ಸ್ಫಿಂಕ್ಸ್ (ಸಿಂಹನಾರಿ)
From Wikipedia, the free encyclopedia
ಸ್ಫಿಂಕ್ಸ್ (ಸಿಂಹನಾರಿ) (ಪುರಾತನ ಗ್ರೀಕ್: Σφίγξ / Sphinx , ಕೆಲವೊಮ್ಮೆ Φίξ /Phix ) ಎಂಬುದು ಒಂದು ಕಾಲ್ಪನಿಕ ರೂಪವಾಗಿದೆ. ಇದು ಮೈಚಾಚಿಕೊಂಡಿರುವ ಸಿಂಹದ ದೇಹ ಹಾಗೂ ಮಾನವನ ತಲೆ ಹೊಂದಿರುವ ಬೃಹತ್ ಪ್ರತಿಮೆ. ಹಳೆಯ ರಾಜ್ಯ ಈಜಿಪ್ಟ್ನ ಕೆತ್ತನೆ ಮಾಡಲಾದ ಪ್ರತಿಮೆಗಳಲ್ಲಿ ಇದರ ಮೂಲಗಳಿವೆ. ಇದಕ್ಕೆ ಪುರಾತನ ಗ್ರೀಕರು 'ದಮನಕಾರಿ ಗಂಡು ದೈತ್ಯ, ಗ್ರೀಕ್ ಪೌರಾಣಿಕ ಕಥೆಯ ಒಂದು ಪುರಾತನ ರೂಪಕ್ಕೆ ತಮ್ಮದೇ ಆದ ಹೆಸರಿಟ್ಟರು. ದಕ್ಷಿಣ ಹಾಗೂ ಅಗ್ನೇಯ ಏಷ್ಯಾ ವಲಯಗಳಲ್ಲಿ ಇಂತಹದ್ದೇ ಪ್ರತಿರೂಪಗಳು ಕಂಡುಬಂದಿವೆ. ಯುರೋಪೀಯ ಶೃಂಗಾರ ಕಲೆಯಲ್ಲಿ, ಸಿಂಹನಾರಿಯು ನವೋದಯ ಯುಗದಲ್ಲಿ ಪ್ರಮುಖ ಪುನಶ್ಚೇತನ ಕಂಡಿತು. ಆನಂತರ, ಮೂಲ ಈಜಿಪ್ಟ್ ಪರಿಕಲ್ಪನೆಯನ್ನು ಹೋಲುವ ಸಿಂಹನಾರಿಯ ರೂಪವನ್ನು ಹಲವು ಇತರೆ ಸಂಸ್ಕೃತಿಗಳಿಗೆ ರಫ್ತುಮಾಡಲಾಯಿತು. ಮೂಲದಲ್ಲಿದ್ದ ವಿವರಣೆಗಳ ಅನುವಾದ ಹಾಗೂ ಇತರೆ ಸಾಂಸ್ಕೃತಿಕ ಪರಂಪರೆಗೆ ಹೋಲಿಸಿದಂತೆ ಪರಿಕಲ್ಪನೆಯ ವಿಕಸನಗಳ ಕಾರಣ, ಈ ಹೊಸ ರೂಪಗಳನ್ನು ಭಿನ್ನ ರೀತಿಗಳಲ್ಲಿ ನಿರೂಪಿಸಲಾಗಿವೆ.
ಸಾಮಾನ್ಯವಾಗಿ, ದೇವಾಲಯಗಳ ಕಾವಲಿರುವುದು ಸಿಂಹನಾರಿಗಳ ಪಾತ್ರವಾಗಿತ್ತು. ರಾಜರುಗಳ ಗೋರಿಗಳು ಅಥವಾ ಧಾರ್ಮಿಕ ದೇವಾಲಯಗಳಂತಹ ವಾಸ್ತುಶಿಲ್ಪ ರಚನೆಗಳೊಂದಿಗೆ ಸಿಂಹನಾರಿಗಳನ್ನು ಸ್ಥಾಪಿಸಲಾಯಿತು. ಅತ್ಯಂತ ಹಳೆಯ ಸಿಂಹನಾರಿ ತುರ್ಕಿ ದೇಶದ ಗೊಬೆಕ್ಲಿ ಟೆಪೆಯಲ್ಲಿ ಪತ್ತೆ ಮಾಡಲಾಗಿತ್ತು. ಇದು 9,500 B.C. ಕಾಲಮಾನದಷ್ಟು ಹಳೆಯದಾಗಿದೆ.[1] ನಾಲ್ಕನೆಯ ರಾಜಪರಂಪರೆಯ ಹೆಟೆಫೆರೆಸ್ IIನನ್ನು ನಿರೂಪಿಸುವ ಸಿಂಹನಾರಿಯು ಈಜಿಪ್ಟ್ನಲ್ಲಿರುವ ಮೊದಲ ಸಿಂಹನಾರಿಯಾಗಿದೆ. ಇದು 2723 ರಿಂದ 2563 BC ತನಕ ಉಳಿದುಕೊಂಡಿತ್ತು. ಅತಿ ದೊಡ್ಡ ಹಾಗೂ ಚಿರಪರಿಚಿತ ಸಿಂಹನಾರಿಯೆಂದರೆ ಗೀಜಾದ ಮಹಾ ಸಿಂಹನಾರಿ (ಅರಬಿಕ್ ಭಾಷೆ:: أبو الهول,). ಇದು ಈಜಿಪ್ಟ್ ದೇಶದ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿರುವ ಗೀಜಾ ಪ್ರಸ್ಥಭೂಮಿಯಲ್ಲಿದ್ದು, ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಈ ಸಿಂಹನಾರಿಯೂ ಸಹ ಇದೇ ರಾಜಪರಂಪರೆಗೆ ಸೇರಿದೆ. ಇದರ ನಿರ್ಮಾಣದ ದಿನಾಂಕ ಕುರಿತು ನಿಖರ ಮಾಹಿತಿಯಲ್ಲದಿದ್ದರೂ, ಮಹಾ ಸಿಂಹನಾರಿಯ ಶಿರವು ಫೇರೋ ಖಫ್ರಾನ ಮುಖವನ್ನು ಹೋಲುತ್ತದೆ ಎಂದು ನಂಬಲಾಗಿದೆ.
