ಚಟ್ನಿ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಮೂಲ | |
---|---|
ಪರ್ಯಾಯ ಹೆಸರು(ಗಳು) | Chatni |
ಮೂಲ ಸ್ಥಳ | India, ಪಾಕಿಸ್ತಾನ |
ಪ್ರಾಂತ್ಯ ಅಥವಾ ರಾಜ್ಯ | South Asia |
ವಿವರಗಳು | |
ಮುಖ್ಯ ಘಟಕಾಂಶ(ಗಳು) | salt, chillies, tamarind, coriander leaves, tomatoes |
ಚಟ್ನಿ (ಹಿಂದಿ:चटनी) ಎಂಬುದು ಹಿಂದಿ-ಉರ್ದುವಿನಿಂದ ಪಡೆದು ಇಂಗ್ಲಿಷ್ನೊಳಗೆ ಸಂಯೋಜಿಸಲ್ಪಟ್ಟಿರುವ ಒಂದು ಎರವಲು ಪದವಾಗಿದ್ದು, ದಕ್ಷಿಣ ಏಷ್ಯಾ[1] ಮತ್ತು ಇತರ ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿನ ಜಲಪಿಷ್ಟದಂಥ (ಪೇಸ್ಟ್ನಂಥ) ಒಂದು ವ್ಯಂಜನವನ್ನು ಇದು ವಿವರಿಸುತ್ತದೆ. caṭnī ಎಂಬುದರಿಂದ (ಮರಾಠಿ:चटणी, ತಮಿಳು:சட்னி, ಕನ್ನಡ:ಚಟ್ನಿ, ಹಿಂದಿ:चटनी, ಉರ್ದು: چٹنی, ಮಲಯಾಳಂ:ചമ്മന്തി, ತೆಲುಗು:పచ్చడి) ಇದು ಜನ್ಯವಾಗಿದ್ದು, ಇದು ಮುಖ್ಯ ಭಕ್ಷ್ಯವೊಂದರ ಒಂದು ಜೊತೆಯ ಪದಾರ್ಥವಾಗಿ ಬಳಸಲ್ಪಡುವ ಮಸಾಲೆಭರಿತ ತಯಾರಿಕೆಗಳ ಒಂದು ವರ್ಗಕ್ಕೆ ಸಂಬಂಧಿಸಿದ ಶಬ್ದವಾಗಿದೆ. ಚಟ್ನಿಗಳು ಸಾಮಾನ್ಯವಾಗಿ ಒಂದು ವಿಲಕ್ಷಣವಾದ ಆದರೆ ಪೂರಕವಾದ ಮಸಾಲೆ ಮತ್ತು ತರಕಾರಿಯ ಮಿಶ್ರಣವನ್ನು ಒಳಗೊಂಡಿರುತ್ತವೆ.
ಚಟ್ನಿಗಳು ಹಸಿಯಾಗಿ ಅಥವಾ ಶುಷ್ಕವಾಗಿದ್ದು, ದಪ್ಪನಾಗಿರುವುದರಿಂದ ಮೊದಲ್ಗೊಂಡು ನವಿರಾಗಿರುವುದರವರೆಗಿನ ಒಂದು ಸ್ವರೂಪವನ್ನು ಹೊಂದಿರುತ್ತವೆ. ಮುರಬ್ಬಗಳು ಅನೇಕವೇಳೆ ಸಿಹೀಕರಿಸಲ್ಪಡುವ ಕಾರಣದಿಂದ, ಆಂಗ್ಲ-ಭಾರತೀಯ ಎರವಲು ಪದವು ತಾಜಾ ಮತ್ತು ಊರಿಟ್ಟ ವ್ಯಂಜನ ಪದಾರ್ಥಗಳಿಗೆ ಮನಸೋ ಇಚ್ಛೆಯಾಗಿ ಉಲ್ಲೇಖಿಸಲ್ಪಡುತ್ತದೆ. ಕನಿಷ್ಟಪಕ್ಷ ಉತ್ತರ ಭಾರತದ ಹಲವಾರು ಭಾಷೆಗಳು ಸದರಿ ಪದವನ್ನು ತಾಜಾ ತಯಾರಿಕೆಗಳಿಗಾಗಿ ಮಾತ್ರವೇ ಬಳಸುತ್ತವೆ. ಪಾಕಿಸ್ತಾನಿ ಉಪ್ಪಿನಕಾಯಿ/ಅಚಾರ್ (ಹಿಂದಿ:अचार) ಎಂಬ ಒಂದು ವಿಭಿನ್ನ ಪದವು, ಎಣ್ಣೆಯನ್ನು ಒಳಗೊಂಡಿರುವ ಆದರೆ ಅಪರೂಪವಾಗಿ ಸಿಹಿಯಾಗಿರುವ ಮುರಬ್ಬಗಳಿಗೆ ಅನ್ವಯಿಸುತ್ತದೆ. ವಿನೆಗರ್ ಅಥವಾ ನಿಂಬೆಯ ರಸವನ್ನು ಸಂರಕ್ಷಣಕಾರಿಗಳಾಗಿ ಸೇರಿಸಬಹುದು, ಅಥವಾ ಆಮ್ಲವನ್ನು ಸೃಷ್ಟಿಸುವುದಕ್ಕಾಗಿ ಉಪ್ಪಿನ ಸಮ್ಮುಖದಲ್ಲಿ ಹುದುಗನ್ನು ಬಳಸಬಹುದು.
ಹಿಂದಿನ ಕಾಲದಲ್ಲಿ, ಕಲ್ಲಿನಿಂದ ಮಾಡಲಾದ ಒಂದು ಒರಳು ಮತ್ತು ಕುಟ್ಟಣಿಯನ್ನು ಅಥವಾ ಒಂದು ಅಮ್ಮಿಕ್ಕಲ್ ನ್ನು (ತಮಿಳು) ಬಳಸಿಕೊಂಡು ಚಟ್ನಿಗಳನ್ನು ರುಬ್ಬಲಾಗುತ್ತಿತ್ತು. ಈ ಆಧುನಿಕ ಕಾಲದಲ್ಲಿ, ಕಲ್ಲಿನ ಅಳವಡಿಕೆಗಳ ಜಾಗವನ್ನು ವಿದ್ಯುತ್ತಿನ ಮಿಶ್ರಣ ಯಂತ್ರಗಳು ಆಕ್ರಮಿಸಿಕೊಂಡಿವೆ. ವಾಡಿಕೆಯಂತೆ, ಒಂದು ನಿರ್ದಿಷ್ಟ ಕ್ರಮದಲ್ಲಿ ನಾನಾಬಗೆಯ ಮಸಾಲೆಗಳನ್ನು ಸೇರಿಸಲಾಗುತ್ತದೆ ಮತ್ತು ರುಬ್ಬಲಾಗುತ್ತದೆ; ಈ ರೀತಿಯಲ್ಲಿ ತಯಾರಾದ ಹಸಿಯಾದ ಜಲಪಿಷ್ಟವನ್ನು (ಪೇಸ್ಟ್ನ್ನು) ಸಸ್ಯಜನ್ಯ ತೈಲದಲ್ಲಿ, ಅಂದರೆ ಸಾಮಾನ್ಯವಾಗಿ ಎಳ್ಳೆಣ್ಣೆ ಅಥವಾ ಕಡಲೇಕಾಯಿ ಎಣ್ಣೆಯಲ್ಲಿ ಬೇಗನೆ ಹುರಿಯಲಾಗುತ್ತದೆ.