ಬ್ಲ್ಯಾಕ್ಜಾಕ್
From Wikipedia, the free encyclopedia
ಬ್ಲ್ಯಾಕ್ಜಾಕ್ ಪ್ರಪಂಚದಲ್ಲೇ ಅತಿ ವ್ಯಾಪಕವಾಗಿ ಆಡುವ ಕ್ಯಾಸಿನೊ ಬ್ಯಾಂಕಿಂಗ್ ಆಟವಾಗಿದೆ, ಇದನ್ನು ಟ್ವೆಂಟಿ-ಒನ್ , ವಿಂಗ್ಟ್-ಎಟ್-ಉನ್ ("ಟ್ವೆಂಟಿ-ಒನ್"ಗೆ ಫ್ರೆಂಚ್ನಲ್ಲಿ) ಅಥವಾ ಪಾಂಟೂನ್ ಎಂದೂ ಕರೆಯುತ್ತಾರೆ.[1] ಈ ಪ್ರಮಾಣಿತ ಆಟವನ್ನು 52 ಎಲೆಗಳನ್ನು ಹೊಂದಿರುವ ಒಂದು ಅಥವಾ ಅದಕ್ಕಿಂತ ಹೆಚ್ಚು ಆಂಗ್ಲೊ-ಅಮೆರಿಕನ್ ಡೆಕ್(ಇಸ್ಪೀಟು ಕಟ್ಟು)ಗಳನ್ನು ಬಳಸಿಕೊಂಡು ಆಡಲಾಗುತ್ತದೆ. ಈ ಆಟದ ಮೂಲಭೂತ ನಿಯಮಗಳೆಂದರೆ ಇಪ್ಪತ್ತೊಂದು ಮೌಲ್ಯವನ್ನು ಹಂಚುವ ಮೂಲಕ ಕೈಯಲ್ಲಿರುವ ಆರಂಭಿಕ ಎರಡು ಎಲೆಗಳ ಮೌಲ್ಯವನ್ನು ಸೇರಿಸುವುದಾಗಿರುತ್ತದೆ. ಇಪ್ಪತ್ತೊಂದಕ್ಕಿಂತ ಕಡಿಮೆ ಮೌಲ್ಯವು ಹಂಚಲ್ಪಟ್ಟರೆ, ಆಟಗಾರನು ಇಪ್ಪತ್ತೊಂದು ಮೌಲ್ಯವನ್ನು ತಲುಪುವವರೆಗೆ, ಆಡಲು ಸೂಕ್ತವಾಗಿದೆಯೆಂದು ಭಾವಿಸುವ ಮೌಲ್ಯವನ್ನು ತಲುಪುವವರೆಗೆ ಅಥವಾ ಇಪ್ಪತ್ತೊಂದನ್ನು ಮೀರಿಸುವ ಮೌಲ್ಯವನ್ನು ತಲುಪುವವರೆಗೆ ಒಂದೊಂದೇ ಎಲೆಗಳನ್ನು ಹಂಚುವುದನ್ನು ಆರಿಸುತ್ತಾನೆ. ಜಯಶಾಲಿಯು ಇಪ್ಪತ್ತೊಂದು ಮೌಲ್ಯದ ಎಲೆಗಳನ್ನು ಹೊಂದಿರುತ್ತಾನೆ. ಈ ಆಟವನ್ನು ವಿವಿಧ ನಿಯಮಗಳೊಂದಿಗೆ ಕ್ಯಾಸಿನೊಗಳಲ್ಲಿ ವಿವಿಧ ಬದಲಾವಣೆಗಳೊಂದಿಗೆ ಆಡಲಾಗುತ್ತದೆ. ಬ್ಲ್ಯಾಕ್ಜಾಕ್ ಜನಪ್ರಿಯವಾಗಲು ಎಲೆಯನ್ನು ಲೆಕ್ಕಮಾಡುವಿಕೆಯ ಸುತ್ತಲಿರುವ ಸಾಧ್ಯತೆ, ಕೌಶಲ್ಯ ಮತ್ತು ಪ್ರಸಿದ್ಧಿಯ ಮಿಶ್ರಣವು (ಒಬ್ಬರ ಪಂತವನ್ನು ಬದಲಾಯಿಸುವುದು. ಅದಲ್ಲದೇ ಮುಂದೆ ಹಂಚಲಾಗುವ(ವಿತರಿಸುವ) ಎಲೆಗಳ ಬಗೆಗಿನ ತಿಳಿವಳಿಕೆಯ ಪ್ರಯೋಜನ ಪಡೆಯಲು ನಿರ್ವಹಣಾ-ಚಾತುರ್ಯದಿಂದ ಆಡುವುದು) ಕಾರಣವಾಗಿರುತ್ತದೆ. ಕ್ಯಾಸಿನೊ ಆಟವನ್ನು ಬ್ರಿಟಿಷ್ ಎಲೆ ಆಟವಾದ ಬ್ಲ್ಯಾಕ್ ಜಾಕ್ ಆಗಿ ತಪ್ಪಾಗಿ ತಿಳಿಯಬಾರದು.