ಇದನ್ನು ನಿರ್ಮಿಸಿದವರು ಈ ಪ್ರತಿಮೆಗಳಿಗೆ ಏನು ಹೆಸರುಗಳಿಂದ ಕರೆದರೂ ತಿಳಿಯದು. ಸಾವಿರ ವರ್ಷಗಳ ನಂತರ, ಮಹಾ ಸಿಂಹನಾರಿಯ ಸ್ಥಳದಲ್ಲಿ, ಥುಟ್ಮೋಸ್ IV 1400 BCEನಲ್ಲಿ ಸ್ಥಾಪಿಸಿದ ಫಲಕದಲ್ಲಿ ಆ ಯುಗದ ಸ್ಥಳೀಯ ಸೂರ್ಯದೇವನ ಮೂರು ಅಂಶಗಳನ್ನು ನಮೂದಿಸಲಾಗಿದೆ: ಖೆಪೆರಾ - ರೇ - ಆಟುಮ್ ಗೋರಿ ಹಾಗೂ ದೇವಾಲಯ ಸಂಕೀರ್ಣಗಳಲ್ಲಿ ಈ ರಚನೆಗಳನ್ನು ಸೇರಿಸುವ ಪದ್ಧತಿಯು ಬಹುಬೇಗನೆ ಸಾಂಪ್ರದಾಯಿಕ ರೂಢಿಯಾಯಿತು. ತಮ್ಮ ಪ್ರಬಲ ದೈವ ಸೆಖ್ಮೆಟ್ನೊಂದಿಗೆ ಬಾಂಧವ್ಯ ತೋರಿಸಿಕೊಳ್ಳಲು, ಹಲವು ಫೇರೋಗಳು ತಮ್ಮ ಗೋರಿಗಳ ಕಾವಲುಗಾರ ಪ್ರತಿಮೆಗಳ ಮೇಲೆ ತಮ್ಮ ಶಿರಭಾಗವನ್ನು ಕೆತ್ತಿಸಿಕೊಳ್ಳುತ್ತಿದ್ದರು.
ಈಜಿಪ್ಟ್ನ ಇತರೆ ಖ್ಯಾತ ಸಿಂಹನಾರಿಗಳ ಪೈಕಿ ಒಂದು ಫೇರೋ ಹಟ್ಷೆಪ್ಷುಟ್ನ ಶಿರವನ್ನು ಹೊತ್ತಿರುವುದು ಸಹ ಸೇರಿದೆ. ಈಕೆಯ ತದ್ರೂಪವನ್ನು ಬೆಣಚುಕಲ್ಲಿನಲ್ಲಿ ಕೆತ್ತಲಾಗಿದ್ದು, ನ್ಯೂಯಾರ್ಕ್ನ ಮೆಟ್ರೊಪೊಲಿಟನ್ ಮ್ಯೂಸಿಯಮ್ ಆಫ್ ಆರ್ಟ್ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ. ಮೆಂಫಿಸ್ನ ಹಾಲುಗಲ್ಲಿನ ಸಿಂಹನಾರಿಯನ್ನು ಈಗ ಬಯಲು ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ. ಗೋರಿಗಳು ಹಾಗೂ ದೇವಾಲಯಗಳತ್ತ ದಾರಿಗಳಲ್ಲಿ ಕಾವಲುಗಾರ ಸಿಂಹನಾರಿಗಳನ್ನು ಸಾಲಾಗಿ ಜೋಡಿಸುವುದಲ್ಲದೆ, ಬಹಳ ವೈಭವೋಪೇತ ಸಂಕೀರ್ಣ ಮಳಿಗೆಗಳ ಮೆಟ್ಟಿಲುಗಳಲ್ಲಿ ಸಹ ಜೋಡಿಸಲು ಈ ವಿನ್ಯಾಸವನ್ನು ವಿಸ್ತರಿಸಲಾಯಿತು.
ಆಮೊನ್ನನ್ನು ನಿರೂಪಿಸುವ ಒಂಬೈನೂರು ಟಗರು ಶಿರವುಳ್ಳ ಆಕೃತಿಗಳನ್ನು, ತನ್ನ ಪಂಥವು ಪ್ರಬಲವಾಗಿದ್ದ ಥಿಬ್ಸ್ನಲ್ಲಿ ನಿರ್ಮಿಸಲಾಗಿತ್ತು.