ವರ್ಲ್ಡ್ ವೈಡ್ ವೆಬ್
From Wikipedia, the free encyclopedia
ವರ್ಲ್ಡ್ ವೈಡ್ ವೆಬ್ ಎಂಬುದನ್ನು WWW ಮತ್ತು W3 ಎಂಬುದಾಗಿ ಸಂಕ್ಷೇಪಿಸುವುದು ವಾಡಿಕೆ. ಸಾಮಾನ್ಯವಾಗಿ 'ದಿ ವೆಬ್ ' ಎಂದು ಕರೆಯಲ್ಪಡುವ ವರ್ಲ್ಡ್ ವೈಡ್ ವೆಬ್, ಅಂತರ್ಜಾಲ ಮಾಧ್ಯಮವು ಒಳಗೊಂಡಿರುವ ಅಂತರ ಸಂಪರ್ಕಿತ ಹೈಪರ್ಟೆಕ್ಸ್ಟ್ನ ಒಂದು ವ್ಯವಸ್ಥೆಯಾಗಿದೆ. ವೆಬ್ ಪುಟಗಳಲ್ಲಿ ಸೇರ್ಪಡೆಯಾಗಿರುವ ಪಠ್ಯ, ಚಿತ್ರಗಳು, ವಿಡಿಯೋ, ಮತ್ತು ಇತರ ಮಲ್ಟಿಮೀಡಿಯಾ ಸ್ವರೂಪಗಳನ್ನು ವೆಬ್ ಬ್ರೌಸರ್ ಒಂದರ ನೆರವಿನೊಂದಿಗೆ ಓರ್ವರು ವೀಕ್ಷಿಸಬಹುದು ಮತ್ತು ಹೈಪರ್ಲಿಂಕುಗಳನ್ನು ಬಳಸಿ ಅವುಗಳ ನಡುವೆ ಆಕಡೆಯಿಂದ ಈಕಡೆಗೆ ಚಲಿಸಬಹುದು. ಈಗ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂನ ನಿರ್ದೇಶಕನಾಗಿರುವ ಸರ್ ಟಿಮ್ ಬರ್ನರ್ಸ್-ಲೀ ಎಂಬ ಇಂಗ್ಲಿಷ್ ಭೌತವಿಜ್ಞಾನಿಯು ಹಿಂದಿದ್ದ ಹೈಪರ್ಟೆಕ್ಸ್ಟ್ ಪದ್ಧತಿಗಳಿಂದ ಪಡೆದ ಪರಿಕಲ್ಪನೆಗಳನ್ನು ಬಳಸಿಕೊಂಡು, 1989ರ ಮಾರ್ಚ್ನಲ್ಲಿ ಒಂದು ಯೋಜನೆ ಅಥವಾ ಪ್ರಸ್ತಾವನೆಯನ್ನು ರಚಿಸಿದ. ಇದೇ ಮುಂದೆ ವರ್ಲ್ಡ್ ವೈಡ್ ವೆಬ್ ಎಂದು ಕರೆಸಿಕೊಂಡಿತು.[1] ಸ್ವಿಜರ್ಲೆಂಡ್ನ ಜಿನೇವಾದಲ್ಲಿರುವ CERN ಎಂಬ ಕಂಪನಿಯಲ್ಲಿ ಈತನೊಟ್ಟಿಗೆ ಹಿಂದೆ ಕೆಲಸಮಾಡುತ್ತಿದ್ದ ರಾಬರ್ಟ್ ಕೈಲಿಯು ಎಂಬ ಬೆಲ್ಜಿಯಂನ ಕಂಪ್ಯೂಟರ್ ವಿಜ್ಞಾನಿಯು ನಂತರ ಈತನ ಜೊತೆ ಸೇರಿಕೊಂಡ. 1990ರಲ್ಲಿ, "ಘಟಕಗಳ ಒಂದು ಜಾಲದಂತೆ ಅನೇಕ ಬಗೆಯ ಮಾಹಿತಿಯನ್ನು ಸಂಪರ್ಕಿಸಲು ಹಾಗೂ ಅದಕ್ಕೆ ಪ್ರವೇಶಾವಕಾಶವನ್ನು ಹೊಂದಲು ಹೈಪರ್ಟೆಕ್ಸ್ಟ್ನ್ನು [...]" ಬಳಸುವುದನ್ನು ಅವರು ಪ್ರಸ್ತಾವಿಸಿದರು[5] ಮತ್ತು ಸದರಿ ವೆಬ್ನ್ನು ಡಿಸೆಂಬರ್ನಲ್ಲಿ ಬಿಡುಗಡೆ ಮಾಡಿದರು.[2]
"ವರ್ಲ್ಡ್ ವೈಡ್ ವೆಬ್ನ್ನು (W3) ಮಾನವ ಜ್ಞಾನದ ಒಂದು ಭಂಡಾರವನ್ನಾಗಿ ಅಭಿವೃದ್ಧಿಪಡಿಸಲಾಯಿತಲ್ಲದೇ, ದೂರದ ಯಾವುದೋ ಪ್ರದೇಶದಲ್ಲಿರುವ ಸಹಯೋಗಿಗಳು ತಮ್ಮ ಪರಿಕಲ್ಪನೆಗಳು ಹಾಗೂ ಏಕರೂಪದ ಯೋಜನೆಯೊಂದರ ಎಲ್ಲಾ ಮಗ್ಗಲುಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಟ್ಟಿತು." [3] ಒಂದು ವೇಳೆ ಎರಡು ಯೋಜನೆಗಳು ಸ್ವತಂತ್ರವಾಗಿ ರೂಪುಗೊಂಡರೆ, ಮಧ್ಯದ ಓರ್ವ ವ್ಯಕ್ತಿಯು ಬದಲಾವಣೆಗಳನ್ನು ಮಾಡುವುದರ ಬದಲಿಗೆ, ಎರಡರ ಮಾಹಿತಿಯನ್ನೂ ಒಟ್ಟಿಗೆ ಕಲೆಹಾಕಿದ ಒಂದು ಒಗ್ಗೂಡಿಸಿದ ಕಾರ್ಯನಿದರ್ಶನವನ್ನು ಇಲ್ಲಿ ಕಾಣಬಹುದಾಗಿತ್ತು.