ಲಿನ ಸೋಂಕಿನ ವ್ಯಾಪಕತೆ ಅಥವಾ ತಗಲುವಿಕೆಗೆ ಕಾರಣವಾಗಬಹುದು ಎಂಬಂತೆ ಕಂಡುಬರುತ್ತದೆ.[2] ಜಾಲರಿಯ ಸೋಂಕುಗಳಿಗೆ ಸಂಬಂಧಿಸಿದ ಅಂಶಗಳನ್ನು ಗುರುತಿಸಲು ಅಧ್ಯಯನವೊಂದು ಪ್ರಯತ್ನಿಸಿತು ಮತ್ತು ಕಳಂಕಿತ ಪ್ರತಿರಕ್ಷಿತ ವ್ಯವಸ್ಥೆಗಳು (ಮಧುಮೇಹದಂಥದು) ಇದಕ್ಕೆ ಕಾರಣವಾದ ಒಂದು ಅಂಶವಾಗಿದೆ ಎಂದು ಅದು ಕಂಡುಕೊಂಡಿತು.[3] ಹಿಂದಕ್ಕೆ ತೆಗೆದುಕೊಂಡ ತೀರ್ಮಾನಗಳು ಹಾಗೂ ಶಿಷ್ಟಕ್ರಮದ ಕಾನೂನು ದಾವೆಗಳಿಗೂ ಜಾಲರಿಯು ಒಂದು ವಿಷಯವಾಗಿ ಪರಿಣಮಿಸಿದೆ.[4]ಲ್ಯಾಪರೋಸ್ಕೋಪ್ಗಳ ಮೂಲಕ ಕೆಲವೊಂದು ದುರಸ್ತಿಗಳನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿದೆ.ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯು "ಕನಿಷ್ಟ ಪ್ರಮಾಣದಲ್ಲಿ ಅತಿಕ್ರಮಿಸುವ" ಶಸ್ತ್ರಚಿಕಿತ್ಸೆಯೆಂದೂ ಹೆಸರಾಗಿದೆ. ಶಸ್ತ್ರಚಿಕಿತ್ಸಾತಜ್ಞನ ಕೈಗಳು ರೋಗಿಯ ದೇಹದೊಳಗೆ ತೂರಿಕೊಳ್ಳುವಷ್ಟು ದೊಡ್ಡದಾಗಿ ಕೊಯ್ತವನ್ನು ಮಾಡಬೇಕಾಗಿ ಬರುವ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯಲ್ಲಿರುವ "ಮುಕ್ತ" ಅಥವಾ "ಸೂಕ್ಷ್ಮದರ್ಶೀಯ" ವಿಧಾನಕ್ಕೆ ಪ್ರತಿಯಾಗಿ, ಸೂಕ್ಷ್ಮಗಾತ್ರದ ಕ್ಯಾಮರಾ ಮತ್ತು ಉಪಕರಣಗಳನ್ನು ಒಳಗೆ ತೂರಿಸಲು ಒಂದು ಅಥವಾ ಹೆಚ್ಚು ಸಣ್ಣ ಕೊಯ್ತಗಳನ್ನು ಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ ಮಾಡಲಾಗುತ್ತದೆ. ತೆರೆದ ಶಸ್ತ್ರಚಿಕಿತ್ಸೆಯ ಅವಧಿಯಲ್ಲಿ ಬಳಸಲಾಗುವ ವರ್ಧಕ ಉಪಕರಣಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮದರ್ಶೀಯ ಶಸ್ತ್ರಚಿಕಿತ್ಸೆ ಎಂಬ ರಕ್ಷಣಾತ್ಮಕ ಮತ್ತು ತಪ್ಪುದಾರಿಗೆಳೆಯುವ ಪದವನ್ನು ಉಲ್ಲೇಖಿಸಲಾಗುತ್ತದೆ.
