ಭಾರತೀಯ ಚಹಾ ಸಂಸ್ಕೃತಿ
ಭಾರತದ ಸಂಸ್ಕೃತಿ / From Wikipedia, the free encyclopedia
ಅಸ್ಸಾಂ ಚಹಾ ಮತ್ತು ಡಾರ್ಜಿಲಿಂಗ್ ಚಹಾ ಉತ್ಪಾದಿಸುವ ಭಾರತ ವಿಶ್ವದ ಎರಡನೇ ಅತಿದೊಡ್ಡ ಚಹಾ ಉತ್ಪಾದಕ ರಾಷ್ಟ್ರವಾಗಿದೆ. [1][2] . ಮೊದಲನೆಯ ಸ್ಥಾನ ಚೀನಾ ಹೊಂದಿದೆ. ಚಹಾ ಅಸ್ಸಾಂ ನ 'ರಾಜ್ಯ ಪಾನೀಯ' ವಾಗಿದೆ. [3] [4] ಹಿಂದಿನಾ ಯೋಜನಾ ಆಯೋಗವು (ಆಯೋಗದ ಉಪ ಸಭಾಪತಿ, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಂದ ನೀತಿ ಆಯೋಗ ಎಂದು ಮರುನಾಮಕರಣಗೊಂಡಿತು) ಚಹಾವನ್ನು ಅಧಿಕೃತವಾಗಿ ಭಾರತೀಯ "ರಾಷ್ಟ್ರೀಯ ಪಾನೀಯ" ಎಂದು ಗುರುತಿಸಲು 2013 ರಲ್ಲಿ ಯೋಜಿಸಿತ್ತು. 2011ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ಅಸೋಚಾಮ್ ವರದಿಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಚಹಾದ ಗ್ರಾಹಕನಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 30% ನಷ್ಟು ಭಾಗ ಚಹಾ ಭಾರತದಲ್ಲೇ ಬಳಸುತ್ತಡುತ್ತದೆ [5]ಚೀನಾ ನಂತರ ಭಾರತವು ಎರಡನೇ ಅತಿದೊಡ್ಡ ಚಹಾ ರಫ್ತುದಾರ ದೇಶವಾಗಿದೆ.
ಆಯುರ್ವೇದ ಪರಂಪರೆ ಗಿಡಮೂಲಿಕೆ ಚಹಾದ ಬಳಕೆಗೆ ಬಹಳ ಹಿಂದಿನಿಂದ ಕಾರಣವಾಗಿದೆ. [6] ಭಾರತೀಯ ಅಡುಗೆಮನೆಗಳಲ್ಲಿ ಪವಿತ್ರ ತುಳಸಿ (ತುಳಸಿ) ಏಲಕ್ಕಿ (ಎಲೈಚಿ) ಮೆಣಸು (ಕಾಳಿ ಮಿರ್ಚ) ಮದ್ಯಸಾರ (ಮುಲೆಥಿ) ಪುದೀನಾ ಇತ್ಯಾದಿ) ಮುಂತಾದ ವಿವಿಧ ಸಸ್ಯಗಳು ಮತ್ತು ಸಂಬಾರ ಪದಾರ್ಥಗಳು ನೀಡುವ ಔಷಧೀಯ ಪ್ರಯೋಜನಗಳನ್ನು ದೀರ್ಘಕಾಲದಿಂದ ಬಳಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕವಾಗಿ ಈ ಸಸ್ಯದ ಎಲೆಗಳು ಅಥವಾ ಸಂಬಾರ ಪದಾರ್ಥಗಳಿಂದ ತಯಾರಿಸಿದ ಚಹಾಗಳು ಗಂಭೀರದಿಂದ ಹಿಡಿದು ಅಲ್ಪಪ್ರಮಾಣದ ಕಾಯಿಲೆಗಳಿಗೆ ಔಷಧವಾಗಿ ಶತಮಾನಗಳಿಂದ ಬಳಕೆಯಲ್ಲಿವೆ. ಚಹಾವನ್ನು ಈ ಸಾಂಪ್ರದಾಯಿಕ ಗಿಡಮೂಲಿಕೆಗಳೊಂದಿಗೆ ಬೆರೆಸಲಾಗುತ್ತದೆ. ಚಹಾದಲ್ಲಿರುವ ಸಿಹಿ ಮತ್ತು ಹಾಲು ಕೆಲವು ಔಷಧೀಯ ವಸ್ತುಗಳ ತೀಕ್ಷ್ಣವಾದ ವಾಸನೆ ಮತ್ತು ರುಚಿ ಹಾಗೂ ಕಹಿ ಅಂಶಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ. ಏಲಕ್ಕಿ, ಲವಂಗ ಮತ್ತು ಶುಂಠಿ ಇತರ ಪದಾರ್ಥಗಳು ಆರೋಗ್ಯ ಪ್ರಯೋಜನಗಳೊಂದಿಗೆ ಚಹಾಕ್ಕೆ ಆಹ್ಲಾದಕರ ರುಚಿ ಮತ್ತು ಪರಿಮಳವನ್ನು ಸೇರಿಸುತ್ತವೆ.
