ರಷ್ಯಾದ ಕ್ರಾಂತಿ
ರಷ್ಯಾದಲ್ಲಿ ನಡೆದು ರಾಜಪ್ರಭುತ್ವವನ್ನು ಕೊನೆಗೊಳಿಸಿ ಮತ್ತು ಸೋವಿಯತ್ ಒಕ್ಕೂಟವನ್ನು ನಿರ್ಮಿಸಿದ ಕ್ರಾಂತಿ / From Wikipedia, the free encyclopedia
ರಷ್ಯಾದ ಕ್ರಾಂತಿ[1] (೧೯೧೭). ರಷ್ಯಾದಲ್ಲಿ ಉಂಟಾದ ಒಂದು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ.[2] ಈ ಕ್ರಾಂತಿಯು ಶತಮಾನಗಳ ಝಾರ್ ನಿರಂಕುಶಪ್ರಭುತ್ವದ ಆಡಳಿತವನ್ನು ಕೊನೆಗೊಳಿಸಿ , ಸೋವಿಯತ್ ಒಕ್ಕೂಟದ ರಚನೆಗೆ ಕಾರಣವಾಯಿತು. ರಷ್ಯಾದ ಕ್ರಾಂತಿಯು ಎರಡು ಮಖ್ಯ ಹೋರಾಟಗಳನ್ನು ಒಳಗೊಂಡಿದೆ. ಆ ಎರಡು ಹೋರಾಟಗಳು ಫೆಬ್ರವರಿ ಕ್ರಾಂತಿ ಮತ್ತು ಅಕ್ಟೋಬರ್ ಕ್ರಾಂತಿ. ಫೆಬ್ರವರಿ ಕ್ರಾಂತಿಯ ಸಮಯದಲ್ಲಿ ಝಾರ್ ನಿರಂಕುಶಪ್ರಭುತ್ವವನ್ನು ಕೆಳಗಿಳಿಸಿ , ಸೋವಿಯತ್ ಒಕ್ಕೂಟವು ಉಗಮವಾಯಿತು. ದೀರ್ಘಕಾಲದಿಂದ ಎದುರಿಸುತ್ತಿದ್ದ ಆಹಾರ ಕೊರತೆಯನ್ನು ಸೇರಿಕೊಂಡು ಬೆಳೆಯುತ್ತಿರುವ ನಾಗರೀಕ ಅಶಾಂತಿ ಮತ್ತು ಬಹಿರಂಗ ಕ್ರಾಂತಿಯು,ಝಾರ್ ಎರಡನೇ ನಿಕೊಲಸ್ (೧೮೬೮-೧೯೧೮), ರಷ್ಯಾದ ನಿರಂಕುಶರಾಜನಿಗೆ ಪದತ್ಯಾಗ ಮಾಡಲು ಉತ್ತೇಜಿಸಿತು. ರಷ್ಯಾದ ಚಕ್ರವರ್ತಿ ನಿಕೋಲಸ್ ಪದತ್ಯಾಗ ಮಾಡಿದ ನಂತರ, ರಷ್ಯಾದ ಅಧಿಕಾರ ಬಿದ್ದು ಹೋಯಿತು. ಆ ಸಮಯದಲ್ಲಿ ಹಂಗಾಮಿ ಸರ್ಕಾರ ತಾತ್ಕಾಲಿಕವಾಗಿ ಆಡಳಿತಕ್ಕೆ ಬಂದಿತು. ಅಕ್ಟೋಬರ್ ಅಲ್ಲಿ ನಡೆದ ಎರಡನೆಯ ಕ್ರಾಂತಿಯ ಸಮಯದಲ್ಲಿ, ಹಂಗಾಮಿ ಸರ್ಕಾರವು ಬಿದ್ದು ಹೋಗಿ ಬೋಲ್ಷೆವಿಕ್ (ಕಮ್ಯುನಿಸ್ಟ್) ಸರ್ಕಾರದ ವ್ಲಾಡಿಮಿರ್ ಲೆನಿನ್(೧೮೭೦-೧೯೨೪) ಆಡಳಿತಕ್ಕೆ ಬಂದರು.