ಹಗಲಿನ ಶಸ್ತ್ರಚಿಕಿತ್ಸಾ ಕೇಂದ್ರಗಳ ಮೂಲಕ ಅನೇಕ ರೋಗಿಗಳ ನಿಗಾವಣೆ ನಡೆಯುತ್ತಿದ್ದು, ಒಂದು ಅಥವಾ ಎರಡು ವಾರದೊಳಗೆ ತಂತಮ್ಮ ಕೆಲಸ-ಕಾರ್ಯಗಳಿಗೆ ಹಿಂದಿರುಗಬಲ್ಲಷ್ಟು ಅವರು ಸಮರ್ಥರಾಗಿದ್ದಾರೆ. ಆದರೆ ದೀರ್ಘಕಾಲದವರೆಗೆ ತೀವ್ರಸ್ವರೂಪದ ಕಾರ್ಯಚಟುವಟಿಕೆಗಳಲ್ಲಿ ಅವರು ತೊಡಗಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಜಾಲರಿಯ ಬಳಕೆಯೊಂದಿಗೆ ತಮ್ಮ ಅಂಡವಾಯುಗಳ ದುರಸ್ತಿಯನ್ನು ಹೊಂದಿದ ರೋಗಿಗಳು ಕೆಲವೊಮ್ಮೆ ಹಲವು ದಿನಗಳೊಳಗೆ ಸುಸ್ಥಿತಿಗೆ ಮರಳುತ್ತಾರೆ. ಶಸ್ತ್ರಚಿಕಿತ್ಸೆಯ ತೊಡಕುಗಳು ಏನಿಲ್ಲವೆಂದರೂ ಸುಮಾರು 10%ನಷ್ಟು ಪ್ರಮಾಣದವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದರೂ, ಅವುಗಳಲ್ಲಿನ ಬಹುತೇಕ ತೊಡಕುಗಳನ್ನು ಸುಲಭವಾಗಿ ಪರಿಹರಿಸಬಹುದಾಗಿದೆ. ಶಸ್ತ್ರಚಿಕಿತ್ಸೆಯ ಸ್ಥಳದಲ್ಲಿ ಕಂಡುಬರುವ ಸೋಂಕುಗಳು, ನರ ಹಾಗೂ ರಕ್ತದನಾಳದ ಗಾಯಗಳು, ಸನಿಹದ ಅಂಗಗಳಿಗಾಗುವ ಗಾಯ, ಮತ್ತು ಅಂಡವಾಯುವಿನ ಮರುಕಳಿಸುವಿಕೆ ಇವೇ ಮೊದಲಾದವುಗಳು ಸದರಿ ತೊಡಕುಗಳಲ್ಲಿ ಸೇರಿವೆ.ಆಧಾರವಾಗಿರುವ ನ್ಯೂನತೆಗಳನ್ನು ದುರಸ್ತಿ ಮಾಡದೆಯೇ ಅಂಡವಾಯುವಿನ ತಗ್ಗಿಸುವಿಕೆಯನ್ನು ನಿರ್ವಹಿಸುವ ಬಾಹ್ಯ ಉಪಕರಣಗಳನ್ನು (ಅಂದರೆ, ಅಂಡವಾಯು ಆಸರೆಕಟ್ಟುಗಳು, ಕಾಂಡಗಳು, ಪಟ್ಟಿಗಳು, ಇತ್ಯಾದಿಯಂಥವು) ಬಳಸುವುದು ಸಾಮಾನ್ಯವಾಗಿ ಶಿಫಾರಸು ಮಾಡಲ್ಪಟ್ಟಿಲ್ಲ. ಶಸ್ತ್ರಕ್ರಿಯೆಯ ಸ್ವಲ್ಪ ಹೊತ್ತಿನ ನಂತರ ಉದ್ಭವಿಸುವ ಜಟಿಲಗೊಂಡಿರದ ಸೀಳುಕೊಯ್ತದ ಅಂಡವಾಯುಗಳು (ಕೆಲವು ತಿಂಗಳ ನಂತರವೇ ಇವನ್ನು ಶಸ್ತ್ರಕ್ರಿಯೆಗೆ ಈಡುಮಾಡಬೇಕು), ಅಥವಾ ಶಸ್ತ್ರಕ್ರಿಯೆಗೆ ಈಡುಮಾಡಲಾಗದ ರೋಗಿಗಳು ಇದಕ್ಕೆ ಹೊರತಾಗಿವೆ.ಶ್ರಮಸಾಧ್ಯವಾದ ಕೆಲಸವನ್ನು ಕೈಗೊಳ್ಳುವುದರಿಂದ ಅಂಡವಾಯುವು ಮುಂದೆ ಮತ್ತೆ ಕೆರಳಿಕೆಗೆ ಒಳಗಾಗದಂತೆ ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯವಾಗಿರುತ್ತದೆ.
