ಪೋರ್ಟ್ಲ್ಯಾಂಡ್, ಆರೆಗನ್
From Wikipedia, the free encyclopedia
ಪೋರ್ಟ್ಲ್ಯಾಂಡ್ ವಾಯುವ್ಯ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಒಂದು ನಗರ. ಇದು ಒರೆಗಾನ್ ರಾಜ್ಯದಲ್ಲಿ ವಿಲ್ಲಾಮೆಟ್ಟೆ ಮತ್ತು ಕೊಲಂಬಿಯಾ ನದಿಗಳ ಸಂಗಮ ಸ್ಥಾನದ ಹತ್ತಿರದಲ್ಲಿದೆ. ೨೦೦೯ರ ಜುಲೈನಲ್ಲಿ ಇದು ೫೮೨,೧೩೦ನಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಆಗ ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ 30ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಗರವಾಗಿತ್ತು.[3] ಇದು ವಿಶ್ವದಲ್ಲಿ ಎರಡನೇ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲನೇ ಅತಿ ಹೆಚ್ಚು ಪರಿಸರ ಸ್ನೇಹಿ ಅಥವಾ "ಹಸಿರು" ನಗರ ಎಂಬ ಹೆಸರನ್ನು ಪಡೆದಿದೆ.[4] ಪೋರ್ಟ್ಲ್ಯಾಂಡ್ ಒರೆಗಾನ್ನ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ ಹಾಗೂ ವಾಷಿಂಗ್ಟನ್ನ ಸಿಯಾಟಲ್ ಮತ್ತು ಬ್ರಿಟಿಷ್ ಕೊಲಂಬಿಯಾದ ವ್ಯಾಂಕವರ್ ನಂತರ ಪೆಸಿಫಿಕ್ ವಾಯುವ್ಯ(ಪೆಸಿಫಿಕ್ ನಾರ್ತ್ವೆಸ್ಟ್)ದಲ್ಲಿ ಮೂರನೇ ಅತಿ ಜನಭರಿತ ನಗರವಾಗಿದೆ. ಸರಿಸುಮಾರು ಎರಡು ದಶಲಕ್ಷದಷ್ಟು ಜನರು ಪೋರ್ಟ್ಲ್ಯಾಂಡ್ ಮಹಾನಗರದಲ್ಲಿ (MSA) ವಾಸಿಸುತ್ತಾರೆ. ಇದು ೨೦೦೬ರ ಜುಲೈನ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ 23ನೇ ಅತಿಹೆಚ್ಚು ಜನಸಂಖ್ಯೆಯಾಗಿತ್ತು.[5]
Portland | |
---|---|
City | |
City of Portland | |
Montage of Portland | |
Nickname(s): "Rose City", "Stumptown", "P-town", "PDX", and "Little Beirut"[1] See Nicknames of Portland, Oregon for a complete listing. | |
Country | ಅಮೇರಿಕ ಸಂಯುಕ್ತ ಸಂಸ್ಥಾನ |
State | Oregon |
Counties | Multnomah, Washington, Clackamas |
Founded | 1845 |
Incorporated | February 8, 1851 |
Government | |
• Type | Commission |
• Mayor | Sam Adams[2] |
• Commissioners | Randy Leonard Dan Saltzman Nick Fish Amanda Fritz |
• Auditor | LaVonne Griffin-Valade |
Area | |
• City | ೧೪೫.೪ sq mi (೩೭೬.೫ km2) |
• Land | ೧೩೪.೩ sq mi (೩೪೭.೯ km2) |
• Water | ೧೧.೧ sq mi (೨೮.೬ km2) |
Elevation | ೫೦ ft (೧೫.೨ m) |
Population (2009) | |
• City | ೫,೮೨,೧೩೦ |
• Density | ೪,೨೮೮.೩೮/sq mi (೧,೬೫೫.೩೧/km2) |
• Metro | ೨೨,೧೭,೩೨೫ |
• Demonym | Portlander |
Time zone | UTC-8 (PST) |
• Summer (DST) | UTC-7 (PDT) |
ZIP codes | 97086-97299 |
Area code(s) | 503/971 |
FIPS code | 41-59000GR2 |
GNIS feature ID | 1136645GR3 |
Website | www.portlandonline.com |
ಪೋರ್ಟ್ಲ್ಯಾಂಡ್ ೧೮೫೧ರಲ್ಲಿ ಏಕೀಕರಣಗೊಂಡಿತು ಹಾಗೂ ಇದು ಮುಲ್ಟ್ನೋಮಾ ಕೌಂಟಿಯ ಮುಖ್ಯ ಪಟ್ಟಣವಾಗಿದೆ.GR6 ಈ ನಗರವು ಪಶ್ಚಿಮದಲ್ಲಿ ವಾಷಿಂಗ್ಟನ್ ಕೌಂಟಿಯತ್ತ ಸ್ವಲ್ಪ ಭಾಗ ಹಾಗೂ ದಕ್ಷಿಣದಲ್ಲಿ ಕ್ಲ್ಯಾಕಮಾಸ್ ಕೌಂಟಿಯತ್ತ ವಿಸ್ತರಿಸಿಕೊಂಡಿದೆ. ಈ ನಗರದಲ್ಲಿ ಒಬ್ಬ ಮೇಯರ್ ಮತ್ತು ನಾಲ್ಕು ಇತರ ಕಮೀಷನರ್ಗಳನ್ನೊಳಗೊಂಡ ಕಮೀಷನ್-ಆಧಾರಿತ ಸರ್ಕಾರವು ಆಡಳಿತ ನಡೆಸುತ್ತದೆ.
