ಬಜರಂಗಿ ಭಾಯಿಜಾನ್ (ಚಲನಚಿತ್ರ)
ಹಿಂದಿ ಚಲನಚಿತ್ರ / From Wikipedia, the free encyclopedia
ಬಜರಂಗಿ ಭಾಯಿಜಾನ್ ಕಬೀರ್ ಖಾನ್ ನಿರ್ದೇಶಿಸಿದ 2015 ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಖಾನ್, ಕೆ.ವಿ.ವಿಜಯೇಂದ್ರ ಪ್ರಸಾದ್ ಮತ್ತು ಪರ್ವೀಜ಼್ ಶೇಖ್ ಬರೆದಿದ್ದಾರೆ. ಸಲ್ಮಾನ್ ಖಾನ್ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರಾ ನಟಿಸಿದ್ದಾರೆ. ನವಾಜ಼ುದ್ದೀನ್ ಸಿದ್ದೀಕಿ ಮತ್ತು ಕರೀನಾ ಕಪೂರ್ ಖಾನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೂ ದೇವತೆ ಹನುಮಂತನ ಉತ್ಕಟ ಭಕ್ತನಾದ ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಅವನು ಭಾರತದಲ್ಲಿ ತನ್ನ ಪೋಷಕರಿಂದ ಬೇರ್ಪಟ್ಟ, ಆರು ವರ್ಷದ ಮೂಕ ಪಾಕಿಸ್ತಾನಿ ಮುಸ್ಲಿಂ ಹುಡುಗಿಯನ್ನು ಪಾಕಿಸ್ತಾನದ ಅವಳ ಸ್ವಂತ ಊರಿಗೆ ವಾಪಸು ಕರೆದೊಯ್ಯಲು ಪ್ರಯಾಣವನ್ನು ಪ್ರಾರಂಭಿಸುತ್ತಾನೆ.
ಬಜರಂಗಿ ಭಾಯಿಜಾನ್ | |
---|---|
ನಿರ್ದೇಶನ | ಕಬೀರ್ ಖಾನ್ |
ನಿರ್ಮಾಪಕ | ಸಲ್ಮಾನ್ ಖಾನ್ ರಾಕ್ಲೈನ್ ವೆಂಕಟೇಶ್ ಕಬೀರ್ ಖಾನ್ |
ಲೇಖಕ | ಚಿತ್ರಕಥೆ: ಕಬೀರ್ ಖಾನ್ ಪರ್ವೀಜ಼್ ಶೇಖ್ ಕೆ. ವಿ. ವಿಜಯೇಂದ್ರ ಪ್ರಸಾದ್ ಸಂಭಾಷಣೆ: ಕಬೀರ್ ಖಾನ್ ಕೌಸರ್ ಮುನೀರ್ |
ಕಥೆ | ಕಬೀರ್ ಖಾನ್ ಕೆ. ವಿ. ವಿಜಯೇಂದ್ರ ಪ್ರಸಾದ್ |
ಸಂಭಾಷಣೆ | ಸಲ್ಮಾನ್ ಖಾನ್ |
ಪಾತ್ರವರ್ಗ |
|
ಸಂಗೀತ | ಹಾಡುಗಳು: ಪ್ರೀತಮ್ ಹಿನ್ನೆಲೆ ಸಂಗೀತ: ಜೂಲಿಯಸ್ ಪಾಕಿಯಾಮ್ |
ಛಾಯಾಗ್ರಹಣ | ಅಸೀಮ್ ಮಿಶ್ರಾ |
ಸಂಕಲನ | ರಾಮೇಶ್ವರ್ ಎಸ್. ಭಗತ್ |
ಸ್ಟುಡಿಯೋ | ಸಲ್ಮಾನ್ ಖಾನ್ ಫ಼ಿಲ್ಮ್ಸ್ ಕಬೀರ್ ಖಾನ್ ಫ಼ಿಲ್ಮ್ಸ್ |
ವಿತರಕರು | ಈರಾಸ್ ಇಂಟರ್ನ್ಯಾಷನಲ್ ರಾಕ್ಲೈನ್ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 159 ನಿಮಿಷಗಳು[1] |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ₹೯೦ ಕೋಟಿ[2] |
ಬಾಕ್ಸ್ ಆಫೀಸ್ | ಅಂದಾಜು ₹೯೬೯ ಕೋಟಿ [3][better source needed] |
₹ 90 ಕೋಟಿ ಬಂಡವಾಳದಲ್ಲಿ ತಯಾರಾದ ಈ ಚಿತ್ರದ ಪ್ರಧಾನ ಛಾಯಾಗ್ರಹಣ ನವೆಂಬರ್ 2014 ರಲ್ಲಿ ಪ್ರಾರಂಭವಾಯಿತು. ಛಾಯಾಗ್ರಹಣವನ್ನು ಅಸೀಮ್ ಮಿಶ್ರಾ ಮಾಡಿದ್ದು, ರಾಮೇಶ್ವರ ಎಸ್.ಭಗತ್ ಈ ಚಿತ್ರದ ಸಂಕಲನ ಮಾಡಿದ್ದಾರೆ. ಜೂಲಿಯಸ್ ಪ್ಯಾಕಿಯಮ್ ಹಿನ್ನೆಲೆ ಸಂಗೀತವನ್ನು ನೀಡಿದರೆ, ಚಿತ್ರದಲ್ಲಿರುವ ಹಾಡುಗಳನ್ನು ಪ್ರೀತಮ್ ಸಂಯೋಜಿಸಿದ್ದಾರೆ.
ಈ ಚಿತ್ರವು ವಿಮರ್ಶಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆಯಿತು ಮತ್ತು ವಾಣಿಜ್ಯಿಕ ಯಶಸ್ಸಾಯಿತು. ಈ ಚಿತ್ರವು ವಿಶ್ವಾದ್ಯಂತ ₹೯೬೯ ಕೋಟಿಯಷ್ಟು ಗಳಿಸಿತು.[3]. ೬೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರದ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ೬೧ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ನಟ ಸೇರಿದಂತೆ ನಾಲ್ಕು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು, ಮತ್ತು ಫ಼ಿಲ್ಮ್ಫೇರ್ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಗೆದ್ದಿತು. ಚೈನಾದ ೨೦೧೫ರ ಡೂಬಾನ್ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿಯೂ ಇದು ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕೆ ನಾಮನಿರ್ದೇಶನಗೊಂಡಿತು.[4]