ಕ್ರೀಡಾಪಟುವಿನ ಅಂಡವಾಯು ಎಂಬುದೊಂದು ರೋಗಲಕ್ಷಣವಾಗಿದ್ದು, ಕ್ರೀಡಾಪಟುಗಳಲ್ಲಿ ಕಂಡುಬರುವ ದೀರ್ಘಕಾಲದ ತೊಡೆಸಂದು ನೋವುಗಳಿಂದ ಮತ್ತು ಒಂದು ನಿಜವಾದ ಅಂಡವಾಯುವಿನ ಅಸ್ತಿತ್ವವಿರದಿದ್ದರೂ, ತೊಡೆಸಂದಿಯ ನಾಳದ ಹಿಗ್ಗಿಸಲಾದ ಹೊರಗಣ ವರ್ತುಲವೊಂದರಿಂದ ವಿಶಿಷ್ಟವಾಗಿಸಲ್ಪಟ್ಟಿದೆ.
ಸ್ಪಷ್ಟವಾಗಿ ಹೇಳುವುದಾದರೆ, ಬಹು ಸಾಮಾನ್ಯವಾದ ಅಂಡವಾಯುಗಳು (ಕಿಬ್ಬೊಟ್ಟೆಯ ಭಾಗದ ಎಲ್ಲಾ ಅಂಡವಾಯುಗಳ ಪೈಕಿ 75%ನವರೆಗೆ) ತೊಡೆಸಂದಿಯ ಅಂಡವಾಯುಗಳೇ ಆಗಿರುತ್ತವೆ. ತೊಡೆಸಂದಿಯ ನಾಳದ ಅಂಗರಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಒಳನೋಟದ ಅಗತ್ಯವಿದೆ. ತೊಡೆಸಂದಿಯ ಅಂಡವಾಯುಗಳನ್ನು ಮತ್ತೆ ಅತಿ ಸಾಮಾನ್ಯವಾದ ತೊಡೆಸಂದಿಯ ಪರೋಕ್ಷ ಅಂಡವಾಯು ಹಾಗೂ ತೊಡೆಸಂದಿಯ ಪ್ರತ್ಯಕ್ಷ ಅಂಡವಾಯು ಮಾದರಿಗಳಾಗಿ ವಿಂಗಡಿಸಲಾಗಿದೆ. ತೊಡೆಸಂದಿಯ ಪರೋಕ್ಷ ಅಂಡವಾಯುವಿನಲ್ಲಿ (2/3, ಇಲ್ಲಿ ಚಿತ್ರಿಸಲಾಗಿರುವುದು) ತೊಡೆಸಂದಿಯ ನಾಳವು ಅದರ ಪ್ರವೇಶದ್ವಾರದಲ್ಲಿನ (ತೊಡೆಸಂದಿಯ ಆಂತರಿಕ ಉಂಗುರ) ಹುಟ್ಟಿನಿಂದ ಬಂದ ಒಂದು ನ್ಯೂನತೆಯ ಮೂಲಕ ಪ್ರವೇಶಿಸಿರುತ್ತದೆ. ತೊಡೆಸಂದಿಯ ಪ್ರತ್ಯಕ್ಷ ಅಂಡವಾಯು ಮಾದರಿಯಲ್ಲಿ (1/3) ಅಂಡವಾಯುವಿನ ಅಂತರ್ಗತ ಅಂಶಗಳು ತೊಡೆಸಂದಿಯ ನಾಳದ ಹಿಂದಿನ ಗೋಡೆಯಲ್ಲಿನ ಒಂದು ದುರ್ಬಲ ಸ್ಥಾನದ ಮೂಲಕ ತೂರಿಕೊಳ್ಳುತ್ತವೆ. ತೊಡೆಸಂದಿಯ ಅಂಡವಾಯುಗಳು ಪುರುಷರು ಮತ್ತು ಮಹಿಳೆಯರಲ್ಲಿನ ಅಂಡವಾಯುವಿನ ಪೈಕಿ ಅತಿಸಾಮಾನ್ಯವಾದ ಬಗೆಯಾಗಿದೆ. ತೊಡೆಯೆಲುಬಿನ ಅಂಡವಾಯುಗಳು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಹೆಚ್ಚು ಬಾರಿ ಸಂಭವಿಸುತ್ತವೆಯಾದರೂ, ತೊಡೆಯೆಲುಬಿನ ಅಂಡವಾಯುಗಳಿಗಿಂತ ತೊಡೆಸಂದಿಯ ಅಂಡವಾಯುಗಳಿಗೆ ಮಹಿಳೆಯರು ಈಗಲೂ ಹೆಚ್ಚು ಈಡಾಗುತ್ತಾರೆ.