ಈ ನಗರವು ಪ್ರಬಲ ಭೂಬಳಕೆಯ ಯೋಜನೆಗೆ[6] ಮತ್ತು ಹಗುರ ರೈಲು ಸಾರಿಗೆ ವ್ಯವಸ್ಥೆಯಲ್ಲಿನ ಬಂಡವಾಳ ಹೂಡಿಕೆಗೆ ಗಮನಸೆಳೆದಿದೆ. ಇದು ಒಂದು ಭಿನ್ನವಾದ ಪ್ರಾದೇಶಿಕ-ಸರ್ಕಾರವಾದ ಮೆಟ್ರೊದಿಂದ ಬೆಂಬಲ ಪಡೆದಿದೆ. ಪೋರ್ಟ್ಲ್ಯಾಂಡ್ ಅತಿ ಹೆಚ್ಚಿನ ಸಂಖ್ಯೆಯ ಮೈಕ್ರೊಬ್ರಿವರಿ(ಸಣ್ಣ ಪ್ರಮಾಣದಲ್ಲಿ ಬಿಯರ್ ಮೊದಲಾದುವುಗಳನ್ನು ಬಟ್ಟಿಯಿಳಿಸುವ ಮನೆ)ಗಳಿಗೆ ಮತ್ತು ಮೈಕ್ರೊಡಿಸ್ಟಿಲ್ಲರಿ(ಸಣ್ಣ ಬಟ್ಟಿಗೃಹ)ಗಳಿಗೆ ಮಾತ್ರವಲ್ಲದೆ ಅದರ ಕಾಫಿಯನ್ನು ಕುರಿತ ಉತ್ಸುಕತೆಗೂ ಹೆಸರಾಗಿದೆ. ಅಲ್ಲದೆ ಇದು ಟ್ರೈಯಲ್ ಬ್ಲೇಜರ್ NBA ತಂಡಕ್ಕೂ ನೆಲೆಯಾಗಿದೆ.
ಪೋರ್ಟ್ಲ್ಯಾಂಡ್ ಸಮುದ್ರದ ತೀರದ ವಾಯುಗಣವನ್ನು ಹೊಂದಿದೆ. ಅಲ್ಲಿ ಬೆಚ್ಚಗಿನ, ಶುಷ್ಕ ಬೇಸಿಗೆ ಮತ್ತು ಮಳೆಯ ಆದರೆ ಸಮಶೀತೋಷ್ಣ ಚಳಿಗಾಲವಿರುತ್ತದೆ. ಈ ವಾಯುಗುಣವು ಗುಲಾಬಿ ಹೂವುಗಳನ್ನು ಬೆಳೆಯಲು ಅತ್ಯುತ್ತಮವಾಗಿದೆ. ಶತಮಾನಗಳಿಗಿಂತಲೂ ಹಿಂದಿನಿಂದ ಪೋರ್ಟ್ಲ್ಯಾಂಡ್ "ಗುಲಾಬಿ ಹೂವುಗಳ ನಗರ"[7][8] ಎಂದು ಜನಪ್ರಿಯವಾಗಿದೆ. ಇದು ಅನೇಕ ಗುಲಾಬಿ ಹೂವುಗಳ ಉದ್ಯಾನವನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದುದು ಇಂಟರ್ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್.