ಜಾನ್ ಎಫ್.ಕೆನೆಡಿ
From Wikipedia, the free encyclopedia
ಜಾನ್ ಫಿಟ್ಜ್ ಜೆರಾಲ್ಡ್ ಕೆನಡಿ (ಮೇ ೨೯,೧೯೧೭ - ನವೆಂಬರ್ ೨೨, ೧೯೬೩) ಅಮೆರಿಕಾ ಸಂಯುಕ್ತ ಸಂಸ್ಥಾನದ ೩೫ ನೇ ರಾಷ್ಟ್ರಪತಿಗಳಾಗಿ ೧೯೬೧ ರಲ್ಲಿ ಅಧಿಕಾರಕ್ಕೇರಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜಕೀಯ ರಂಗದಲ್ಲಿ ಜೆ.ಎಫ್.ಕೆ ಅಥವಾ ಜಾಕ್ ಎಂದೇ ಪ್ರಸಿದ್ಧರಾಗಿದ್ದ ಕೆನಡಿಯವರು ೧೯೬೩ರ ನವೆಂಬರ್ ೨೨ ರಂದು ಡಲ್ಲಾಸ್ ನಲ್ಲಿ ಕಾರಿನ ರ್ಯಾಲಿಯಲ್ಲಿ ಪಾಲ್ಗೊಂಡು ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಯಿತು. ಆಗಿನ ಸೋವಿಯತ್ ಒಕ್ಕೂಟದ ಶೀತಲ ಸಮರ ಹಾಗು ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ಯು.ಎಸ್.ಎ ಬಣದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೆನಡಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಉದಾರವಾದದಲ್ಲಿಯೂ ಮಹತ್ತರ ಪಾತ್ರ ವಹಿಸಿದ್ದರು. ಡೆಮಾಕ್ರಟ್ ಪಕ್ಷದ ಅಭ್ಯರ್ಥಿಯಾಗಿದ್ದ ಅವರು ಸಂಯುಕ್ತ ಸಂಸ್ಥಾನದ ರಾಜ್ಯ ಸಭೆಯಲ್ಲಿ(ಹೌಸ್ ಆಫ್ ಕಾಮನ್ಸ್) ಸದಸ್ಯರಾಗಿ ರಾಷ್ಟ್ರ ರಾಜಕೀಯದ ಅನುಭವ ಹೊಂದಿದ್ದರು.