ಕಿಬ್ಬೊಟ್ಟೆಯ ಭಾಗದ ಅಂತರ್ಗತ ವಸ್ತುಗಳು ತೊಡೆಯೆಲುಬಿನ ನಾಳದ ಹಿಂಭಾಗದ ಗೋಡೆಯ ದುರ್ಬಲ ಪ್ರದೇಶದೊಳಗೆ ಹಾದುಹೋದಾಗ ತೊಡೆಯೆಲುಬಿನ ಅಂಡವಾಯುಗಳು ತೊಡೆಸಂದಿಯ ಮೂಳೆನಾರಿನ ಸ್ವಲ್ಪವೇ ಕೆಳಗಿನ ಭಾಗದಲ್ಲಿ ಉಂಟಾಗುತ್ತವೆ. ತೊಡೆಸಂದಿಯ ಅಂಡವಾಯುವಿನ ಮಾದರಿಯಿಂದ ಅವುಗಳನ್ನು ಪ್ರತ್ಯೇಕಿಸುವುದು (ಅದರಲ್ಲೂ ವಿಶೇಷವಾಗಿ ಸೆಫಲಾಡ್ ಭಾಗವನ್ನು ಹತ್ತುತ್ತಿರುವಾಗ) ಸ್ವಲ್ಪ ಕಷ್ಟವಾಗಬಹುದು: ಆದಾಗ್ಯೂ, ಸಾಮಾನ್ಯವಾಗಿ ಅವು ಹೆಚ್ಚು ದುಂಡಗಿನ ಆಕಾರದಲ್ಲಿ ಕಾಣಿಸಿಕೊಳ್ಳುತ್ತವೆ, ಮತ್ತು, ತೊಡೆಸಂದಿಯ ಅಂಡವಾಯುಗಳಿಗೆ ಪ್ರತಿಯಾಗಿ, ತೊಡೆಯೆಲುಬಿನ ಅಂಡವಾಯುಗಳಲ್ಲಿ ಮಹಿಳೆಯರದೇ ಒಂದು ಬಲವಾದ ಮೇಲುಗೈ ಕಂಡುಬರುತ್ತದೆ. ತೊಡೆಯೆಲುಬಿನ ಅಂಡವಾಯುಗಳಲ್ಲಿನ ಸಂಪೀಡನದ ಕಾಣಿಸಿಕೊಳ್ಳುವಿಕೆಯ ಪ್ರಮಾಣವು ಹೆಚ್ಚಿರುತ್ತದೆ. ದುರಸ್ತಿಯ ವಿಧಾನಗಳು, ತೊಡೆಯೆಲುಬಿನ ಮತ್ತು ತೊಡೆಸಂದಿಯ ಅಂಡವಾಯುಗಳಿಗಾಗಿ ಇರುವಂತೆಯೇ ಇರುತ್ತವೆ.
