ಗಿಡಮೂಲಿಕೆಗಳ ಔಷಧಿ
From Wikipedia, the free encyclopedia
ವನಸ್ಪತಿ ಯು ಸಾಂಪ್ರದಾಯಿಕ ಅಥವಾ ಜಾನಪದ ಔಷಧ ಪ್ರಕಾರವಾಗಿದ್ದು, ಇದು ಸಸ್ಯ ಮತ್ತು ಸಸ್ಯಜನ್ಯ ಸಾರ, ಸತ್ವಗಳ ಬಳಕೆಯನ್ನವಲಂಭಿಸಿದೆ. ಈ ವನಸ್ಪತಿಯು ಸಸ್ಯಗಳ ಔಷಧಿ, ಔಷಧೀಯ ವನಸ್ಪತಿ, ಗಿಡಮೂಲಿಕೆಗಳ ಔಷಧಿ , ಮೂಲಿಕಾಶಾಸ್ತ್ರ ಮತ್ತು ಮೂಲಿಕಾ ಚಿಕಿತ್ಸೆ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.[1]
ಗಿಡಮೂಲಿಕೆಗಳ ಔಷಧಿಯ ವ್ಯಾಪ್ತಿಯು ಕೆಲವೊಮ್ಮೆ ಶಿಲೀಂಧ್ರಗಳು ಮತ್ತು ಜೇನುಹುಳುಗಳ ಉತ್ಪನ್ನಗಳಿಗೂ ಹರಡಿದ್ದು, ಖನಿಜಾಂಶಗಳು, ಚಿಪ್ಪುಗಳು ಹಾಗೂ ಕೆಲವು ಪ್ರಾಣಿಗಳ ದೇಹದ ಭಾಗಗಳನ್ನೂ ಒಳಗೊಂಡಿರುತ್ತವೆ.[1] ಔಷಧ ವಿಜ್ಞಾನ ಶಾಸ್ತ್ರವು ನೈಸರ್ಗಿಕ ಮೂಲಗಳಿಂದ ದೊರೆಯುವ ಔಷಧಗಳ ಬಗೆಗಿನ ಅಧ್ಯಯನವಾಗಿದೆ.
ಔಷಧಗಳ ಸಾಂಪ್ರದಾಯಿಕ ಬಳಕೆಯು ಭವಿಷ್ಯದ ಔಷಧಗಳ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಒಂದು ದಾರಿಯೆಂದು ಗುರುತಿಸಲ್ಪಟ್ಟಿದೆ. 2001ರಲ್ಲಿ ಸಂಶೋಧಕರು ಸುಮಾರು 122 ಸಂಯುಕ್ತಗಳನ್ನು ಪ್ರಚಲಿತ ಔಷಧಗಳ ಮುಖ್ಯವಾಹಿನಿಯಲ್ಲಿ ಬಳಸಿದ್ದು, ಇವೆಲ್ಲವೂ ಔಷಧ "ಜನಾಂಗೀಯಸಸ್ಯಗಳ" ಮೂಲಗಳಿಂದ ಪಡೆದವುಗಳಾಗಿವೆ. ಇವುಗಳಲ್ಲಿ ಶೇಕಡಾ 80 ಸಂಯುಕ್ತಗಳು ಇದೇ ರೀತಿಯ ಬಳಕೆಗೆ ಅಥವಾ ಇದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಔಷಧ ಜನಾಂಗೀಯ ಬಳಕೆಯಲ್ಲಿ ಉಪಯೋಗಿಸಲ್ಪಡುತ್ತವೆ.[2]
ಹಲವು ಸಸ್ಯಗಳು ಮಾನವರಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಬಳಸಬಹುದಾದಂತಹ ದ್ರವ್ಯಗಳನ್ನು ಉತ್ಪಾದಿಸುತ್ತವೆ. ಇವು ಸುವಾಸನಾಯುಕ್ತ ದ್ರವ್ಯಗಳಾಗಿದ್ದು ಇವುಗಳಲ್ಲಿ ಹೆಚ್ಚಿನವುಗಳು ಫೀನಾಲ್ಗಳು ಮತ್ತು ಇವುಗಳ ಆಕ್ಸಿಜನ್ ಪರಮಾಣುಗಳ ಆದೇಶವನ್ನು ಹೊಂದಿದ ಉತ್ಪನ್ನಗಳಾದ ಟ್ಯಾನಿನ್ಗಳು. ಹೆಚ್ಚಿನವುಗಳು