ಜಾರ್ಜೆಸ್ ಮೆಲಿಯೇಸ್
From Wikipedia, the free encyclopedia
ಜಾರ್ಜೆಸ್ ಮೆಲಿಯೇಸ್ (Georges Méliès) ಎಂದೇ ಖ್ಯಾತರಾದ ಮೇರಿ-ಜಾರ್ಜೆಸ್-ಜೀನ್-ಮೆಲಿಯೇಸ್[1] (೮ ಡಿಸೆಂಬರ್ ೧೮೬೧– ೨೧ ಜನವರಿ ೧೯೩೮)ರವರು ಚಲನಚಿತ್ರಗಳ ಆರಂಭಿಕ ದಿನಗಳಲ್ಲಿ ನಿರೂಪಣೆ ಹಾಗು ತಾಂತ್ರಿಕ ವರ್ಗಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡ ಫ಼್ರೆಂಚ್ ಚಲನಚಿತ್ರ ನಿರ್ದೇಶಕ ಹಾಗು ಇಂದ್ರಜಾಲಿಗ. ಸದಾ ಹೊಸ ತಂತ್ರಾಂಶಗಳನ್ನು ಸೃಷ್ಟಿಸುವುದನ್ನೇ ತಮ್ಮ ಹೆಗ್ಗುರುತನ್ನಾಗಿಸಿಕೊಂಡಿದ್ದ ಮೆಲಿಯೇಸ್, ತಮ್ಮ ಚಲನಚಿತ್ರಗಳಲ್ಲಿ ಬಳಸುತ್ತಿದ್ದ ವಿಶೇಷ ಪರಿಣಾಮ(ಸ್ಪೆಷಲ್ ಎಫ಼ೆಕ್ಟ್ಸ್)ಗಳಿಗೆ ಹೆಸರುವಾಸಿಯಾಗಿದ್ದರು. ಸುಬ್ಸ್ಟಿಟ್ಯುಶನ್ ಸ್ಪ್ಲೈಸಸ್, ಮಲ್ಟಿಪಲ್ ಎಕ್ಸ್ಪೋಷರ್,ಟೈಮ್ ಲ್ಯಾಪ್ಸ್ ಛಾಯಾಗ್ರಹಣ,ಡಿಸಾಲ್ವ್ ,ಕೈಯಿಂದ ಮಾಡಿದ ಬಣ್ಣದ ಚಲನಚಿತ್ರಗಳು ಹಾಗು ಇನ್ನೂ ಹಲವು ತಂತ್ರಾಂಶಗಳನ್ನು ಜನಪ್ರಿಯಗೊಳಿಸುವಲ್ಲಿ ಇವರದ್ದೇ ಸಿಂಹಪಾಲು. ಚಿತ್ರ ನಿರ್ಮಾಣದಲ್ಲಿ ಸ್ಟೋರಿಬೋರ್ಡ್ ಗಳನ್ನು ಉಪಯೋಗಿಸಿದವರಲ್ಲಿ ಜಾರ್ಜೆಸ್ ಮೊದಲಿಗರು[2]. ಜ್ಯುಲ್ಸ್ ವರ್ನೆಯವರ ಶೈಲಿಯಲ್ಲಿ ವಿಚಿತ್ರ ಹಾಗು ಅಸಂಭಾವ್ಯ ಪಯಣಗಳನ್ನು ಬಿಂಬಿಸುವ ಇವರ ಜನಪ್ರಿಯ ಚಿತ್ರಗಳಾದ ಎ ಟ್ರಿಪ್ ಟು ದ ಮೂನ್(೧೯೦೨) ಹಾಗು ದಿ ಇಂಪಾಸಿಬಲ್ ವೊಯೇಜ್(೧೯೦೪) , ಕಾಲ್ಪನಿಕ ಕಥಾನಕಗಳಾಗಿದ್ದರೂ, ವೈಜ್ಞಾನಿಕ ಕಲ್ಪನೆಯನ್ನು ಆಧರಿಸಿದ ಆರಂಭಿಕ ಚಿತ್ರಗಳ ಪಟ್ಟಿಯಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿವೆ.
ಜಾರ್ಜೆಸ್ ಮೆಲಿಯೇಸ್ | |
---|---|
ಜನನ | ಮೇರಿ-ಜಾರ್ಜೆಸ್-ಜೀನ್-ಮೆಲಿಯೇಸ್ (೧೮೬೧-೧೨-೦೮)೮ ಡಿಸೆಂಬರ್ ೧೮೬೧ ಪ್ಯಾರಿಸ್, ಫ್ರಾನ್ಸ್ |
ಮರಣ | 21 January 1938(1938-01-21) (aged 76) ಪ್ಯಾರಿಸ್, ಫ್ರಾನ್ಸ್ |
ರಾಷ್ಟ್ರೀಯತೆ | ಫ಼್ರೆಂಚ್ |
ವೃತ್ತಿ(ಗಳು) | ಚಲನಚಿತ್ರ ನಿರ್ದೇಶಕ, ನಟ, ವಿನ್ಯಾಸಕಾರ, ಇಂದ್ರಜಾಲಿಗ, ಆಟಿಕೆ ತಯಾರಕ, ವಸ್ತ್ರ ವಿನ್ಯಾಸಕಾರ |
Years active | ೧೮೮೮–೧೯೨೩ |
ಸಂಗಾತಿ(s) | ಯುಜೀನಿ ಜೆನಿನ್ (೧೮೮೫–೧೯೧೩; ಇವರ ಮರಣದವರೆಗೂ) ಜಿಹ್ಯಾನ್ ಡಿ'ಎಲ್ಸಿ (೧೯೨೫–೧೯೩೮; ಜಾರ್ಜೆಸ್ ಮರಣದವರೆಗೂ) |
ಮಕ್ಕಳು | ೨ |
Signature | |