ಫ್ರೆಂಚ್ ಗಯಾನ
From Wikipedia, the free encyclopedia
ಫ್ರೆಂಚ್ ಗಯಾನವು ಫ್ರಾನ್ಸ್ ದೇಶದ ವಸಾಹತು ಆಗಿದೆ. ಇದು ಒಂದು ಪುಟ್ಟ ರಾಷ್ಟ್ರವಾಗಿದ್ದು ಫ್ರೆಂಚ್ ಆಳ್ವಿಕೆಗೆ ಒಳಪಟ್ಟಿದೆ. ಇದು ದಕ್ಷಿಣ ಅಮೇರಿಕದ ಖಂಡದಲ್ಲಿದೆ. ಈ ರಾಷ್ಟ್ರದ ಅಕ್ಕಪಕ್ಕದಲ್ಲಿರುವ ರಾಷ್ಟ್ರಗಳಾವುವೆಂದರೆ ಸುರಿನಾಮ್ ಮತ್ತು ಬ್ರೆಜಿಲ್. ಫ್ರೆಂಚ್ ಗಯಾನ ದೇಶವು ಉತ್ತರಕ್ಕೆ ಪೆಸಿಪಿಕ್ ಮಹಾಸಗರವನ್ನು ಹೊಂದಿದೆ. ತನ್ನ ವಸಾಹತನ್ನು ಬೆಳೆಸಲು ಬಹಳ ಹಿಂದೆ ಫ್ರೆಂಚ್ ಸರಕಾರಗಳು ಅಪರಾಧಿಗಳನ್ನು ಇಲ್ಲಿಗೆ ಗಡಿಪಾರು ಮಾಡುತ್ತಿತ್ತು. ಇದರಿಂದಾಗಿ ಫ್ರೆಂಚ್ ಜನರು ಇಲ್ಲಿನ ಜನರ ಜೊತೆ ಬೆರೆತು ಹೋದರು. ಇಲ್ಲಿ ಇಂದಿಗೂ ಫ್ರೆಂಚ್ ಆಡಳಿತ.ಇಲ್ಲಿ ಫ್ರಾನ್ಸ್ ಹಣವಾದ ಯೂರೋ (ಚಿಹ್ನೆ: €; ಕೋಡು: EUR) ಚಲಾವಣೆಯಾಗುತ್ತದೆ. ಇಲ್ಲಿನ ಜನರು ಫ್ರೆಂಚ್ ನಾಗರೀಕರಾಗಿದ್ದಾರೆ. ಇಲ್ಲಿನ ಪ್ರಮುಖ ಪಟ್ಟಣಗಳಾವುವೆಂದರೆ ಕೈಯ್ಯನ್, ಕುರು,ಸಿನ್ನಮೇರಿ ಮುಂತಾದವು.ಕೈಯ್ಯನ್ ಪಟ್ಟಣವು ಕೈಯ್ಯನ್ ನದಿಯ ದಂಡೆಯ ಮೇಲಿದ್ದು ಇದು ರಾಜಧಾನಿಯಾಗಿದೆ. ಫ್ರೆಂಚ್ ಗಯಾನವು ಪ್ರತಿಯೊಂದು ಅವಶ್ಯಕತೆಗಳಿಗೆ ಫ್ರಾನ್ಸ್ ದೇಶವನ್ನು ಅವಲಂಬಿಸಿದೆ. ಇಲ್ಲಿನ ವಾಹನಗಳಿಗೆ ಎಡ ಬದಿಯಲ್ಲಿ ಚಾಲನೆ ನಿಯಂತ್ರಣವಿದ್ದು ರಸ್ಥೆಯ ಬಲ ಬದಿಯಲ್ಲಿ ಚಲಿಸಬೇಕು.
ಇಲ್ಲಿ ಹರಿಯುವ ಕೈಯ್ಯನ್ ಮತ್ತು ಕುರು ನದಿಗಳು ಅಮೇಜಾನ್ ನದಿಯ ಉಪನದಿಗಳಾಗಿವೆ. ಇವುಗಳಿಂದ ಅಪಾರ ಪ್ರಮಾಣದ ದಟ್ಟ ಅರಣ್ಯಗಳು ಅರಳಿವೆ. ಈ ನದಿಗಳಿಂದ ಉತ್ತಮವಾದ ಒಳನಾಡು ಸಾರಿಗೆ ವ್ಯವಸ್ಥೆಯಾಗಿದೆ. ಇಲ್ಲಿನ ಜನರು ಫ್ರೆಂಚ್ ಭಾಷೆಯನ್ನು ಮಾತನಾಡುತ್ತಾರೆ. ಇಲ್ಲಿ ಅನೇಕ ಹಿಂದಿ ಮಾತನಾಡುವ ಜನರೂ ನೆಲೆಸಿದ್ದಾರೆ.
ಇಲ್ಲಿ ಜಗತ್ ಪ್ರಸಿದ್ದ ಉಪಗ್ರಹ ಉಡ್ಡಯಣ ಕೇಂದ್ರವಿದೆ.ಇದರಿಂದ ಏರಿಯನ್,ಸೊಯುಜ್ ಮತ್ತು ವೆಗಾ ರಾಕೆಟ್ ಗಳನ್ನು ಉಡ್ಡಯಣ ಮಾಡಲಾಗುತ್ತದೆ.