ರಾಷ್ಟ್ರೀಯ ಸ್ವಯಂಸೇವಕ ಸಂಘ
From Wikipedia, the free encyclopedia
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ.[ಸೂಕ್ತ ಉಲ್ಲೇಖನ ಬೇಕು] ಸೆಪ್ಟೆಂಬರ್ ೨೭, 1925ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ "ಸಂಘ ಪರಿವಾರ" ಎಂದು ಕರೆಯಲಾಗುತ್ತದೆ. ಸುಮಾರು ಆರು ವರ್ಷ ಭಾರತದ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಈ ಸಂಸ್ಥೆಯ ರಾಜಕೀಯ ಮುಖ ಎಂದು ಹಲವರು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
Quick Facts ಸಂಕ್ಷಿಪ್ತ ಹೆಸರು, ಸ್ಥಾಪನೆ ...
ಸಂಕ್ಷಿಪ್ತ ಹೆಸರು | ಆರ್ಎಸ್ಎಸ್ |
---|---|
ಸ್ಥಾಪನೆ | 27 ಸೆಪ್ಟೆಂಬರ್ 1925 (36002 ದಿನ ಗಳ ಹಿಂದೆ) (1925-೦೯-27) |
ಸ್ಥಾಪಿಸಿದವರು | ಕೇಶವ್ ಬಲಿರಾಮ್ ಹೆಡಗೇವಾರ್ |
ಶೈಲಿ | ಸ್ವಯಂಸೇವೆ |
Legal status | ಅಸ್ತಿತ್ವದಲ್ಲಿದೆ |
Purpose | ಸ್ವಯಂಸೇವೆಯ ಮೂಲಕ ದೇಶಸೇವೆ |
ಪ್ರಧಾನ ಕಚೇರಿ | ಡಾ. ಹೆಡ್ಗೆವಾರ್ ಭವನ, ಸಂಘ ಕಟ್ಟಡ ರಸ್ತೆ, ನಾಗ್ಪುರ, ಮಹಾರಾಷ್ಟ್ರ - ೪೪೦೦೩೨ |
ಕಕ್ಷೆಗಳು | 21.146°N 79.111°E / 21.146; 79.111 |
ಪ್ರದೇಶ | ಭಾರತ |
Membership | |
ಅಧಿಕೃತ ಭಾಷೆ | ಯಾವುದೂ ಇಲ್ಲ |
ಸರಸಂಘಚಾಲಕ | ಮೋಹನ್ ಭಾಗವತ್ |
ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) | ದತ್ತಾತ್ರೇಯ ಹೊಸಬಾಳೆ |
ಅಂಗಸಂಸ್ಥೆಗಳು |
|
ಅಧಿಕೃತ ಜಾಲತಾಣ | www |
Close