ಭೋರಮ್ದೇವ್ ದೇವಾಲಯ
From Wikipedia, the free encyclopedia
ಭೋರಮ್ದೇವ್ ದೇವಾಲಯವು ಭಾರತದ ಛತ್ತೀಸ್ಘಡ್ ರಾಜ್ಯದ ಭೋರಮ್ದೇವ್ನಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಸ್ಥಾನಗಳ ಸಂಕೀರ್ಣವಾಗಿದೆ.[1] ಇದು ನಾಲ್ಕು ದೇವಾಲಯಗಳ ಒಂದು ಗುಂಪನ್ನು ಹೊಂದಿದ್ದು ಇದರಲ್ಲಿ ಅತ್ಯಂತ ಮುಂಚಿತವಾದದ್ದು ಇಟ್ಟಿಗೆಯ ದೇವಾಲಯವಾಗಿದೆ.[2]
ಭೋರಮ್ದೇವ್ ದೇವಾಲಯವು ಮುಖ್ಯ ದೇವಾಲಯವಾಗಿದ್ದು ಕಲ್ಲಿನಿಂದ ಕಟ್ಟಲ್ಪಟ್ಟಿದೆ.[3] ಕಾಮಪ್ರಚೋದಕ ಶಿಲ್ಪಗಳಿರುವ ವಾಸ್ತುಶಿಲ್ಪ ಲಕ್ಷಣಗಳು ಇದಕ್ಕೆ ಖಜುರಾಹೊ ದೇವಾಲಯ ಮತ್ತು ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದಂತೆ ಒಂದು ವಿಶಿಷ್ಟ ಶೈಲಿಯನ್ನು ನೀಡಿದೆ. ಹಾಗಾಗಿ ಭೋರಮ್ದೇವ್ ಸಂಕೀರ್ಣವು "ಛತ್ತೀಸ್ಗಢ್ನ ಖಜುರಾಹೊ" ಎಂಬ ಉಪನಾಮದಿಂದ ಪರಿಚಿತವಾಗಿದೆ.
ಭೋರಮ್ದೇವ್ನಿಂದ ಸುಮಾರು ೧ ಕಿಲೊಮೀಟರ್ ದೂರದಲ್ಲಿರುವ ಈ ಸಂಕೀರ್ಣದ ಮತ್ತೊಂದು ದೇವಾಲಯವೆಂದರೆ ಮಡ್ವಾ ಮೆಹೆಲ್ (ಸ್ಥಳೀಯ ಉಪಭಾಷೆಯಲ್ಲಿ ಇದರರ್ಥ ಮದುವೆ ಮಂಟಪ). ಇದು ದುಲ್ಹಾದೇವ್ ಎಂದೂ ಕರೆಯಲ್ಪಡುತ್ತದೆ. ಇದು ೧೬ ಕಂಬಗಳ ಮೇಲೆ ನಿಲ್ಲಿಸಲಾಗಿರುವ ಅನನ್ಯವಾದ ಶಿವಲಿಂಗವನ್ನು ಹೊಂದಿದೆ.[3]