ಚಯಾಪಚಯ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಎರಡನೇ ದರ್ಜೆಯ ವಸ್ತುಗಳಾಗಿದ್ದು ಕೇವಲ 12,000 ದ್ರವ್ಯಗಳನ್ನು ಈವರೆಗೆ ಪತ್ತೆಹಚ್ಚಲಾಗಿದ್ದು, ಇವುಗಳನ್ನು ಒಟ್ಟು ಪರಿಮಾಣದ ಶೇಕಡಾ 10ರಷ್ಟು ಮಾತ್ರ ಎಂದು ಅಂದಾಜುಗೊಳಿಸಲಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ಅಲ್ಕಲೋಯ್ಡ್ಗಳಂತಹ ದ್ರವ್ಯಗಳು ಸಸ್ಯಗಳಲ್ಲಿ ಪರಭಕ್ಷಕ ಸೂಕ್ಷಾಣುಜೀವಿಗಳಿಂದ, ಕೀಟಗಳಿಂದ ಮತ್ತು ಸಸ್ಯಾಹಾರಿ ಪ್ರಾಣಿಗಳಿಂದ ರಕ್ಷಣೆಯನ್ನೊದಗಿಸುವ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತವೆ. ಗಿಡಮೂಲಿಕೆಗಳಲ್ಲಿ ಹೆಚ್ಚಿನ ಸಸ್ಯಗಳು ಮತ್ತು ಸಸ್ಯವರ್ಗಗಳು ತಮ್ಮ ಸಮೃದ್ಧಿಕಾಲದಲ್ಲಿ ಔಷಧೀಯ ಸಂಯುಕ್ತಗಳನ್ನೊದಗಿಸುವ ಆಹಾರವಾಗಿ ಮನುಷ್ಯರಿಂದ ಬಳಸಲ್ಪಡುತ್ತವೆ.[3][4]
ಸೂಚಿಸಿದ ಔಷಧಿಗಳಂತೆಯೇ, ಅನೇಕ ಗಿಡಮೂಲಿಕೆಗಳೂ ಕೂಡಾ ಅರೋಗ್ಯದ ಮೇಲೆ ದುಷ್ಪರಿಣಾಮಗಳನ್ನುಂಟುಮಾಡುವಂತಹುದು ಎಂದು ತಿಳಿಯಲಾಗಿದೆ.[5] ಅದಕ್ಕಿಂತ ಹೆಚ್ಚಾಗಿ, ಕಲಬೆರಕೆ, ತಯಾರಿಕೆಯಲ್ಲಿ ಅಸಮರ್ಪಕ ಸೂತ್ರಗಳ ಬಳಕೆ ಅಥವಾ ಸಸ್ಯ ಮತ್ತು ಔಷಧಿಗಳ ಪರಸ್ಪರ ವರ್ತನೆಗಳ ಬಗ್ಗೆ ತಪ್ಪು ತಿಳುವಳಿಕೆಯು ಕೆಲವೊಮ್ಮೆ ದೇಹಕ್ಕೆ ಅಪಾಯ ತರಬಲ್ಲ ಮಾರಕವಾದ ಪ್ರತಿಕೂಲ ಪರಿಸ್ಥಿತಿಯನ್ನು ತಂದೊದಗಿಸಬಲ್ಲುದು.[6]
ಆದರೂ, ಅಂತಹ ಪ್ರತಿಕೂಲ ಔಷಧೀಯ ಘಟನೆಗಳು ರೂಢಿಯಲ್ಲಿರುವ ಔಷಧಿಗಳ ಎಡಿಆರ್ ಕಾರಣದಿಂದುಂಟಾದ ತನಿಖೆಗೆ ಹೋಲಿಸಿದಾಗ ಬಹಳ ಸಣ್ಣ ಪ್ರಮಾಣದ್ದಾಗಿದೆ. ಅಥವಾ ಆಸ್ಪತ್ರೆಯ ದಾಖಲಾತಿಯ 6 - 7% ಪ್ರಮಾಣವು ಎಡಿಆರ್ ಕಾರಣದಿಂದ ನಡೆಯುತ್ತವೆ.[7][8] ಉತ್ತಮ ವಿಧಾನಗಳಿಂದ ತಯಾರಿಸಲ್ಪಟ್ಟ ಗಿಡಮೂಲಿಕಾ ಉತ್ಪನ್ನಗಳು ಇತರ ಔಷಧಿಗಳಲ್ಲಿರುವುದಕ್ಕಿಂತ ಅತೀಸಣ್ಣ ಪ್ರಮಾಣದ ಎಡಿಆರ್ಗಳನ್ನು[9][10] ಮತ್ತು/ಅಥವಾ ಅಡ್ಡಪರಿಣಾಮಗಳನ್ನು ಹೊಂದಿದೆ[ಸೂಕ್ತ ಉಲ್ಲೇಖನ ಬೇಕು][11][12]