ಭಾರತದ ಚಲನಚಿತ್ರೋದ್ಯಮ
From Wikipedia, the free encyclopedia
ಭಾರತದ ಚಲನಚಿತ್ರೋದ್ಯಮ ವು ಭಾರತದಾದ್ಯಂತ ನಿರ್ಮಿಸಲಾದ ಚಲನಚಿತ್ರಗಳನ್ನು ಒಳಗೊಳ್ಳುತ್ತದೆ. ಮುಂಬಯಿಯ ಸಿನಿಮೀಯ ಸಂಸ್ಕೃತಿಯನ್ನಷ್ಟೇ ಅಲ್ಲದೇ, ಆಂಧ್ರಪ್ರದೇಶ, ಅಸ್ಸಾಮ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳ ಸಿನಿಮೀಯ ಸಂಪ್ರದಾಯಗಳನ್ನೂ ಇದು ಒಳಗೊಂಡಿದೆ. ಭಾರತೀಯ ಚಲನಚಿತ್ರಗಳು ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಅನುಸರಿಸಿಕೊಂಡು ಬಂದವು. ಒಂದು ಮಾಧ್ಯಮವಾಗಿ ಚಲನಚಿತ್ರವು ದೇಶದಲ್ಲಿ ಜನಪ್ರಿಯತೆಯನ್ನು ಗಳಿಸಿದಂತೆ, ಹಲವಾರು ಭಾರತೀಯ ಭಾಷೆಗಳಲ್ಲಿ ವಾರ್ಷಿಕವಾಗಿ 2,000ದಷ್ಟು ಚಲನಚಿತ್ರಗಳು ನಿರ್ಮಾಣಗೊಂಡವು. ಯುನೈಟೆಡ್ ಕಿಂಗ್ಡಂ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳಂಥ ದೇಶಗಳಲ್ಲಿನ ವಲಸಿಗರು ಹಿಂದಿ-ಭಾಷೆ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರೇಕ್ಷಕರಾಗಿರುವಲ್ಲಿನ ತಮ್ಮ ಅಸ್ತಿತ್ವವನ್ನು ಮುಂದುವರಿಸಿಕೊಂಡು ಬಂದರು. ಬಾಲಿವುಡ್ ಕುರಿತಾಗಿ ಬ್ರಿಟಾನಿಕಾ ವಿಶ್ವಕೋಶ ದಲ್ಲಿ (2009) ಇರುವ ನಮೂದಿನ ಪ್ರಕಾರ, ಈ ಚಲನಚಿತ್ರಗಳ ಪೈಕಿ ಕೆಲವೊಂದು "ಸೂತ್ರಾನುಸಾರಿಯಾಗಿರುವ ಕಥೆಯ ಎಳೆಗಳು, ಪರಿಣತಿಯಿಂದ ಸಂಯೋಜಿಸಲ್ಪಟ್ಟ ಹೊಡೆದಾಟದ ದೃಶ್ಯಗಳು, ನಯನ ಮನೋಹರವಾದ ಹಾಡು-ಹಾಗೂ-ನೃತ್ಯದ ವಾಡಿಕೆಯ ಅನುಕ್ರಮಗಳು, ಮತ್ತು ಉತ್ಪ್ರೇಕ್ಷಿತ ಸ್ವರೂಪದಲ್ಲಿರುವ ಕಥಾನಾಯಕರಿಂದ ಜನರನ್ನು ಆಕರ್ಷಿಸುವುದನ್ನು ಮುಂದುವರಿಸಿದವು."[1] ಇದು ವ್ಯಾಪಾರಿ ತಮಿಳು ಚಲನಚಿತ್ರ ಹಾಗೂ ತೆಲುಗು ಚಲನಚಿತ್ರಗಳಿಗೆ ಸಂಬಂಧಿಸಿದಂತೆಯೂ ನಿಜ ಸಂಗತಿಯಾಗಿದೆ. ಮತ್ತೊಂದೆಡೆ, ಬಂಗಾಳಿ ಚಿತ್ರರಂಗ, ಮಲಯಾಳಂ ಚಿತ್ರರಂಗ, ಕನ್ನಡ ಚಿತ್ರರಂಗಗಳಲ್ಲಿ ಹಾಗೂ ತನ್ನ ಗಂಭೀರ ವಿಷಯ, ಯಥಾರ್ಥತೆ ಹಾಗೂ ವಾಸ್ತವಿಕತೆಗಳಿಗಾಗಿ ಚಿರಪರಿಚಿತವಾಗಿರುವ ಇತರ ಪ್ರಾದೇಶಿಕ ಭಾಷಾ ಉದ್ಯಮಗಳಲ್ಲಿ ಎದ್ದು ಕಾಣುವಂತಿರುವ 'ಸಮಾನಾಂತರ ಚಲನಚಿತ್ರ'ದ ಪ್ರವೃತ್ತಿಯ ಬೆಳವಣಿಗೆಯು ಇವಕ್ಕೆ ಹೋಲಿಸಿದಾಗ ವೈಲಕ್ಷಣ್ಯವನ್ನು ತೋರಿಸುತ್ತವೆ.[2][3]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2010) |