ಹಲವು ವರ್ಷಗಳ ಕಾಲ ಭಾರತದಲ್ಲಿನ ಚಹಾದ ಬಗೆಗಿನ ದಾಖಲೆಗಳು ಇತಿಹಾಸದಲ್ಲಿ ಕಳೆದುಹೋಗಿದ್ದವು. ಕ್ರಿ. ಶ. ಮೊದಲನೇ ಶತಮಾನದಲ್ಲಿ ಬೌದ್ಧ ಸನ್ಯಾಸಿಗಳಾದ ಬೋಧಿಧರ್ಮ ಮತ್ತು ಗಾನ್ ಲು ಅವರ ಕಥೆಗಳು ಮತ್ತು ಚಹಾದೊಂದಿಗಿನ ಅವರ ಒಳಗೊಳ್ಳುವಿಕೆಯೊಂದಿಗೆ ಈ ದಾಖಲೆಗಳು ಮತ್ತೆ ಹೊರಹೊಮ್ಮುತ್ತವೆ. ರಾಬರ್ಟ್ ಸೀಲಿ ಅವರ 1958ರ ಪುಸ್ತಕ ಎ ರಿವಿಷನ್ ಆಫ್ ದಿ ಜೀನಸ್ ಕ್ಯಾಮಿಲ್ಲಾದಂತಹ ಸಂಶೋಧನೆಯು ಚಹಾವು ಭಾರತೀಯ ಉಪಖಂಡದ ಸ್ಥಳೀಯ ಉತ್ಪನ್ನ ಎಂದು ಸೂಚಿಸುತ್ತದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆಗಮನದವರೆಗೂ ಭಾರತದಲ್ಲಿ ಚಹಾದ ವಾಣಿಜ್ಯ ಉತ್ಪಾದನೆಯು ಪ್ರಾರಂಭವಾಗಿರಲಿಲ್ಲ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಆ ಸಮಯದಲ್ಲಿ ದೊಡ್ಡ ಭೂಪ್ರದೇಶಗಳನ್ನು ಸಾಮೂಹಿಕ ಚಹಾ ಉತ್ಪಾದನೆಗೆ ಪರಿವರ್ತಿಸಲಾಯಿತು.
ಇಂದು ಭಾರತವು ವಿಶ್ವದ ಅತಿದೊಡ್ಡ ಚಹಾ ಉತ್ಪಾದಕರಲ್ಲಿ ಒಂದಾಗಿದೆ, ದೇಶೀಯ ಚಹಾದ 70% ಕ್ಕಿಂತ ಹೆಚ್ಚು ಭಾಗವನ್ನು ಭಾರತದಲ್ಲಿಯೇ ಸೇವಿಸಲಾಗುತ್ತಿದೆ. ಭಾರತೀಯ ಚಹಾ ಉದ್ಯಮವು ಅನೇಕ ಜಾಗತಿಕ ಚಹಾ ಬ್ರಾಂಡ್ಗಳನ್ನು ಹೊಂದುವಷ್ಟು ದೊಡ್ಡದಾಗಿ ಬೆಳೆದಿದೆ. ಭಾರತದ ಚಹಾ ಉದ್ಯಮ ವಿಶ್ವದ ಅತ್ಯಂತ ತಾಂತ್ರಿಕವಾಗಿ ಸುಸಜ್ಜಿತವಾದ ಚಹಾ ಉದ್ಯಮಗಳಲ್ಲಿ ಒಂದಾಗಿದೆ. ಭಾರತದಲ್ಲಿ ಚಹಾ ಉತ್ಪಾದನೆ, ಪ್ರಮಾಣೀಕರಣ, ರಫ್ತು ಮತ್ತು ಚಹಾ ವ್ಯಾಪಾರದ ಎಲ್ಲಾ ಅಂಶಗಳನ್ನು ಭಾರತೀಯ ಚಹಾ ಮಂಡಳಿಯು ನಿಯಂತ್ರಿಸುತ್ತದೆ.