ಪಿಕ್ಸರ್
From Wikipedia, the free encyclopedia
ಪಿಕ್ಸರ್ ಅನಿಮೇಷನ್ ಸ್ಟುಡಿಯೊಸ್ ಎಂಬುದು ಅಮೆರಿಕಾದ CGI ಅನಿಮೇಷನ್ ಚಲನಚಿತ್ರ ಸ್ಟುಡಿಯೊ. ಇದು ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೊರ್ನಿಯಾ ರಾಜ್ಯದ ಎಮೆರಿವಿಲ್ಲೆನಲ್ಲಿ ನೆಲೆಗೊಂಡಿದೆ. ೨೦೦೬ ಇಸವಿಯಲ್ಲಿ ಪಿಕ್ಸರ್ ವಾಲ್ಟ್ ಡಿಸ್ನಿ ಕಂಪೆನಿಯ ಅಂಗಸಂಸ್ಥೆಯಾಯಿತು. ಈ ಸ್ಟುಡಿಯೊ ಇಪ್ಪತ್ತನಾಲ್ಕು ಅಕ್ಯಾಡಮಿ ಪ್ರಶಸ್ತಿಗಳು, ಆರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಹಾಗೂ ಮೂರು ಗ್ರ್ಯಾಮ್ಮಿ ಪ್ರಶಸ್ತಿಗಳನ್ನು ಇತರೆ ಹಲವು ಪ್ರಶಸ್ತಿಗಳು, ಮನ್ನಣೆಗಳು ಮತ್ತು ಸಾಧನೆಗಳ ನಡುವೆ ಗಳಿಸಿದೆ ಹಾಗೂ ವಿಶ್ವಾದ್ಯಂತ $ ೫.೫ ಶತಕೋಟಿ ಹಣ ಗಳಿಸಿದೆ. ಇದು ಬಹುಶಃ ಅತಿ ಹೆಚ್ಚು(ರಾಟೆನ್ ಟೊಮೆಟೊಸ್ [1][2] ಪ್ರಕಾರ,ಬಹುಶಃ ಏಕೈಕ)ವಿಮರ್ಶಾತ್ಮಕವಾಗಿ ಪ್ರಶಂಸೆ ಗಳಿಸಿದ ಚಲನಚಿತ್ರ ಸ್ಟುಡಿಯೊಗಳಲ್ಲಿ ಒಂದಾಗಿದೆ. CGI-ಆನಿಮೇಟ್ ಆಗಿರುವ ಚಲನಚಿತ್ರಗಳ ನಿರ್ಮಾಣಕ್ಕೆ ಪಿಕ್ಸರ್ ಹೆಸರುವಾಸಿಯಾಗಿದ್ದು ಫೊಟೊರಿಯಲಿಸ್ಟಿಕ್ ರೆಂಡರ್ಮನ್ಮೂಲಕ ಇದನ್ನು ಸೃಷ್ಟಿಸಲಾಗಿದೆ. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ರಚಿಸಲು ಉದ್ಯಮ- ಪ್ರಮಾಣಿತ ರೆಂಡರ್ಮ್ಯಾನ್ ಚಿತ್ರ ಮೂಡಿಸುವ APIಯನ್ನು ಇದು ಸ್ವಯಂ ಅನುಷ್ಠಾನ ಮಾಡಿದೆ.
