ಪಿಜ್ಜಾ ಹಟ್
From Wikipedia, the free encyclopedia
ಪೇಸ್ತಾ/ಶಾವಿಗೆಯಂತಹಾ ತಿನಿಸು, ಕೋಳಿಪುಕ್ಕದ/ರೆಕ್ಕೆಯ ತಿನಿಸು, ಉರುಳೆ ಬ್ರೆಡ್ಗಳು ಮತ್ತು ಬೆಳ್ಳುಳ್ಳಿ ಬ್ರೆಡ್ಗಳೂ ಸೇರಿದಂತೆ ಜೊತೆಯ ಭಕ್ಷ್ಯ/ತಿನಿಸುಗಳೊಂದಿಗೆ ಬಗೆಬಗೆಯ ಪಿಜ್ಜಾಗಳನ್ನು ಮಾರಾಟ ಮಾಡುವ ಪಿಜ್ಜಾ ಹಟ್ (ಸಾಂಸ್ಥಿಕವಾಗಿ ಪಿಜ್ಜಾ ಹಟ್, Inc. ಎಂದು ಹೆಸರಾಗಿದೆ) ಒಂದು ಅಮೇರಿಕನ್ ರೆಸ್ಟೋರೆಂಟ್ ಸಮೂಹ ಮತ್ತು ಅಂತರರಾಷ್ಟ್ರೀಯ ಫ್ರಾಂಚೈಸೀಯಾಗಿದೆ.
ಸಂಸ್ಥೆಯ ಪ್ರಕಾರ | Wholly owned subsidiary |
---|---|
ಸ್ಥಾಪನೆ | Wichita, Kansas (1958) |
ಸಂಸ್ಥಾಪಕ(ರು) | Dan and Frank Carney |
ಮುಖ್ಯ ಕಾರ್ಯಾಲಯ | Addison, Texas, United States |
ಪ್ರಮುಖ ವ್ಯಕ್ತಿ(ಗಳು) | David C Novak (Chairman) Scott Bergren (President) |
ಉದ್ಯಮ | Restaurants |
ಉತ್ಪನ್ನ | Italian-American cuisine pizza · pasta · desserts |
ಉದ್ಯೋಗಿಗಳು | over 30,000 |
ಪೋಷಕ ಸಂಸ್ಥೆ | PepsiCo (1977–1997) Yum! Brands (1997–present) |
ಜಾಲತಾಣ | Pizzahut.com |
ಸರಿಸುಮಾರು 34,000 ರೆಸ್ಟೋರೆಂಟ್ಗಳು, ಬಟವಾಡೆ/ವಿತರಣೆ/ಕೊಂಡೊಯ್ಯುವಿಕೆಯ ನೆಲೆ/ತಾಣಗಳು ಮತ್ತು ಪೆಟ್ಟಿಗೆಗೂಡುಗಳನ್ನು 100 ರಾಷ್ಟ್ರಗಳಲ್ಲಿ ಹೊಂದಿರುವ ಯಮ್! ಬ್ರಾಂಡ್ಸ್ , Inc.ನ (ವಿಶ್ವದ ಬೃಹತ್ ರೆಸ್ಟೋರೆಂಟ್ ಕಂಪೆನಿ [1]) ಒಂದು ಅಂಗಸಂಸ್ಥೆಯಾಗಿದೆ.
ಪ್ರಸ್ತುತ ಟೆಕ್ಸಾಸ್ನ ಅಡಿಸನ್[2] (ಡಲ್ಲಾಸ್ನ ಉತ್ತರಕ್ಕಿರುವ ಉಪನಗರ) ಮೂಲದ್ದಾಗಿರುವ ಪಿಜ್ಜಾ ಹಟ್ 1995ರಿಂದ ಬಳಸುತ್ತಿರುವ ಪ್ರಸ್ತುತ ಕಟ್ಟಡದ ಭೋಗ್ಯದ ವಾಯಿದೆಯು ಡಿಸೆಂಬರ್ 31, 2010ರಂದು ಮುಕ್ತಾಯವಾಗಲಿದ್ದು, ಅದರ ನಂತರ ತನ್ನ ಪ್ರಧಾನಕಚೇರಿಯನ್ನು ಸನಿಹದ ಪ್ಲಾನೋದಲ್ಲಿರುವ ಲೆಗಸಿ ಆಫೀಸ್ ಪಾರ್ಕ್ಗೆ ಸ್ಥಳಾಂತರಿಸಲಿದೆ .[3][4]