ಹೊಕ್ಕುಳಿನ ಅಂಡವಾಯುಗಳು ವಿಶೇಷವಾಗಿ ಆಫ್ರಿಕಾದ ಮೂಲದ ಶಿಶುಗಳಲ್ಲಿ ಸಾಮಾನ್ಯವಾಗಿದ್ದು, ಹುಡುಗರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕಿಬ್ಬೊಟ್ಟೆಯ ಭಾಗದ ಗೋಡೆ ಮೂಲಕವಿರುವ ಹೊಕ್ಕುಳುಬಳ್ಳಿಯ ದಾರಿಯ ಪ್ರದೇಶದಲ್ಲಿನ ಒಂದು ನ್ಯೂನತೆಯ ಮೂಲಕ ಅಂತರ-ಕಿಬ್ಬೊಟ್ಟೆಯ ಭಾಗದ ಅಂತರ್ಗತ ವಸ್ತುಗಳ ಮುಂಚಾಚಿರುವಿಕೆಯಿರುವುದನ್ನು ಅವು ಒಳಗೊಳ್ಳುತ್ತವೆ. ಈ ಅಂಡವಾಯುಗಳು ಅನೇಕ ವೇಳೆ ಅನೈಚ್ಛಿಕವಾಗಿ ರೂಪುಗೊಳ್ಳುತ್ತವೆ.ವಯಸ್ಕರಲ್ಲಿನ ಹೊಕ್ಕುಳಿನ ಅಂಡವಾಯುಗಳು ಹೆಚ್ಚಿನ ರೀತಿಯಲ್ಲಿ ಸಂಪಾದಿಸಿದ ಅಂಡವಾಯುಗಳಾಗಿದ್ದು, ಸ್ಥೂಲಕಾಯದವರಲ್ಲಿ ಅಥವಾ ಗರ್ಭಿಣಿ ಸ್ತ್ರೀಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಲೀನಿಯಾ ಆಲ್ಬಾ ಪ್ರದೇಶದಲ್ಲಿನ ನಾರಿನಂಶಗಳ ಅಪಸಾಮಾನ್ಯ ಪರಸ್ಪರ ಛೇದನವು ಇದಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.
ಅಪೂರ್ಣವಾಗಿ ವಾಸಿಯಾದ ಶಸ್ತ್ರಚಿಕಿತ್ಸೆಯ ಗಾಯದ ಕಾರಣದಿಂದಾದ ನ್ಯೂನತೆಯೇನಾದರೂ ಇದ್ದಲ್ಲಿ, ಆಗ ಸೀಳುಕೊಯ್ತದ ಅಂಡವಾಯುವೊಂದು ಸಂಭವಿಸುತ್ತದೆ. ಲೀನಿಯಾ ಆಲ್ಬಾ ಪ್ರದೇಶದಲ್ಲಿನ ಮಧ್ಯಸ್ಥ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ಕೊಯ್ತಗಳಲ್ಲಿ ಇವು ಕಂಡುಬಂದರೆ, ಆಗ ಇವುಗಳನ್ನು ಉದರ ಭಾಗದ ಅಂಡವಾಯುಗಳೆಂದು ಕರೆಯಲಾಗುತ್ತದೆ. ಈ ಬಗೆಯ ಅಂಡವಾಯುಗಳ ದುರಸ್ತಿಯ ಕ್ರಮವು ಈಗಾಗಲೇ ಕೃಶಗೊಂಡಿರುವ ಅಂಗಾಂಶವನ್ನು ಬಳಸಿಕೊಳ್ಳುತ್ತದೆಯಾದ್ದರಿಂದ, ಇವು ಅತಿ ಹೆಚ್ಚು ನಿಷ್ಫಲದಾಯಕ ಮತ್ತು ಚಿಕಿತ್ಸೆ ನೀಡಲು ಪ್ರಯಾಸಕರವಾದ ನಿದರ್ಶನವಾಗಿ ಪರಿಣಮಿಸಬಹುದು.
