ಮಾನವ ಅಸ್ಧಿಪಂಜರ
From Wikipedia, the free encyclopedia
ಮಾನವ ಅಸ್ಥಿಪಂಜರ ಎಂದರೆ ಶರೀರದ ಆಂತರಿಕ ಚೌಕಟ್ಟು. ಅದು ಜನನದ ಸಮಯದಲ್ಲಿ ೨೭೦ ಮೂಳೆಗಳಿಂದ ಕೂಡಿದ್ದು – ಪ್ರೌಢಾವಸ್ಥೆಯ ವೇಳೆಗೆ ಕೆಲವು ಮೂಳೆಗಳು ಒಟ್ಟಿಗೆ ಕೂಡಿಕೊಂಡ ನಂತರ ಈ ಮೊತ್ತ ೨೦೬ ಮೂಳೆಗಳಿಗೆ ಇಳಿಯುತ್ತದೆ.[1] ಅಸ್ಥಿಪಂಜರದಲ್ಲಿ ಮೂಳೆಯ ದ್ರವ್ಯರಾಶಿಯು ಸುಮಾರು ೩೦ರ ವಯಸ್ಸಿನ ಹೊತ್ತಿಗೆ ಗರಿಷ್ಠ ಸಾಂದ್ರತೆಯನ್ನು ಮುಟ್ಟುತ್ತದೆ.ಮಾನವನ ಅಸ್ಥಿಪಂಜರವನ್ನು ಅಕ್ಷೀಯ ಅಸ್ಥಿಪಂಜರ ಮತ್ತು "ಅಪೆಂಡಿಕ್ಯುಲಾರ್"(appendicular) ಅಸ್ಥಿಪಂಜರ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.ಅಕ್ಷೀಯ ಅಸ್ಥಿಪಂಜರವು ಬೆನ್ನೆಲುಬು, ಪಕ್ಕೆಲುಬು ಮತ್ತು ತಲೆಬುರುಡೆಯಿಂದ ರೂಪುಗೊಂಡಿದೆ."ಅಪೆಂಡಿಕ್ಯುಲಾರ್" ಅಸ್ತಿಪಂಜರವು ಅಕ್ಷೀಯ ಅಸ್ಥಿಪಂಜರಕ್ಕೆ ಲಗತ್ತಿಸಲಾಗಿದ್ದು ಇದು ಎದೆಯ ನಡುಕಟ್ಟು,ಶ್ರೋಣಿಯ ಹುಳು ಹಾಗು ಕೈ ಕಾಲುಗಳ ಮೂಳೆಗಳಿಂದ ರೂಪುಗೊಂಡಿದೆ.
ಮಾನವನ ಅಸ್ಥಿಪಂಜರದಲ್ಲಿ ಅನೇಕ ಇತರ ಪ್ರಾಣಿಗಳಿಗಿದ್ದಂತೆ ಲಿಂಗ ಸಂಭಂದಿತ ವ್ಯತ್ಯಾಸಗಳು ಇಲ್ಲದಿದ್ದರೂ,ತಲೆಬುರುಡೆ , ಸೊಂಟ ,ಹಲ್ಲುಗಳ ರಚನೆ ,ಮೂಳೆಗಳ ಉದ್ದದಲ್ಲಿ ಲಿಂಗಗಳ ನಡುವೆ ಸೂಕ್ಷ್ಮ ವ್ಯತ್ಯಾಸಗಳನ್ನು ಕಾಣಬಹುದು.ಒಂದು ಸಂಬಂಧಿತ ಜನಸಂಖ್ಯೆಯಲ್ಲಿ ಸಾಮಾನ್ಯವಾಗಿ, ಸ್ತ್ರೀ ಅಸ್ಥಿಪಂಜರದ ಅಂಶಗಳು ಪುರುಷ ಅಸ್ಥಿಪಂಜರದ ಅಂಶಗಳಿಗಿಂತಲು ಚಿಕ್ಕದಾಗಿ ಮತ್ತು ಕಡಿಮೆ ದೃಢವಾಗಿ ಇರುವುದನ್ನು ಕಾಣುತ್ತೇವೆ. ಮಗುವಿನ ಜನನಕ್ಕೆ ಅನುಗುಣವಾಗುವುದಕ್ಕೆ ಸ್ತ್ರೀ ಸೊಂಟವು ಪುರುಷರ ಸೊಂಟಕ್ಕಿಂತಲೂ ಭಿನ್ನವಾಗಿರುತ್ತದೆ.ಇತರ ಜೀವಿಗಳಂತೆ ಮಾನವ ಪುರುಷರು ಶಿಶ್ನ ಮೂಳೆಗಳನ್ನು ಹೊಂದಿರುವುದಿಲ್ಲ.[2]