ಸಂಸ್ಥೆಯ ಪ್ರಕಾರ | Subsidiary of Disney (Formerly public as NASDAQ: PIXR) |
---|---|
ಪೂರ್ವಾಧಿಕಾರಿ | Graphics Group (1979-1986) |
ಸ್ಥಾಪನೆ | 1979 (1979) as Graphics Group 1986 (1986) as Pixar |
ಸಂಸ್ಥಾಪಕ(ರು) | Ed Catmull Alvy Ray Smith Steve Jobs |
ಮುಖ್ಯ ಕಾರ್ಯಾಲಯ | Emeryville, California, U.S. |
ಪ್ರಮುಖ ವ್ಯಕ್ತಿ(ಗಳು) | Ed Catmull, President, Walt Disney Animation Studios & Pixar Animation Studios John Lasseter, Chief Creative Officer, Walt Disney Animation Studios & Pixar Animation Studios Jim Morris, General Manager, Pixar Animation Studios Steve Jobs, former CEO of Pixar Animation Studios and member of the Board of Directors at Walt Disney Animation Studios |
ಉದ್ಯಮ | CGI animation, motion pictures, software |
ಉತ್ಪನ್ನ | RenderMan, Marionette |
ಮಾಲೀಕ(ರು) | The Walt Disney Company |
ಜಾಲತಾಣ | http://www.pixar.com |
ಪಿಕ್ಸರ್ ಉದ್ದಿಮೆಯು ಮೊದಲಿಗೆ ೧೯೭೯ ರಲ್ಲಿ ಗ್ರ್ಯಾಫಿಕ್ಸ್ ಗ್ರೂಪ್ ಆಗಿ ಆರಂಭಗೊಂಡಿತ್ತು. ಇದು ಲುಕಾಸ್ಫಿಲ್ಮ್ನ ಕಂಪ್ಯುಟರ್ ವಿಭಾಗದ ಅಂಗವಾಗಿತ್ತು. ನಂತರ, ೧೯೮೬ ರಲ್ಲಿ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಈ ಉದ್ದಿಮೆಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ೨೦೦೬ ಇಸವಿಯಲ್ಲಿ ವಾಲ್ಟ್ ಡಿಸ್ನಿ ಕಂಪೆನಿಯು ಪಿಕ್ಸಾರ್ ಉದ್ದಿಮೆಯನ್ನು ಖರೀದಿಸಿತು.
೧೯೯೫ ಇಸವಿಯಲ್ಲಿ ನಿರ್ಮಾಣವಾದ ಟಾಯ್ ಸ್ಟೋರಿ ಪಿಕ್ಸರ್ ನಿರ್ಮಾಣದ ಮೊದಲ ಚಲನಚಿತ್ರವಾಗಿದ್ದು, ಪಿಕ್ಸರ್ ಇದುವರೆಗೂ ಹನ್ನೊಂದು ಚಲನಚಿತ್ರಗಳನ್ನು ನಿರ್ಮಿಸಿದೆ. ಎಲ್ಲವೂ ವಿಮರ್ಶಾತ್ಮಕ ಹಾಗೂ ವಾಣಿಜ್ಯ ಯಶಸ್ಸು ಕಂಡಿವೆ. ಟಾಯ್ ಸ್ಟೋರಿ ಯ ನಂತರ, ಪಿಕ್ಸರ್ ನಿರ್ಮಾಣದ ಈ ಚಲನಚಿತ್ರಗಳು ತೆರೆಕಂಡವು: ಎ ಬಗ್ಸ್ ಲೈಫ್ (೧೯೯೮), ಟಾಯ್ ಸ್ಟೋರಿ ೨ (೧೯೯೯), ಮಾಂಸ್ಟರ್ಸ್ ಇನ್ಕಾರ್ಪೊರೇಟೆಡ್ (೨೦೦೧), ಫೈಂಡಿಂಗ್ ನೆಮೊ (೨೦೦೩) (ಇಲ್ಲಿವರೆಗಿನ ಪಿಕ್ಸಾರ್ ನಿರ್ಮಾಣದ ಅತಿ ಯಶಸ್ವಿ ಚಲನಚಿತ್ರ, ವಿಶ್ವದಾದ್ಯಂತ $೮೦೦ ದಶಲಕ್ಷ ಗಳಿಕೆ), ದಿ ಇಂಕ್ರಿಡಿಬಲ್ಸ್ (೨೦೦೪), ಕಾರ್ಸ್ (೨೦೦೬), ರಟಾಟೂಯಿ (೨೦೦೭), WALL-E (೨೦೦೮), Up (೨೦೦೯) (ಡಿಸ್ನಿ ಡಿಜಿಟಲ್ ೩-ಡಿಯಲ್ಲಿ ಪ್ರಸ್ತುತಪಡಿಸಲಾದ ಮೊದಲ ಪಿಕ್ಸರ್ ಚಲನಚಿತ್ರ) ಹಾಗೂ ಟಾಯ್ ಸ್ಟೊರಿ ೩ (೨೦೧೦). ಪಿಕ್ಸರ್ ಉದ್ದಿಮೆಯ ಹನ್ನೆರಡನೆಯ ಚಲನಚಿತ್ರ ಕಾರ್ಸ್ ೨ ೨೦೧೧೧ ರ ಜೂನ್ ೨೪ ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
೨೦೦೧ ರಲ್ಲಿ ಅತ್ಯುತ್ತಮ ಆನಿಮೇಟೆಡ್ ಚಲನಚಿತ್ರಕ್ಕಾಗಿ ಅಕ್ಯಾಡಮಿ ಪ್ರಶಸ್ತಿ ವಿಭಾಗವನ್ನು ಉದ್ಘಾಟಿಸಿದ ನಂತರ ಬಿಡುಗಡೆಯಾದ ಎಲ್ಲಾ ಪಿಕ್ಸರ್ ನಿರ್ಮಿತ ಚಲನಚಿತ್ರಗಳು ಈ ಪ್ರಶಸ್ತಿಗೆ ನಾಮನಿರ್ದೇಶಿತವಾಗಿವೆ. ಇದರಲ್ಲಿ ಮಾಂಸ್ಟರ್ಸ್, ಇಂಕಾರ್ಪೊರೇಟೆಡ್ ಮೊದಲ ಚಲನಚಿತ್ರವಾಗಿತ್ತು. ಏಳು ಚಲನಚಿತ್ರಗಳಲ್ಲಿ ಐದಕ್ಕೆ ಪ್ರಶಸ್ತಿ ಸಂದಿವೆ: ಪೈಂಡಿಂಗ್ ನೆಮೊ , ದಿ ಇಂಕ್ರಿಡಿಬಲ್ಸ್ , ರಟಾಟೂಲ್ , ವಾಲ್-ಇ ಹಾಗೂ ಅಪ್ . ಜೊತೆಗೆ, ಅಪ್ ಅತ್ಯುತ್ತಮ ಚಲನಚಿತ್ರಕ್ಕಾಗಿ ಅಕ್ಯಾಡಮಿ ಪ್ರಶಸ್ತಿ ನಾಮನಿರ್ದೇಶನವಾದ ಮೊದಲ ಚಲನಚಿತ್ರವೂ ಆಗಿದೆ. ಫೈಂಡಿಂಗ್ ನೆಮೊ , ದಿ ಇಂಕ್ರಿಡಿಬಲ್ಸ್ , ರಟಾಟೂಲ್ , ಅಪ್ ಹಾಗೂ ಟಾಯ್ ಸ್ಟೋರಿ ೩ ಸರ್ವಕಾಲಿಕ ಪ್ರಮುಖ ೫೦ ಹೆಚ್ಚು ಯಶಸ್ವಿ ಚಲನಚಿತ್ರಗಳ ಪಟ್ಟಿಗೆ ಸೇರಿವೆ. ಫೈಂಡಿಂಗ್ ನೆಮೊ ಪ್ರಮುಖ ೨೦ ರ ಪಟ್ಟಿಯಲ್ಲಿ ೨೦ ನೆಯ ಸ್ಥಾನ, ಟಾಯ್ ಸ್ಟೋರಿ ೩ ೨೩ ನೆಯ ಸ್ಥಾನ, ಅಪ್ ೩೬ ನೆಯ ಸ್ಥಾನ, ದಿ ಇಂಕ್ರಿಡಿಬಲ್ಸ್ ೪೬ ನೆಯ ಸ್ಥಾನ ಹಾಗೂ ರಟಾಟೂಲ್ ೪೮ ನೆಯ ಸ್ಥಾನ ಗಳಿಸಿದವು.
೨೦೦೯ ರ ಸೆಪ್ಟೆಂಬರ್ ೬ ರಂದು, ಪಿಕ್ಸರ್ನ ಕಾರ್ಯನಿರ್ವಾಹಕರಾದ ಜಾನ್ ಲ್ಯಾಸಟರ್, ಬ್ರ್ಯಾಡ್ ಬರ್ಡ್, ಪೀಟ್ ಡಾಕ್ಟರ್, ಆಂಡ್ರ್ಯೂ ಸ್ಟಾಂಟನ್ ಮತ್ತು ಲೀ ಉಂಕ್ರಿಚ್ರಿಗೆ ಬಯೆನಲ್ ವೆನಿಸ್ ಚಲನಚಿತ್ರೋತ್ಸವದಲ್ಲಿ ಸರ್ವಕಾಲಿಕ ಸಾಧನೆಯ ಗೋಲ್ಡನ್ ಲಯನ್ ಪ್ರಶಸ್ತಿ ಲಭಿಸಿತು. ಲುಕ್ಯಾಸ್ಫಿಲ್ಮ್ ಸಂಸ್ಥಾಪಕ ಜಾರ್ಜ್ ಲ್ಯೂಕಾಸ್ ಈ ಪ್ರಶಸ್ತಿ ಪ್ರದಾನ ಮಾಡಿದರು.