ಮರ್ಲಾನ್ ಬ್ರಾಂಡೊ
From Wikipedia, the free encyclopedia
ಮರ್ಲಾನ್ ಬ್ರಾಂಡೊ , ಜೆಆರ್. ಏಪ್ರಿಲ್ 3, 1924 – ಜುಲೈ 1, 2004) ಸುಮಾರು ಅರ್ಧಶತಮಾನಗಳ ಕಾಲ ನಿರಂತರವಾಗಿ ಸಿನೆಮಾ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದಂತ ಅಮೇರಿಕಾದ ನಟ. ಯುವಜನಾಂಗದ ಸೆಕ್ಸ್ ಸಿಂಬಾಲ್ಆಗಿದ್ದಂತಹ ಇವರು, ಎ ಸ್ಟ್ರೀಟ್ ಕಾರ್ ನೇಮ್ಡ್ ಡಿಸೈರ್ ಚಿತ್ರದಲ್ಲಿನ ಸ್ಟಾನ್ಲೆ ಕೊವಲಾಸ್ಕಿ ಪಾತ್ರ ಮತ್ತು ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ ಗಳಿಸಿದ ಆನ್ ದಿ ವಾಟರ್ಫ್ರಂಟ್ ಚಿತ್ರದಲ್ಲಿನ ಟೆರ್ರಿ ಮಲಾಯ್ ಪಾತ್ರಗಳಿಂದ ಇವರು ಪ್ರಸಿದ್ಧರಾಗಿದ್ದರು. ಇವರು ನಟಿಸಿದ ಈ ಎರಡು ಚಲನಚಿತ್ರಗಳನ್ನೂ 1950ರ ದಶಕದ ಆರಂಭದಲ್ಲಿ ಎಲಿಯಾ ಕಜನ್ ನಿರ್ದೇಶಿಸಿದ್ದರು. ಮಧ್ಯಮ ವಯಸ್ಸಿನಲ್ಲಿ ಇವರು ನಟಿಸಿದಂತಹ ಪ್ರಮುಖ ಪಾತ್ರಗಳೆಂದರೆ; ಅಕಾಡೆಮಿ ಪ್ರಶಸ್ತಿಗೆದ್ದ 'ದಿ ಗಾಡ್ಫಾದರ್ ಚಿತ್ರದಲ್ಲಿನ ವಿಟೊ ಕೊರ್ಲೇನ್ ಪಾತ್ರ ಒಳಗೊಂಡಂತೆ ಅಪೊಕಾಲ್ಯಾಪ್ಸ್ ನೌ ಚಿತ್ರದಲ್ಲಿನ ಕರ್ನಲ್ ವಾಲ್ಟರ್ ಪಾತ್ರವಾಗಿದೆ. ಈ ಎರಡು ಚಿತ್ರಗಳನ್ನು ಫ್ರಾನ್ಸಿಸ್ ಪೊರ್ಡ್ ಕೊಪ್ಪೋಲ ನಿರ್ದೇಶಿಸಿದ್ದರು. ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ಲಾಸ್ಟ್ ಟಾಂಗೊ ಇನ್ ಪ್ಯಾರಿಸ್ ಚಿತ್ರದಲ್ಲಿನ ಪೌಲ್ ಪಾತ್ರಗಳಿಂದ ಇವರು ಖ್ಯಾತಿಯನ್ನು ಹೊಂದಿದ್ದರು. ಬ್ರಾಂಡೊ ಚಲನಚಿತ್ರ ನಟನೆಗೆ ಕುರಿತಂತೆ ವಿಶೇಷವಾದ ಪರಿಣಾಮವನ್ನು ಬೀರಿದ್ದಾರೆ. ಅವರು "ಮೆಥಡ್" ಆಕ್ಟಿಂಗ್ ಶೈಲಿಯ ನಟನೆಗೆ ಹೆಸರಾಗಿದ್ದರು. ಆರಂಭದಲ್ಲಿ ತಮ್ಮ "ಅಸ್ಪಷ್ಟವಾಗಿ ಉಚ್ಚರಿಸುವಂತಹ" ವಾಕ್ಶೈಲಿಯಿಂದ ವಿಡಂಬನೆಗೆ ಒಳಗಾಗಿದ್ದರು. ಆದರೆ ಅವರ ಪಾದರಸದಂತಹ ನಡವಳಿಕೆ, ಹೀಗೆ ಎದು ವರ್ಗೀಕರಿಸಲು ಸಾಧ್ಯವಾಗದಂತಹ ಅಭಿನಯ ಚತುರತೆ ಅವರ ಸಮಾನರ ನಡುವೆ ಅವರಿಗೆ ಅತ್ಯುತ್ತಮ ಮನ್ನಣೆ ಗಳಿಸಿಕೊಟ್ಟವು.[1] ಅವರನ್ನು ನಿರ್ದೇಶಕ ಮಾರ್ಟಿನ್ ಸ್ಕೋರ್ಸೆಸ್ "ಇವರು ಸಿನೆಮಾ ರಂಗದ ಒಂದು ಹೆಗ್ಗುರುತು ಆದುದರಿಂದಲೇ ’ಬ್ರಾಂಡೊಗಿಂತ ಮೊದಲು’ ಮತ್ತು ’ಬ್ರಾಂಡೊನ ನಂತರ’ ಎಂಬ ಶಬ್ಧಗಳನ್ನು ಸಿನೆಮಾರಂಗದಲ್ಲಿ ಬಳಸಲಾಗುತ್ತದೆ" ಎಂದು ಹೇಳಿದ್ದಾರೆ.[2][2] ಒಮ್ಮೆ ಮರ್ಲಾನ್ ಕುರಿತು ನಟ ಜಾಕ್ ನಿಕೋಲ್ಸನ್ ಹೀಗೆ ಹೇಳಿದ್ದರು, "ಮರ್ಲಾನ್ ತೀರಿಕೊಂಡಾಗ ಸಿನೆಮಾ ರಂಗದ ಒಂದು ಹಂತ ಮುಗಿದು ಮುಂದಿನ ಹಂತ ಪ್ರಾರಂಭವಾಗುತ್ತದೆ." ಬ್ರಾಂಡೊ ಒಬ್ಬ ಕ್ರಾಂತಿಕಾರಿಯೂ ಆಗಿದ್ದರು, ಇವರು ಅಮೇರಿಕಾ ನಾಗರೀಕ ಹಕ್ಕುಗಳು ಮತ್ತು ಅಮೇರಿಕಾ ಭಾರತೀಯರ ಚಳುವಳಿ ಸೇರಿದ್ದಂತೆ ಹಲವು ಸಮಸ್ಯೆಗಳ ಹೋರಾಟದಲ್ಲಿ ಮುಂದಾಳತ್ವವನ್ನು ವಹಿಸಿದ್ದರು.