ಹೊಟ್ಡೆ ಅಥವಾ ಕರುಳಿನ ಒಂದು ಭಾಗವು ವಪೆಯಲ್ಲಿನ ಒಂದು ನ್ಯೂನತೆಯ ಮೂಲಕ ಎದೆಯ ಕುಳಿಯೊಳಗೆ ಮುಂಚಾಚುವುದರ ಪರಿಣಾಮವಾಗಿ, ಕಿಬ್ಬೊಟ್ಟೆಯಲ್ಲಿ ಉನ್ನತವಾಗಿ ಸ್ಥಿತವಾಗಿರುವ, (ಆಂತರಿಕ) "ವಪೆಯ ಅಂಡವಾಯು"ವು ಸಂಭವಿಸುತ್ತದೆ.ಲೋಪದ ಅಂಡವಾಯುವೊಂದು ಈ ಬಗೆಯದರ ಒಂದು ನಿರ್ದಿಷ್ಟ ರೂಪಾಂತರವಾಗಿದ್ದು, ಇದರಲ್ಲಿ ಅನ್ನನಾಳವು ಹೊಟ್ಟೆಯನ್ನು (ಅನ್ನನಾಳದ ಲೋಪ) ಸಂಧಿಸುವ ಸಾಮಾನ್ಯ ನಡುವಣ ಅಂಕವು ಒಂದು ಕಾರ್ಯಾಚರಣೆಯ "ನ್ಯೂನತೆ"ಯಾಗಿ ಪಾತ್ರವಹಿಸುತ್ತದೆ ಮತ್ತು ಹೊಟ್ಟೆಯ ಒಂದು ಭಾಗವು ಎದೆಯೊಳಗೆ (ಆಗಿಂದಾಗ್ಗೆ) "ಅಂಡವಾಯುವನ್ನು ಚಾಚಲು" ಅವಕಾಶ ಮಾಡಿಕೊಡುತ್ತದೆ. ಲೋಪದ ಅಂಡವಾಯುಗಳು "ಜಾರುವಿಕೆ "ಯ ಸ್ವಭಾವವನ್ನು ಹೊಂದಿರಬಹುದಾಗಿದ್ದು, ಇದರಲ್ಲಿ ಸ್ವತಃ ಜಠರಾನ್ನನಾಳದ ಸಂಧಿಸ್ಥಾನವು ನ್ಯೂನತೆಯ ಮೂಲಕ ಎದೆಯೊಳಗೆ ಜಾರುತ್ತದೆ. ಅಥವಾ ಲೋಪದ ಅಂಡವಾಯುಗಳು ಜಾರುವಿಕೆಯದ್ದಲ್ಲದ (ಇದಕ್ಕೆ ಅನ್ನನಾಳ ಸಮೀಪದ್ದು ಎಂಬ ಹೆಸರೂ ಇದೆ) ಸ್ವಭಾವವನ್ನೂ ಹೊಂದಿರಲು ಸಾಧ್ಯವಿದ್ದು, ಇದರಲ್ಲಿ ಸಂಧಿಸ್ಥಾನದ ಜಾಗವು ಸ್ಥಿತವಾಗಿದ್ದರೆ, ಹೊಟ್ಟೆಯ ಮತ್ತೊಂದು ಭಾಗವು ನ್ಯೂನತೆಯ ಮೂಲಕ ಮೇಲಕ್ಕೆ ಚಲಿಸುತ್ತದೆ. ಜಾರುವಿಕೆಯದ್ದಲ್ಲದ ಅಥವಾ ಅನ್ನನಾಳ ಸಮೀಪದ ಅಂಡವಾಯುಗಳು ಹೊಟ್ಟೆಯು ತಿರುಗಲು ಹಾಗೂ ತಡೆಯೊಡ್ಡಲು ಅವಕಾಶ ಕಲ್ಪಿಸಬಹುದಾದ್ದರಿಂದ, ಅವು ಅಪಾಯಕಾರಿಯಾಗಿರಲು ಸಾಧ್ಯವಿದೆ. ಇಂಥ ನಿದರ್ಶನಗಳಲ್ಲಿ ದುರಸ್ತಿಯನ್ನು ಶಿಫಾರಸು ಮಾಡಲಾಗುತ್ತದೆ.ಹುಟ್ಟಿನಿಂದ ಬಂದ ವಪೆಯ ಅಂಡವಾಯುವೊಂದು ವಿಭಿನ್ನವಾದ ಸಮಸ್ಯೆಯಾಗಿದ್ದು, 2000ದಷ್ಟು ಹುಟ್ಟುವಿಕೆಗಳ ಪೈಕಿ 1ರಲ್ಲಿ ಸಂಭವಿಸುತ್ತದೆ, ಹಾಗೂ ಶಿಶುವೈದ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ಅಗತ್ಯವು ಇಲ್ಲಿ ಕಂಡುಬರುತ್ತದೆ. ಕರುಳಿಗೆ ಸಂಬಂಧಿಸಿದ ಅಂಗಗಳು ವಪೆಯ ಹಲವಾರು ಭಾಗಗಳ ಮೂಲಕ ಅಂಡವಾಯುವಿಗೆ ಈಡಾಗಬಹುದು. ಅಂದರೆ, ಇದು ಹಿಂಭಾಗದ ಪಕ್ಕದಿಂದ (ಬೊಕ್ದಾಲೆಕ್ನ ತ್ರಿಕೋನದಲ್ಲಿ, ಬೊಕ್ದಾಲೆಕ್ನ ಅಂಡವಾಯು ವನ್ನುಂಟುಮಾಡುವ ಮೂಲಕ), ಅಥವಾ ಮುಂಭಾಗದ ಮಧ್ಯದಿಂದ-ಎದೆಯೆಲುಬಿನ ಹಿಂದಣದಿಂದ (ಲ್ಯಾರೆ/ಮೊರ್ಗಾಗ್ನಿಯ ಮಾರ್ಗದ ಬಿರುಕಿನಲ್ಲಿ, ಮೊರ್ಗಾಗ್ನಿ-ಲ್ಯಾರೆ ಅಂಡವಾಯು ವನ್ನು, ಅಥವಾ ಮೊರ್ಗಾಗ್ನಿಯ ಅಂಡವಾಯುವನ್ನು ಉಂಡುಮಾಡುವ ಮೂಲಕ) ಕಂಡುಬರಬಹುದು.
ಅಂಡವಾಯುವನ್ನು ದುರಸ್ತಿ ಮಾಡಲೆಂದು ಬಳಸಲಾದ ಜಾಲರಿಯ ತಳ್ಳಿಹಾಕುವಿಕೆಯೂ ಸೇರಿದಂತೆ ಶಸ್ತ್ರಕ್ರಿಯೆಯ-ನಂತರದಲ್ಲಿ ತೊಡಕುಗಳು ಉದ್ಭವಿಸಬಹುದು. ಜಾಲರಿಯ ತಳ್ಳಿಹಾಕುವಿಕೆ ಅಥವಾ ನಿರಾಕರಣದ ಸಂದರ್ಭದಲ್ಲಿ, ಜಾಲರಿಯನ್ನು ತೆಗೆದುಹಾಕುವುದು ಅತ್ಯಗತ್ಯವಾಗಿ ಕಂಡುಬರುತ್ತದೆ. ಜಾಲರಿಯನ್ನು ಅಳವಡಿಸಿರುವ ಪ್ರದೇಶದ ಸುತ್ತಮುತ್ತ ಸ್ಥಳೀಯವಾಗಿರುವ ಊತ ಮತ್ತು ನೋವಿನ ಸ್ಪಷ್ಟ ಕುರುಹುಗಳ ಮೂಲಕ ಜಾಲರಿಯ ನಿರಾಕರಣವನ್ನು ಪತ್ತೆಮಾಡಬಹುದಾಗಿದೆ. ಜಾಲರಿಯನ್ನು ತೆಗೆದುಹಾಕಿದ ನಂತರ, ಗಾಯದಿಂದ ಕೆಲಕ್ಷಣಗಳವರೆಗೆ ನಿರಂತರವಾಗಿ ಸೂಸುವಿಕೆಯು ಕಂಡುಬರಬಹುದು.ಚಿಕಿತ್ಸೆಯನ್ನು ನೀಡದ ಅಥವಾ ಉಪಚರಿಸದ ಅಂಡವಾಯುವೊಂದು ಈ ಕೆಳಗಿನ ಲಕ್ಷಣಗಳ ಮೂಲಕ ತೊಡಕನ್ನುಂಟುಮಾಡಬಹುದು:
ಸ್ವರಕ್ಷಿತ ಸಮಸ್ಯೆಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.